ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ಉಪ್ಪುಂದ ಇಲ್ಲಿನ ಅಧಿಕಾರಿಗಳು ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದಲ್ಲಿ ಈ ಹಿಂದೆ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ನಾವುಂದ ಗ್ರಾಮದ ಸುಭಾಶ್ಚಂದ್ರ(39) ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ಮರವಂತೆ ಗ್ರಾಮದ ದೀಪಕ್ ಕುಮಾರ್(35) ಎಂಬವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು 2023- 2024ನೇ ಸಾಲಿನಲ್ಲಿ ಒಟ್ಟು 80,91,996ರೂ. ಹಣವನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಮೋಸ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
2023-2024ರ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ವಿಚಾರ ಸಂಘದ ಗಮನಕ್ಕೆ ಬಂದಿರುವುದಾಗಿ ಪ್ರಭಾರ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಶ್ರೀನಿವಾಸ ಕೆ. ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಎ.10ರಂದು ನೇರ ಸಂದರ್ಶನ ಉಡುಪಿ: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟವರ್ಸ್‌ನ ಹರ್ಷ ರೀಟೇಲ್…
ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ ಮಂಗಳೂರು: ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ…
ಪಡುಬಿದ್ರಿ : ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ; ₹1.50 ಲಕ್ಷ ಕಳೆದುಕೊಂಡ ಮಹಿಳೆ ಪಡುಬಿದ್ರಿ: ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ…
ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ: ಬಿಜೆಪಿಯಿಂದ ತೀವ್ರ ಹೋರಾಟದ ಎಚ್ಚರಿಕೆ ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ…
ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸ ಬಂದಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಪ್ರವಾಸ…
ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ ಹಿಂದಿ ಭಾಷೆ ಹೇರಿಕೆ ಹುನ್ನಾರ…