ಬೆಳ್ತಂಗಡಿ, : ತನ್ನದೇ ಸ್ವಂತ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಎಂಜಿನಿಯರ್ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಮಾಲಾಡಿ ಸಮೀಪ ಅರ್ಕುಲ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಬಾಂಬಿಲ ಸನಿಹದ ಮದ್ದ ನಿವಾಸಿ ಮಾಝಿನ್ (26) ಎಂಬವರೇ ಮೃತಪಟ್ಟವರು.
ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ : ಪ್ರಮೋದ ಮುತಾಲಿಕ್ -Vishwanews24
ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಇವರ ಬೈಕಿಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ರಸ್ತೆಯಲ್ಲಿ ಬೈಕ್ ಉರುಳಿ, ಅದರ ಪಕ್ಕದಲ್ಲೇ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಗಾಯಾಳುವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮದ್ದಡ್ಕದಲ್ಲಿ ತನ್ನದೇ ಕಚೇರಿ ಉದ್ಘಾಟನೆಯ ಎಲ್ಲಾ ತಯಾರಿ ಮುಗಿಸಿಕೊಂಡಿದ್ದ ಮಾಝಿನ್ ಅತಿಥಿಗಳು ಆಗಮಿಸುವ ಮುನ್ನ ವಸ್ತ್ರ ಬದಲಾಯಿಸಿ ಬರಲೆಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೃತರ ಸ್ನೇಹಿತರು ಮಾಹಿತಿ ನೀಡಿದ್ದಾರೆ.
ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು…
ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರಿಂದ ಕ್ರಿಮಿನಾಶಕ ಔಷಧಿ ಸಿಂಪಡಿಕೆ.. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿ ವಿಷವಾಗಿ ಮಾರ್ಪಟ್ಟು ಇಡೀ…
ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು ಉಡುಪಿ:ಬಹುಕೋಟಿ ವಂಚನೆ…
ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ - ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ ತೀರ್ಥಹಳ್ಳಿ: ಲೈಂಗಿಕ ದೌರ್ಜನ್ಯಕ್ಕೆ…
ರಾಮ ಮಂದಿರದಲ್ಲಿ ನಡೆದ ಘಟನೆ ಅವಮಾನಕರ; ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ :ಸಿಎಂ ಡಿ.ಕೆ. ಶಿ ಬೆಳಗಾವಿ: ಮುಜರಾಯಿ…
ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮುಂಬಯಲ್ಲಿ ಉಡುಪಿ ಮೂಲದ ಮಹಿಳೆ ಬಂಧನ ಮುಂಬೈ,: ಷೇರು…