ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ರಾತ್ರಿ ಮೃತದೇಹ ಹೊರತೆಗೆಯಲಾಗಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ ಸುಮಾರು 5ರಿಂದ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕದಳದವರು ರಾತ್ರಿ11ರ ಸುಮಾರಿಗೆ ಮೃತದೇಹ ಮೇಲೆತ್ತಿದ್ದಾರೆ.
ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು.
ಅಂತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ
ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ…
ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್ ಸಾವು ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು…
ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ…
ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ…
ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ ಕುಂದಾಪುರ : ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ…
2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು .. ಅಕ್ರಮ ನಡೆದಿದ್ದರೆ 2018ರ ಹಿಂದೆ…