ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲು ಚಾರಣ ತಾಣವು ಸೆ. 17ರಿಂದ ಪ್ರವಾಸಿಗರಿಗೆ ಮತ್ತೆ ಮುಕ್ತವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸುರಕ್ಷ ದೃಷ್ಟಿಯಿಂದ ಜು. 8ರಿಂದ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದ್ದು,ಚಾರಣಕ್ಕೆ ಅನುಕೂಲಕರ ವಾತಾವರಣ ಇರುವ ಹಿನ್ನೆಲೆಯಲ್ಲಿ ವನ್ಯ ಜೀವಿ ವಿಭಾಗವು ಪ್ರವಾಸಿಗರಿಗೆ ಗಡಾಯಿಕಲ್ಲು ಏರಲು ಅವಕಾಶ ಕಲ್ಪಿಸಿದೆ.
ದಿನಕ್ಕೆ ಗರಿಷ್ಠ 500 ಪ್ರವಾಸಿಗರಿಗೆ ಮಾತ್ರ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಇರಲಿದೆ. ಪ್ರವಾಸಿಗರು ಮುಂಗಡವಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಹಾಗೂ ಬುಕ್ಕಿಂಗ್ ಮಾಡಿಕೊಳ್ಳಬೇಕು. ಬಳಿಕ ನಿಗದಿತ ದಿನದಂದು ಗಡಾಯಿಕಲ್ಲು ಪ್ರವೇಶ ಸ್ಥಳಕ್ಕೆ ಆಗಮಿಸಿ ನಿಗದಿತ ಶುಲ್ಕ ಪಾವತಿಸಿ ಚಾರಣ ಕೈಗೊಳ್ಳಬಹುದು ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಅಧಿಕಾರಿ ಶರ್ಮಿಷ್ಟಾ ಅವರು ಮಾಹಿತಿ ನೀಡಿದ್ದಾರೆ.
'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…
ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ : ಚಾಲಕನ ನಿಯಂತ್ರಣ…
ಮಂಗಳೂರು : ಜೈಲಿನಲ್ಲಿ ಗಲಾಟೆ ;ಅಡುಗೆಮನೆ ಸ್ಫೋಟಿಸುವುದಾಗಿ ಕೈದಿ ಬೆದರಿಕೆ ಮಂಗಳೂರು,: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ…
ಕುಂದಾಪುರ: ಮೀನುಗಾರರ ಹಿತ ಕಾಯಲು ಸರಕಾರ ಬದ್ಧ: ಸಚಿವ ಬಸವಂತಪ್ಪ ಕುಂದಾಪುರ: ಮೀನುಗಾರಿಕೆ ವಲಯದ ಜ್ವಲಂತ ಸಮಸ್ಯೆಗಳ ಕುರಿತು ಅರಿಯಲು,…
ಬೆಂಗಳೂರು: ಯುವತಿಯ ಅಪಹರಣ ಯತ್ನದಲ್ಲಿ ಸರಣಿ ಅಪಘಾತ.. 35ಕ್ಕೂ ಹೆಚ್ಚು ವಾಹನಗಳಿಗೆ ಕಾರು ಡಿಕ್ಕಿ .. ಮೂವರು ಆರೋಪಿಗಳು ಪೊಲೀಸರ…
ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯ ಲೋಕಾರ್ಪಣೆಗೆ ಅಗತ್ಯ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ…