ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಬಯಲು ಎಂಬಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.
ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ರವರ ಪುತ್ರ ಉಮೇಶ( 38.ವ) ಎಂಬವರೇ ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನೆರಿಯದ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೆರಿಯ ಬಯಲು ಎಂಬಲ್ಲಿ ಯುವಕರ ತಂಡವೊಂದು ಸ್ವಾಗತದ್ವಾರ ನಿರ್ಮಿಸುತ್ತಿದ್ದರು ಎನ್ನಲಾಗಿದೆ. ಅವರು ನಿರ್ಮಿಸುತ್ತಿದ್ದ ದ್ವಾರದ ಮೇಲ್ಗಡೆ ಹೆಚ್‌ಪಿಸಿಎಲ್ ನೆರಿಯ ಪಂಪ್ ಹೌಸ್‌ಗೆ ಹಾದು ಹೋದ ಹೈಟೆನ್ಶನ್ ವಿದ್ಯುತ್ ಲೈನ್ ಇತ್ತು.
ರಾತ್ರಿ ಹೇರಿರುವ ಕರ್ಪ್ಯೂ ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು : ಸಿದ್ದರಾಮಯ್ಯ -Vishwanews24
ದ್ವಾರಕ್ಕೆ ಬಿದಿರು ಅಳವಡಿಸುವ ಸಮಯ ಹೈಟೆನ್ಶನ್ ವಿದ್ಯುತ್ ಲೈನಿಗೆ ಆಕಸ್ಮಿಕವಾಗಿ ತಾಗಿ ವಿದ್ಯುತ್ ಶಾಕ್ ಸಂಭವಿಸಿದೆೆ ಎನ್ನಲಾಗಿದೆ .
ಘಟನೆಯಿಂದ ವಿದ್ಯುತ್ ಪ್ರವಹಿಸಿ ಉಮೇಶರವರು ಗಂಭೀರಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನೋರ್ವ ಪರ್ಲ ನಿವಾಸಿ ಅಣ್ಣು ಗೌಡರ ಪುತ್ರ ಗಂಗಾಧರ ಎಂಬವರಿಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಕೋವಿಡ್ ಲಸಿಕಾ ಉತ್ಸವಕ್ಕೆ ಸಕಲ ಸಿದ್ಧತೆ : ಸುಧಾಕರ್ -Vishwanews24
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…
ಮಂಗಳೂರು: ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…
ಉಡುಪಿ: ಬಡಗುಬೆಟ್ಟು ಸೊಸೈಟಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ; 15 ಲಕ್ಷ ಮೌಲ್ಯದ ಪರಿಕರ ವಿತರಣೆ ಉಡುಪಿ: ಸಹಕಾರ…
ಇಂದು ಮಂಗಳೂರಿಗೆ ಶಾರುಕ್ ಖಾನ್ ಆಗಮನ : ಸಾರ್ವಜನಿಕರಿಗೆ ಪೋಲಿಸರ ಮಾರ್ಗಸೂಚಿ ಪ್ರಕಟ ಮಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ…
ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ …
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ; ಸಿನಿಮಾಗಳಿಂದ ತಾತ್ಕಾಲಿಕ ಬ್ರೇಕ್ ನಟಿ ಸಮಂತಾ ರುತ್ ಪ್ರಭು ತಾವು ಮೊದಲ…