ಬೆಳ್ತಂಗಡಿ: ಭಾರೀ ಸಿಡಿಲೊಂದು ಬಡಿದು ತೆಂಗಿನಮರ ಸುಟ್ಟಿರುವ ಘಟನೆ ಇಲ್ಲಿನ ಸನಿಹದ ಪೆಟ್ರೋಲ್ ಪಂಪ್‍ನ ಬಳಿ ಮಂಗಳವಾರ ನಡೆದಿದೆ.
ಸಂಜೆ 3ರ ಬಳಿಕ ಏಕಾಏಕಿ ಮಳೆ ಸಿಡಿಲು ಮಿಂಚು ಆವರಿಸಿತ್ತು. ಸುಮಾರು 4 ಗಂಟೆ ಸಮಯಕ್ಕೆ ಸಿಡಿಲು ತೆಂಗಿನ ಮರಕ್ಕೆ ಬಡಿದ ಪರಿಣಾಮ ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿದಿತ್ತು. ಸಮೀಪದಲ್ಲೆ ಪೆಟ್ರೋಲ್ ಬಂಕ್ ಇದ್ದು ಸ್ಥಳದಲ್ಲಿದ್ದವರಿಗೆ ವಿದ್ಯುತ್ ಸ್ಪರ್ಶದ ಅನುಭವವಾಗಿದೆ. ಪೆಟ್ರೋಲ್ ಬಂಕ್ ಪಂಪ್ ಕೈಕೊಟ್ಟಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಹೆಚ್ಚಾದ್ದರಿಂದ ಬೆಂಕಿ ತನ್ನಿಂತಾನೆ ಆರಿದೆ. ತಾಲೂಕಿನ ಕಾಯರ್ತಡ್ಕ ಸೇರಿದಂತೆ ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ರಸ್ತೆ ಜಲಾವೃತವಾಗಿತ್ತು. ಸಂಜೆಯಾಗುತ್ತಲೆ ಸಿಡಿಲು ಗುಡುಗು ಹೆಚ್ಚಾಗಿತ್ತು.
ಕಳೆದ ಒಂದು ವಾರದಿಂದೀಚೆಗೆ ತಾಲೂಕಿನಲ್ಲಿ ಬೆಳಗಿನಿಂದ ಸಂಜೆಯವರೆಗೆ ಬಿಸಿಲಿನ ಧಗೆ ಬಳಿಕ ಸಿಡಿಲು ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿರುವುದು ಮಾಮೂಲಾಗಿದೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…