ಉಡುಪಿ

ಬ್ಯಾಂಕ್- ಆಧಾರ್ ಕೇಂದ್ರಕ್ಕೆ ಜನರ ಅಲೆದಾಟ………..ಆಧಾರ್ ಕಾರ್ಡ್ ನೋಂದಣಿಗೆ ಪರದಾಟ

ಮಂಗಳೂರು,: ಪ್ರಜೆಗಳೇ ನಾಡಿನ ಪ್ರಭುಗಳು… ಈ ಘೋಷವಾಕ್ಯ ಇದೀಗ ಗಿಲೀಟಿನ ರೂಪ ತಾಳುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಈಗ ಬದುಕಲು ಅತಿಮುಖ್ಯ ಎಂಬಂತಿರುವ ‘ಆಧಾರ್ ಕಾರ್ಡ್’ ನೋಂದಣಿ ಮಾಡಿಸಿಕೊಳ್ಳಲು ಪ್ರಜೆಗಳು ಪಡುವುದು ಪರದಾಟವೇ ಸರಿ. ದ.ಕ.ಜಿಲ್ಲೆಯಲ್ಲಂತೂ ಈ ಅಧ್ವಾನ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಾಗಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಟೋಕನ್ ನೀಡುವ ದಿನ ಮುಂಜಾನೆಯ ವೇಳೆಗೆ  ಜನರು ಆಯ್ದ ಪ್ರಮುಖ ಬ್ಯಾಂಕ್ ಶಾಖೆಗಳ ಸಹಿತ ಆಧಾರ್ ನೋಂದಣಿ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ. ಕೆಲವರಿಗೆ ಟೋಕನ್ ಸಿಕ್ಕರೆ ಇನ್ನು ಕೆಲವರು ಟೋಕನ್ ಸಿಗದೆ ಸಪ್ಪೆ ಮುಖ ಹಾಕಿ ಬರಿಗೈಯಲ್ಲಿ ಮರಳುವ ದೃಶ್ಯವೂ ಸಾಮಾನ್ಯವಾಗಿದೆ.ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕಾದರೂ ಆಧಾರ್ ಬೇಕು, ರೇಶನ್ ಕಾರ್ಡ್ ಮಾಡಿಸಲೂ ಆಧಾರ್ ಬೇಕು, ಆದಾಯಪ್ರಮಾಣಪತ್ರ ಮಾಡಿಸಿಕೊಳ್ಳಲೂ ಆಧಾರ್ ಬೇಕು, ಶಾಲಾ-ಕಾಲೇಜುಗಳಿಗೆ ಸೇರ್ಪಡೆ ಗೊಳಿಸಲೂ ಆಧಾರ್ ಬೇಕು. ವಿದ್ಯಾರ್ಥಿ ವೇತನ ಸಹಿತ ಸರಕಾರದ ಎಲ್ಲಾ ಸವಲತ್ತುಗಳನ್ನೂ ಪಡೆಯಲು ಆಧಾರ್ ಬೇಕೇ ಬೇಕು. ಆಧಾರ್ ಕಾರ್ಡ್ ಇಲ್ಲ ದಿದ್ದರೆ ದೇಶದ ಪ್ರಜೆಯೇ ಅಲ್ಲ ಎಂಬಂತಹ ವಾತಾ ವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ಜನರು ಮುಗಿಬಿದ್ದು ಆಧಾರ್ ಮಾಡಿಸಿಕೊಳ್ಳುತ್ತಿದ್ದಾರೆ.ದ.ಕ.ಜಿಲ್ಲೆಯಲ್ಲಿ 2018ರ ಮಾರ್ಚ್‌ಗೆ ಅಂದಾಜು 22,84,124 ಜನಸಂಖ್ಯೆ ಇದೆ. ಆ ಪೈಕಿ 21,35,647ಮಂದಿ ಆಧಾರ್ ಮಾಡಿಸಿಕೊಂಡಿದ್ದಾರೆ. ಅಂದರೆ ಶೇ.93.5 ಸಾಧನೆಯಾಗಿದೆ. ಇನ್ನು 1,48,477 ಮಂದಿ ಆಧಾರ್ ಮಾಡಿಸಿಕೊಳ್ಳಲು ಬಾಕಿ ಇದೆ. ಅಂದರೆ ಶೇ. 6.5ರಷ್ಟು ಮಾತ್ರ ಆಧಾರ್ ಮಾಡಿಸಿ ಕೊಳ್ಳಲು ಬಾಕಿ ಇದೆ. ಮಂಗಳೂರು ತಾಲೂಕಿನಲ್ಲಿ 11,76,444 ಜನ ಸಂಖ್ಯೆಯಿದ್ದು, 9,65,301 ಮಂದಿ ಆಧಾರ್ ಮಾಡಿ ಸಿದ್ದಾರೆ. ಬಂಟ್ವಾಳದಲ್ಲಿ 4,10,997 ಜನ ಸಂಖ್ಯೆಯಿದ್ದರೆ 4,39,363 ಮಂದಿ ಆಧಾರ್ ಮಾಡಿ ಸಿದ್ದಾರೆ. ಪುತ್ತೂರಿನಲ್ಲಿ 2,92,425 ಜನಸಂಖ್ಯೆಯಿದ್ದು, 2,98,356 ಮಂದಿ ಆಧಾರ್ ಮಾಡಿಸಿದ್ದಾರೆ. ಬೆಳ್ತಂಗಡಿಯಲ್ಲಿ 2,59,828 ಜನಸಂಖ್ಯೆಯಿದ್ದು, 2,84,379 ಮಂದಿ ಆಧಾರ್ ಮಾಡಿಸಿದ್ದಾರೆ. ಸುಳ್ಯ ದಲ್ಲಿ 1,44,430 ಜನಸಂಖ್ಯೆಯಿದ್ದು, 1,48,248 ಮಂದಿ ಆಧಾರ್ ಮಾಡಿಸಿದ್ದಾರೆ. ಅಂದರೆ ಮಂಗಳೂರು ಹೊರತು ಪಡಿಸಿದರೆ ಉಳಿದ ನಾಲ್ಕು ತಾಲೂಕುಗಳಲ್ಲೂ ಕೂಡ ಅಲ್ಲಿನ ಜನಸಂಖ್ಯೆಗಿಂತ ಜಾಸ್ತಿ ಆಧಾರ್ ನೋಂದಣಿ ಆಗಿದೆ. ಅಂದರೆ, ಆ ತಾಲೂಕಿನಲ್ಲಿ ಹೊರಗಡೆಯಿಂದ ಬಂದವರೂ ಕೂಡ ನೋಂದಣಿ ಮಾಡಿಸಿರುವುದು ಗಮನಿಸಬೇಕಾದಅಂಶವಾಗಿದೆ.