ಬೆಳ್ತಂಗಡಿ: ಮಂಗಳೂರಿನ ಕಾಲೇಜು ಸೇರಲು ಕಿಟ್ರ್ಯಾಪ್ ಡ್ರಾಮಾ ಸೃಷ್ಟಿಸಿದ ಕಾಲೇಜು ಕನೈಯ ನಾಟಕ ಪೊಲೀಸ್ ತನಿಖೆಯಲ್ಲಿ ಬದಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೋಮವಾರ ನಡೆದಿದೆ ಎನ್ನಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಕಿಡ್ನಾಪ್ ಯತ್ನ ಪ್ರಕರಣ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಮೂವರು ಕಾರಿನಲ್ಲಿ ಬಂದು ಕಿಟ್ರ್ಯಾಪ್‌ಗೆ ಯತ್ನಿಸಿದ್ದಲ್ಲದೆ, ಕೈಗೆ ಚೂರಿಯಿಂದ ಇರಿದಿದ್ದಾರೆ. ಅದೇ ಸಂದರ್ಭ ಯಾರೋ ವ್ಯಕ್ತಿಯೋರ್ವರು ಬಂದಿದ್ದರಿಂದ ಅಪಹರಣಕಾರರು ತನ್ನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಳು.
ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಭೇಟಿಯಾಗಲು ಶಾಸಕ ಹರೀಶ್ ಪೂಂಜಾ ಕೂಡ ದೌಡಾಯಿಸಿ ಮಾತುಕತೆ ನಡೆಸಿದ್ದರು. ಬೆಳ್ತಂಗಡಿ ಪೊಲೀಸರಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಯಿಸಿದ್ದರು. ನಿನ್ನೆ ಇಡೀ ದಿನ ಪೊಲೀಸರು ಈ ಬಗ್ಗೆ ಕಣ್ಣಿಗೆ ಎಣ್ಣೆ ಬಿಟ್ಟು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಬಾಲಕಿಯ ಕಿಟ್ರ್ಯಾಪ್ ಡ್ರಾಮಾ ಬಯಲಿಗೆ ಬಂದಿದ್ದು, ಆಕೆಯ ಬಾಯಿಂದಲೇ ಕಟ್ಟುಕತೆ ಬಯಲಾಗಿದೆ. ಆಕೆಗೆ ಮಂಗಳೂರಿನಲ್ಲಿರುವ ಪಿಯುಸಿ ಕಾಲೇಜು ಸೇರ್ಪಡೆಯಾಗಬೇಕಿತ್ತು. ಆದರೆ ಮನೆಯವರು ಬೆಳ್ತಂಗಡಿಯಲ್ಲೇ ಕಾಲೇಜಿಗೆ ಸೇರಿಸಿದ್ದರು.
ಆದ್ದರಿಂದ ಕಿಟ್ರ್ಯಾಪ್ ಡ್ರಾಮಾ ಮಾಡಿದ್ದಲ್ಲಿ ಮನೆಯವರು ಮಂಗಳೂರಿನ ಪಿಯುಸಿ ಕಾಲೇಜಿಗೆ ಸೇರಿಸುತ್ತಾರೆ ಅನ್ನುವ ಸ್ಕ್ಯಾನ್ ಮಾಡಿದ್ದಳು.
ಅದಕ್ಕಾಗಿ ಆಕೆ ತಾನೇ ಕಿಟ್ರ್ಯಾಪ್ ಡ್ರಾಮಾ ಸೃಷ್ಟಿಸಿದ್ದಳು. ಬ್ಯಾಗ್‌ನಲ್ಲಿರೋ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದಳು. ಶಾಲಾ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಳು. ವಿದ್ಯಾರ್ಥಿನಿ ಸ್ಕೂಟಿಯನ್ನು ನಿಲ್ಲಿಸಿ ಬೇಡ್‌ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು. ಒಟ್ಟಿನಲ್ಲಿ ಕಾಲೇಜು ಕನೈಯ ನಾಟಕಕ್ಕೇ ಪೊಲೀಸರೇ ಸುಸ್ತುಬೀಳುವಂತಾಗಿದೆ.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…