ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ? ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು. ಇದನ್ನು ಅನುಸರಿಸಲು ಪ್ರಾರಂಭಿಸಿದ ನಮ್ಮ ಹಿರಿಯರಿಂದ ಈ ಬೆಳವಣಿಗೆ ಭಾರತದಲ್ಲಿಯೂ ಆಯಿತು ಎಂದು ಕೆಲವು ಮಾಹಿತಿಗಳಿಂದ ತಿಳಿದುಬರುತ್ತದೆ.
ಹಾಗೆಯೇ ಬರೀ ಹೊಟ್ಟೆಯಲ್ಲಿ ಹಾಲಿನ ಟೀ ಕುಡಿಯುವುದು ಸಹ ಹಾನಿಯುಂಟು ಮಾಡುತ್ತದೆ. ಏಕೆಂದರೆ ಹೆಚ್ಚು ಹಾಲು ಬಳಸಿ ಚಹಾ ಕುಡಿದರೆ ನಿಮ್ಮಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಲು ಹಾಕಿದ ಚಹಾ ದೇಹದ ಉತ್ಕರ್ಷಣ ನಿರೋಧಕ ಅಂಶವನ್ನು ನಿರ್ನಾಮ ಮಾಡುತ್ತದೆ. ಇದರಿಂದ ಆಯಾಸದಂತಹ ತೊಂದರೆಗಳು ಕಾಡಬಹುದು.
ಅದೇ ರೀತಿ ಕಡಿಮೆ ಹಾಲು ಬಳಸಿ ಸ್ಟ್ರಾಂಗ್ ಟೀ ಕುಡಿಯುವುದು ಕೂಡ ಹಾನಿಕಾರಕ ಎನ್ನುತ್ತೆ ಅಧ್ಯಯನ ತಂಡ. ಖಾಲಿ ಹೊಟ್ಟೆಯಲ್ಲಿ ಸ್ಟ್ರಾಂಗ್ ಟೀ ಕುಡಿಯುವುದರಿಂದ ಜೀರ್ಣ ಕ್ರಿಯೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅನೇಕ ರೀತಿ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಲು ಇದು ಕೂಡ ಕಾರಣ.
ಬೆಡ್ ಟೀ ಎಂಬ ಹೆಸರಿನಲ್ಲಿ ಖಾಲಿಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಮೊದಲಿಗೆ ಇದರಲ್ಲಿರುವ ಕೆಫೀನ್ ಜಠರ ರಸವನ್ನು ಹೆಚ್ಚಾಗಿ ಸ್ರವಿಸಲು ಪ್ರಚೋದಿಸುತ್ತದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ.
ಟೀ ಸೇವನೆಯಿಂದ ಮನೋಭಾವ ಉಲ್ಲಸಿತಗೊಂಡರೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಈ ಅಭ್ಯಾಸವನ್ನು ಬಿಡುವುದೇ ಒಳ್ಳೆಯದು. ಬನ್ನಿ, ಈ ಬಗ್ಗೆ ಹತ್ತು ಪ್ರಮುಖ ಮಾಹಿತಿಗಳನ್ನು ನೋಡೋಣ…
ಜೀವರಾಸಾಯನಿಕ ಚಟುವಟಿಕೆ
ಜೀವರಾಸಾಯನಿಕ ಚಟುವಟಿಕೆಯನ್ನು ಏರುಪೇರುಗೊಳಿಸುತ್ತದೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಜೀವರಾಸಾಯನಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುತ್ತದೆ. ಜಠರರಸದ ಆಮ್ಲೀಯತೆ-ಕ್ಷಾರೀಯತೆಯ ಸಮತೋಲನ ತಪ್ಪುವುದೇ ಇದಕ್ಕೆ ಕಾರಣ. ಇದರಿಂದ ಸರಾಗವಾಗಿ ಜರುಗುತ್ತಿರುವ ಜೀವರಾಸಾಯನಿಕ ಕ್ರಿಯೆ ಏರುಪೇರಾಗುತ್ತದೆ ಹಾಗೂ ಈ ಮೂಲಕ ದೇಹದಲ್ಲಿ ಕೆಲವಾರು ತೊಂದರೆಗಳು ಎದುರಾಗಬಹುದು.