ಜಿಲ್ಲೆಯ 17 ನಾಡ ಕಚೇರಿಗಳು, 11 ಕರ್ನಾಟಕ ವನ್ ಕೇಂದ್ರಗಳು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದಲ್ಲಿ 4, ಸಿಎಸ್‌ಸಿ(ಕಾಮನ್ ಸರ್ವಿಸ್ ಸೆಂಟರ್) ಯಲ್ಲಿ 2, ಹಾಗೂ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ 10 ಶಾಖೆಗಳ ಸಹಿತ 44 ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಸಿಕೊಳ್ಳಲಾಗುತ್ತದೆ. ಆಧಾರ್ ಮಾಡಿಸಿಕೊಳ್ಳಲು ಬಾಕಿಯಿರುವ ಜನಸಂಖ್ಯೆಗೆ ಅನು ಗುಣವಾಗಿ ಈ 44 ಆಧಾರ್ ನೋಂದಣಿ ಕೇಂದ್ರ ಸಾಕು. ಹಾಗಿದ್ದರೂ ಕೂಡ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಜನರು ಸಾಲುಗಟ್ಟಿ ನಿಲ್ಲತ್ತಿದ್ದಾರೆ.ಹೀಗೆ ಸಾಲುಗಟ್ಟಿ ನಿಲ್ಲುವವರು ಹೊಸ ನೋಂದಣಿ ಮಾಡುವವರಲ್ಲ. ಹೆಸರು ಅಥವಾ ವಿಳಾಸ, ಮನೆ ಸಂಖ್ಯೆ ಬದಲಾವಣೆ, ಜನನ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವವರೇ ಅಧಿಕ ಮಂದಿ ಇದೀಗ ಸಾಲುಗಟ್ಟಿ ನಿಲ್ಲುತ್ತಾರೆ. ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ಆಗಾಗ ವಾಸ್ತವ್ಯ ಬದ ಲಿಸುವುದು ಸಾಮಾನ್ಯವಾ ಗಿದ್ದು, ಅದಕ್ಕೆ ಅನುಗುಣವಾಗಿ ಆಧಾರ್‌ನಲ್ಲಿ ತಿದ್ದುಪಡಿ ಮಾಡಲು ಧಾವಿಸುತ್ತಾರೆ. ಹಾಗಾಗಿ ಈ ಕೇಂದ್ರಗಳಲ್ಲಿ ಸದಾ ಜನಜಂಗುಳಿ ಇರುವುದು ಸಹಜವಾಗಿದೆ.ಸಾಮಾನ್ಯವಾಗಿ ಇಂತಿಂಥ ದಿನಾಂಕದಂದು ಟೋಕನ್ ಕೊಡಲಾಗುವುದು ಎಂದು ಆಧಾರ್ ನೋಂದಣಿ ಕೇಂದ್ರದಲ್ಲಿಸೂಚನೆ ಹಾಕಲಾಗುತ್ತದೆ. ಅದರಂತೆ ಆ ದಿನ ಮುಂಜಾನೆಯೇಜನರು ಸಾಲು ಗಟ್ಟಿ ನಿಲ್ಲುತ್ತಾರೆ. ಇನ್ನು ಬ್ಯಾಂಕ್‌ಗಳಲ್ಲಿ ದಿನಕ್ಕೆ ಕನಿಷ್ಠ 20 ಮಂದಿಗೆ ಆಧಾರ್ ನೋಂದಣಿ ಮಾಡಲಾಗುತ್ತದೆ. ಆಯಾ ದಿನ ಮುಂಜಾನೆಯೇ ಎದ್ದು ಬ್ಯಾಂಕ್‌ನ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರು ಒಂದಿಡೀ ದಿನ ಕಾದು ಆಧಾರ್ ನೋಂದಣಿ ಅಥವಾ ತಿದ್ದುಪಡಿ ಮಾಡಿಸುತ್ತಾರೆ. ಬ್ಯಾಂಕ್‌ಗಳ ಮುಂದಿನ ಸರತಿ ಸಾಲಿನಲ್ಲಿ 20ಕ್ಕಿಂತ ಜನರು ಅಧಿಕವಿದ್ದರೆ ಮರುದಿನ ಮುಂಜಾನೆ ಸಾಲುಗಟ್ಟಿ ನಿಲ್ಲುವುದು ಅನಿವಾರ್ಯ. ಕೆಲವರಿಗೆ ಮೂರ್ನಾಲ್ಕು ಬಾರಿಯ ಪ್ರಯತ್ನದ ಬಳಿಕ ಟೋಕನ್ ಸಿಕ್ಕಿದ ಉದಾಹರಣೆಯೂ ಇದೆ. ಬ್ರೋಕರ್‌ಗಳ ಹಾವಳಿ:ಬ್ಯಾಂಕ್‌ನಲ್ಲಿ ಬ್ರೋಕರ್ ಗಳ ಹಾವಳಿ ಇಲ್ಲ. ಆದರೆ ‘ನಾಡ ಕಚೇರಿ’ ಮತ್ತು ‘ಕರ್ನಾಟಕ ವನ್’ನಲ್ಲಿ ಬ್ರೋಕರ್‌ಗಳು ತಮ್ಮ ಕೈ ಚಳಕ ಪ್ರದರ್ಶಿಸುತ್ತಾರೆ.