ನವದೆಹಲಿ:: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಸರಕಾರದ’ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾನುವಾರ ಧ್ವಜಾರೋಹಣ ನೆರವೇರಿಸಿದ್ದಾರೆ.
ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ದೇಶವನ್ನು ಕಟ್ಟುವಲ್ಲಿ ಈಶಾನ್ಯ ರಾಜ್ಯಗಳು ಮಹತ್ವದ ಪಾತ್ರವಹಿಸಿವೆ, ಅಂತೆಯೇ ಕೇಂದ್ರ ಸರ್ಕಾರ ಕೂಡ ಈ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಪ್ರತಿಯೊಬ್ಬರು ಸಮಾನ ಹಕ್ಕು ಮತ್ತು ಸಮಾನ ಅವಕಾಶಗಳನ್ನು ಹೊಂದಿರುವ, ತನ್ನ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಹೆಮ್ಮೆ ಹೊಂದಿರುವ, ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ ಸಮೃದ್ಧ ದೇಶ ನಿರ್ಮಾಣ ಮಾಡುತ್ತೇನೆ. ಒಡೆದು ಆಳುವ ನೀತಿಯನ್ನು ಬುಡಸಮೇತ ಕಿತ್ತೊಗೆಯುತ್ತೇನೆ, ಎಂದು ಬೋಸ್ ವಾಗ್ದಾನ ಮಾಡಿದ್ದರು. ಸ್ವಾತಂತ್ರ್ಯಾನಂತರ ದೇಶ ಬಹಳಷ್ಟು ಮುಂದುವರಿದಿದೆ. ಆದರೆ ನೇತಾಜಿ ಕಲ್ಪನೆಯ ದೇಶವಾಗಿಲ್ಲ, ಎಂದು ಪ್ರಧಾನಿ ಬೇಸರ ವ್ಯಕ್ತ ಪಡಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸರ ಕಲ್ಪನೆಯ ಸೇನೆಯನ್ನು ಭಾರತ ನಿರ್ಮಿಸುತ್ತಿದೆ, ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿತು. ಈಗ ನೇತಾಜಿ ಅವರ ಗೌರವಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧನಿ ಮೋದಿ ಘೋಷಿಸಿದ್ದಾರೆ.
ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…
ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…
ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ.…
ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲ: ನೆಟ್‌ವರ್ಕ್…
ಕಟಪಾಡಿ: ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು ಸುರಕ್ಷ ಕಾಮಗಾರಿ ಆರಂಭ ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ.…
ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್…