ಹಲ್ಲುಗಳು ಹೆಚ್ಚು ಸವೆಯುತ್ತವೆ
ಹಲ್ಲುಗಳು ಹೆಚ್ಚು ಸವೆಯುತ್ತವೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವೆಯುತ್ತದೆ. ಏಕೆಂದರೆ ರಾತ್ರಿಯ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚೇ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆಯನ್ನು ಒಡೆದು ಚಿಕ್ಕದಾಗಿಸಿರುತ್ತವೆ. ಪರಿಣಾಮವಾಗಿ ಬಾಯಿಯ ಆಮ್ಲೀಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬಿಸಿ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ಸಡಿಲವಾಗಿದ್ದ ಹಲ್ಲುಗಳ ಹೊರಪದರದ ಕಣಗಳು ಸುಲಭವಾಗಿ ತೊಳೆದುಹೋಗುತ್ತವೆ. ಇದು ಹಲ್ಲುಗಳ ಸವೆಯುವಿಕೆಗೆ ಕಾರಣವಾಗುತ್ತದೆ.
ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣ
ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಟೀ ಉತ್ತಮ ಮೂತ್ರವರ್ಧಕವಾಗಿದೆ ಹಾಗೂ ಈ ಮೂಲಕ ದೇಹದಿಂದ ನೀರನ್ನು ಹೆಚ್ಚೇ ಹೊರಹಾಕುತ್ತದೆ. ಸುಮಾರು ಎಂಟು ಘಂಟೆಗಳ ಕಾಲ ಮಲಗಿದ್ದ ಸಮಯದಲ್ಲಿ ನೀರು ಲಭಿಸದೇ ಮುಂಜಾನೆ ಎದ್ದಾಗ ನಮ್ಮ ದೇಹದಿಂದ ಹೆಚ್ಚಿನ ನೀರು ಖಾಲಿಯಾಗಿರುತ್ತದೆ. ಈಗ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ದೇಹದಿಂದ ಹೆಚ್ಚು ನೀರು ಹೊರಹೋಗಲು ಪ್ರೇರಣೆ ದೊರಕುತ್ತದೆ ಹಾಗೂ ನೀರಿನ ಕೊರತೆಯಿಂದ ಸ್ನಾಯುಗಳಲ್ಲಿ ಸೆಡೆತವುಂಟಾಗುತ್ತದೆ.
ಹೊಟ್ಟೆಯುಬ್ಬರಿಕೆ
ಹೊಟ್ಟೆಯುಬ್ಬರಿಕೆ ಉಂಟಾಗುತ್ತದೆ ಒಂದು ವೇಳೆ ಖಾಲಿಹೊಟ್ಟೆಯಲ್ಲಿ ಹಾಲಿರುವ ಟೀ ಕುಡಿದಾಗ ಹೊಟ್ಟೆಯುಬ್ಬರಿಕೆಯುಂಟಾಗುತ್ತದೆ. ಏಕೆಂದರೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲ್ಯಾಕ್ಟೋಸ್ ಖಾಲಿಹೊಟ್ಟೆಯಲ್ಲಿ ಜೀರ್ಣರಸಗಳೊಂದಿಗೆ ಪ್ರತಿಕ್ರಿಯೆಗೆ ಒಳಗಾದಾದ ವಾಯು ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಿಕೆ, ವಾಯುಪ್ರಕೋಪ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ.
ಹೀಗಾಗಿ ಚಹಾ ಮನಸ್ಸಿಗೆ ಮುದ ನೀಡುವ ಪಾನೀಯವಾಗಿದ್ದರೂ, ಯಾವಾಗ ಯಾವ ರೀತಿಯಲ್ಲಿ ಕುಡಿಯಬೇಕು ಎಂಬುದರ ಬಗ್ಗೆಯು ಗೊತ್ತಿರಲಿ.
ಉಡುಪಿ: ಮೇ 12 ರಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ 518 ವಿದ್ಯಾರ್ಥಿಗಳಿಗೆ 42 ಲಕ್ಷ ಮೊತ್ತದ ವಿದ್ಯಾರ್ಥಿ…
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…