Featured

ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಉಚ್ಚಾಟಿಸಲಾಗಿದೆ : ಜಿತೇಂದ್ರ ಶೆಟ್ಟಿ  – vishwanews24

ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಉಚ್ಚಾಟಿಸಲಾಗಿದೆ : ಜಿತೇಂದ್ರ ಶೆಟ್ಟಿ

ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್‌ರವರನ್ನು ಪಕ್ಷ ವಿರೋಧಿ ಚಟುವಟಿಕೆಯಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿರುತ್ತೇವೆ.

ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೊಮ್ಮಾರಬೆಟ್ಟು ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಸ್ಪಷ್ಟ ಬಹುಮತದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಒಡಕು ಮೂಡಿಸಿ ಎರಡು ಬಾರಿ ಕಾಂಗ್ರೆಸ್ ಪಕ್ಷ ಹಿಂಬಾಗಿಲಿನಿಂದ ಆಡಳಿತ ನಡೆಸಿದ್ದು, ಗ್ರಾಮದ ಜನಸಾಮಾನ್ಯರಿಗೆ ತಿಳಿದ ವಿಚಾರ. ಅಂತೆಯೇ 2023ರ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಈ ತಂತ್ರ ವಿಫಲಗೊಳಿಸುವ ಸಲುವಾಗಿ ಉಚ್ಚಾಟಿತ ಸದಸ್ಯ ಮತ್ತು ಆತನೊಂದಿಗೆ ಇದ್ದ ಸದಸ್ಯರೊಂದಿಗೆ ಬೊಮ್ಮಾರಬೆಟ್ಟುವಿನ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಡೆದಿರುತ್ತದೆ.

ಈ ಹೊಂದಾಣಿಕೆಯಿಂದ ಆತ ಉಪಾದ್ಯಕ್ಷನಾಗಿರುತ್ತಾನೆ. ಆದರೆ ಈತನನ್ನು ಈವರೆಗೂ ಪಕ್ಷಕ್ಕೆ ಮರುಸೇರ್ಪಡೆಗೊಳಿಸದೆ ಉಚ್ಚಾಟನೆಯನ್ನು ರದ್ದು ಮಾಡಿರುವುದಿಲ್ಲ ಮತ್ತು ಪಕ್ಷದ ಯಾವುದೇ ಜವಾಬ್ದಾರಿ ನೀಡಿರುವುದಿಲ್ಲ ಹಾಗಾಗಿ ಈತನ ಯಾವುದೇ ಕಾರ್ಯವೈಖರಿಗೆ ಬಿಜೆಪಿ ಪಕ್ಷ ಬೆಂಬಲಿಸುವುದಿಲ್ಲ ಮತ್ತು ಈತನೊಂದಿಗೆ ಪಂಚಾಯತ್‌ ಸದಸ್ಯ ಶಾಸಕರ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದವನನ್ನು ಈ ಘಟನೆ ನಡೆದ ತಕ್ಷಣವೇ ಶಾಸಕರು ಕಚೇರಿಯಿಂದ ವಜಾಗೊಳಿಸಿರುತ್ತಾರೆ.

ದಿನಾಂಕ 01-09-2025 ರಂದು ಹಿರಿಯಡ್ಕ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ ಸಂದರ್ಭ ಕೆಲವು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಮಹಿಳಾ ಅಧ್ಯಕ್ಷರನ್ನು ನಿಂದಿಸುವುದು ಖಂಡನೀಯ ಇವತ್ತಿನ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಗ್ರಾಮ ಪಂಚಾಯತ್ ಸದಸ್ಯರಿರಬಹುದು ಮತ್ತು ಸ್ಥಳೀಯ ನಾಯಕರಿರಬಹುದು, ಸ್ಥಳೀಯವಾಗಿ ನಡೆಯುವ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಸ್ಥಳೀಯವಾಗಿ ಗ್ರಾಮಸ್ಥರಿಗೆ ತಿಳಿದಿಲ್ಲವೆ ಆದರೂ ರೋಷಾವೇಶರಾಗಿ ವೇದಿಕೆಯಲ್ಲಿ ಮಾತನಾಡಿರುವುದು ಸ್ಥಳೀಯ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರು ಮಾಡುವ ಅವ್ಯವಹಾರದ ಬಗ್ಗೆ ಗಮನ ಹರಿಸಲಿ ಮತ್ತು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶದ ಸಾಲ್ಯಾನ್ ಮತ್ತು ಕ್ಷೇತ್ರದ ಯಾರೇ ಸದಸ್ಯರ/ಕಾರ್ಯಯರ್ತರ ಈ ಅವ್ಯವಹಾರವನ್ನು ಬಿಜೆಪಿ ಪಕ್ಷ ಮತ್ತು ಶಾಸಕರು ಯಾವುದೇ ರೀತಿ ಬೆಂಬಲಿಸುವುದಿಲ್ಲ ಮತ್ತು ಉಗ್ರವಾಗಿ ಕಾಪು ಬಿಜೆಪಿ ಖಂಡಿಸುತ್ತದೆ.

Vishwa News 24

Recent Posts

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – vishwanews24

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…

7 minutes ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು – vishwanews24

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…

17 minutes ago

ಪುತ್ತೂರು ಅತ್ಯಾಚಾರ ಪ್ರಕರಣ: ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ – vishwanews24

ಪುತ್ತೂರು ಅತ್ಯಾಚಾರ ಪ್ರಕರಣ: ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ…

23 minutes ago

ಬೆಳ್ತಂಗಡಿ: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಬಂಧನ – vishwanews24

ಬೆಳ್ತಂಗಡಿ: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಬಂಧನ ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಮೇಲೆ…

33 minutes ago

ಸುಳ್ಯ : ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಅಸೌಖ್ಯದಿಂದ ನಿಧನ – vishwanews24

ಸುಳ್ಯ : ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಅಸೌಖ್ಯದಿಂದ ನಿಧನ ಸುಳ್ಯ :…

38 minutes ago

ಬ್ರಹ್ಮಾವರ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು – vishwanews24

ಬ್ರಹ್ಮಾವರ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು ಬ್ರಹ್ಮಾವರ: ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ…

43 minutes ago