ಬೆಳ್ತಂಗಡಿ: ಸಮರ್ಪಕವಾದ ದಾಖಲೆಗಳಿಲ್ಲದೆ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನ ಸಾಗಾಟವನ್ನು ಪತ್ತೆಹಚ್ಚಿದ್ದು ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು ದನಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕೊಟ್ಟಿಗೆಹಾರ ನಿವಾಸಿಗಳಾದ ಅಶ್ವಥ್ (34)ಹಾಗೂ ಸಚಿನ್ (27) ಬಂಧಿತ ಆರೋಪಿಗಳು. ಯಾವುದೇ ಪರವಾನಿಗೆಯಿಲ್ಲದೇ ಗೋ ಸಾಗಾಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಶುಕ್ರವಾರ ರಾತ್ರಿ ವೇಳೆ ಮದ್ದಡ್ಕದಲ್ಲಿ ಪರಿಶೀಲನೆ ಮಡೆಸಿದಾಗ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ.
ಗೂಡ್ಸ್ ವಾಹನದಲ್ಲಿ ಎರಡು ದನಗಳು, ಒಂದು ಕರು, ಹಾಗೂ ಒಂದು ಹೋರಿಯನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಆರೋಪಿಗಳ ಬಳಿ ಯಾವುದೇ ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ದನಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…
ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…
ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…
ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…
ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…