Featured

ಬೆಳ್ತಂಗಡಿ : ಸಾಲ ಕಟ್ಟದೇ, ನಕಲಿ ಪತ್ರ ತಯಾರಿಸಿ ಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ – vishwanews24

ಬೆಳ್ತಂಗಡಿ : ಸಾಲ ಕಟ್ಟದೇ, ನಕಲಿ ಪತ್ರ ತಯಾರಿಸಿ ಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ

ಬೆಳ್ತಂಗಡಿ : ವಾಹನವೊಂದಕ್ಕೆ ಬ್ಯಾಂಕ್ ಆಫ್ ಬರೋಡದಿಂದ ತೆಗೆದ ಲಕ್ಷಾಂತರ ರೂ ಸಾಲವನ್ನು ಕಟ್ಟದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಪೋರ್ಜರಿ ಸಹಿಯನ್ನು ಲೆಟರ್ ಹೆಸ್ ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ.

ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವರ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ವೀರ್ ಅವರು ಅಶೋಕ್ ಲೈಲಾಂಡ್ ಕಂಪೆನಿಯ ಲಾರಿ ಪಡೆದುಕೊಳ್ಳಲು 2023 ಮಾ.16 ರಂದು ಬ್ಯಾಂಕ್ ಆಫ್ ಬರೋಡದ ಉಪ್ಪಿನಂಗಡಿ ಶಾಖೆಯಿಂದ ತಾಯಿ ನೆಬಿಶಾ ರವರು ನೀಡಿದ ಜಾಮೀನು ಮೇಲೆ 45 ಲಕ್ಷ ರೂ ಸಾಲವನ್ನು ಪಡೆದಿದ್ದರು. ಈ ವಾಹನವನ್ನು ಆರೋಪಿ ತನ್ವೀರ್ ಅವರು 2024 ರ ಆ.22 ರಂದು ಜುನೈದ್ ಮೆಲ್ಕಾರ್ ರವರಿಗೆ ಜಿಪಿಎ ( ಜನರಲ್ ಫವರ್ ಅಫ್ ಎಟರ್ನಿ) ಯ ಮೂಲಕ ವಾಹನದ ಜವಬ್ದಾರಿ ನೀಡಿದ್ದಾರೆ.

ಇದರ ಬಳಿಕ 2024 ರ ಡಿ.16 ರಂದು ತನ್ವೀರ್ ಅವರು ಬ್ಯಾಂಕಿನ ಅಧಿಕಾರಿಯ ಪೋರ್ಜರಿ ಸಹಿಯನ್ನು ಬ್ಯಾಂಕಿನ ಲೆಟರ್ ಹೆಡ್ ನ ಅಡಿಯಲ್ಲಿ ತಯಾರಿಸಿ ಅದರಲ್ಲಿ ಬ್ಯಾಂಕ್ ಆಫ್ ಬರೋಡ ಉಪ್ಪಿನಂಗಡಿ ಶಾಖೆಯಲ್ಲಿರುವ ವಾಹನದ ಸಾಲ ಸಂಪೂರ್ಣ ಸಂದಾಯವಾಗಿರುತ್ತದೆ ಮತ್ತು ಪತ್ರದ ಆಧಾರದಲ್ಲಿ ಆರ್.ಟಿ.ಒ.ಬಂಟ್ವಾಳ ಕಚೇರಿಯಲ್ಲಿ ಋಣಭಾರವನ್ನು ತೆಗೆದು ಹಾಕಬಹುದು ಎಂದು ದೃಡಪತ್ರವನ್ನು ಬ್ಯಾಂಕ್ ಗೆ ವಂಚಿಸಿ, ಅರ್.ಟಿ.ಒ ಬಂಟ್ವಾಳಕ್ಕೆ ನೀಡಿದ್ದಾರೆ.

ಆರ್.ಟಿ.ಒ.ಬಂಟ್ವಾಳ ಕಚೇರಿಯಿಂದ ಸಿಕ್ಕಿದ ನಿರಪೇಕ್ಷಣಾ ಪತ್ರ ಪಡೆದ ಆಧಾರದಂತೆ ರಮೀಝ್ ಆಲಿಶ್ ಅವರು ಪೂರ್ವನಿರ್ಧರಿತ ಷಡ್ಯಂತ್ರವನ್ನು ಮಾಡಿ ಇವರ ಹೆಸರಿಗೆ ಲಾರಿಯನ್ನು ವರ್ಗಾವಣೆಯನ್ನು ಮಾಡಿಕೊಂಡಿರುತ್ತಾರೆ. ಈ ಎಲ್ಲಾ ವಂಚನೆಯನ್ನು ನಾಲ್ಕು ಮಂದಿ ಸೇರಿ ಮಾಡಿರುವ ಕಾರಣಕ್ಕಾಗಿ ನಾಲ್ವರ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago