ಬೆಳ್ತಂಗಡಿ: ಹೊಸ ವರ್ಷದ ಪಾರ್ಟಿಯಲ್ಲಿ ಯುವಕರ ನಡುವೆ ಗಲಾಟೆಯಾಗಿ ಓರ್ವ ತನ್ನ ಗೆಳೆಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಪಿಲ್ಯದಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಯುವಕ ಮೂಗು ತುಂಡರಿಸಿಕೊಂಡ ವ್ಯಕ್ತಿ.
ಸ್ನೇಹಿತ ರಾಕೇಶ್ ಕೃತ್ಯ ಎಸಗಿದಾತ. ಮೂಲತಃ ಮೂಡಿಗೆರೆ ತಾಲೂಕಿ ನವನಾಗಿರುವ ರಾಕೇಶ್ ಪ್ರಸ್ತುತ ಪಿಲ್ಯದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂದರ್ಭದಲ್ಲಿ ಯುವಕರ ತಂಡ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ರಾಕೇಶ್ ಎಂಬಾತ ದೀಕ್ಷಿತ್ ಎಂಬಾತನ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ.
ಗಂಭೀರ ಗಾಯಗೊಂಡ ದೀಕ್ಷಿತ್‌ನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಗೆ ದಾಖಲಿಸಲಾ ಗಿದೆ. ವೇಣೂರು ಪೊಲೀಸರು ಗಾಯಾಳುವಿನ ಹೇಳಿಕೆ ಪಡಕೊಂಡಿದ್ದಾರೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…