ತುರ್ತಾಗಿ ಆಧಾರ್ ಬೇಕಾದವರು ಈ ಕೇಂದ್ರಗಳ ಮುಂದೆ ಸುಳಿದಾ ಡಿದಾಗ ನಗುಮುಖದಲ್ಲೇ ಬ್ರೋಕರ್‌ಗಳು ಹಾಜ ರಾಗುತ್ತಾರೆ. ‘ಆಧಾರ್‌ನ ಟೋಕನ್ ಮುಗಿದಿದೆ. 2 ತಿಂಗಳ ಬಳಿಕ ಬಂದರೆ ಆಧಾರ್ ಮಾಡಿಸಬಹುದು. ಇನ್ನು ನಿಮಗೆ ತುರ್ತಾಗಿ ಆಧಾರ್ ಬೇಕಿದ್ದರೆ 500 ರೂ. ಕೊಡಿ. ಟೋಕನ್ ಕೊಡುತ್ತೇನೆ’ ಎಂದು ಭರವಸೆ ನೀಡುತ್ತಾರೆ. ಮಂಗಳೂರು, ತೊಕ್ಕೊಟ್ಟು, ತಲಪಾಡಿ ಹೀಗೆ 10-20 ಕಿ.ಮೀ. ದೂರದಿಂದ ಬರುವವರು ಬರಿಗೈಯಲ್ಲಿ ಮರಳುವ ಬದಲು 500 ರೂ.ಕೊಟ್ಟು ಆಧಾರ್ಮಾಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇನ್ನುಬ್ರೋಕರ್‌ಗಳ ಕೈಗೆ ಸಿಗದೆ ನೇರ ಆಧಾರ್ ಕೇಂದ್ರದ ಸಿಬ್ಬಂದಿಯ ಬಳಿ ತೆರಳಿದರೆ ಟೋಕನ್ ಮುಗಿದಿದೆ. ತುರ್ತಾಗಿ ಬೇಕಿದ್ದರೆ ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಇವರನ್ನು ಸಂಪರ್ಕಿಸಿ ಎನ್ನುತ್ತಾರೆ. ಈ ಸಂಖ್ಯೆಯು ಬ್ರೋಕರ್‌ಗಳದ್ದಾಗಿದ್ದು, ಆಧಾರ್ ಕೇಂದ್ರದ ಸಿಬ್ಬಂದಿ ವರ್ಗ ಮತ್ತು ಈ ಬ್ರೋಕರ್‌ಗಳ ನಡುವಿನ ಮಧ್ಯೆ ಒಪ್ಪಂದಕ್ಕೆ ಇದು ಸಾಕ್ಷಿಯಾಗಿದೆ.

Vishwa News 24

Recent Posts

ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ : ಹೆಚ್.ಡಿ ದೇವೇಗೌಡ – vishwanews24

ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್‌ಡಿಡಿ ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ …

10 hours ago

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ – vishwanews24

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…

10 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…

10 hours ago

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ – vishwanews24

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…

11 hours ago

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ – vishwanews24

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…

11 hours ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಪ್ರಧಾನಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಮನವಿ – vishwanews24

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…

12 hours ago