ಬ್ರಹ್ಮಾವರ,: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಘಟನೆ ಫೆ.14ರ ರವಿವಾರದಂದು ನಡೆದಿದೆ.
ಮೃತರನ್ನು ಹೊಸೂರು ನಿವಾಸಿ ನವೀನ್ ನಾಯ್ಕ್ (43) ಎಂದು ಗುರುತಿಸಲಾಗಿದೆ.ಹತ್ಯೆಗೆ ಸಂಬಂಧಿಸಿದಂತೆ ಗೌತಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರವಿವಾರ ತಡರಾತ್ರಿ ಗೌತಮ್ ಸೇರಿದಂತೆ ಐದಾರು ಜನರ ಗುಂಪು ನವೀನ್‌ನ ಮೇಲೆ ಹಲ್ಲೆ ನಡೆಸಿದ್ದು, ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಗೌತಮ್‌ಗೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದು, ಇದನ್ನು ನವೀನ್ ಪ್ರಶ್ನಿಸಿದ್ದರು. ಕಳೆದ ಕೆಲವು ದಿನಗಳಿಂದ ಗೌತಮ್ ಮಹಿಳೆಯೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಬಿಜೆಪಿ ಚುನಾವಣೆಯಲ್ಲಿ ಗೆದ್ದು ಪಶ್ಚಿಮ ಬಂಗಾಳದ ಅಧಿಕಾರ ಹಿಡಿಯಲಿದೆ : ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ -Vishwanews24
ನವೀನ್ ಹತ್ಯೆಗೆ ಸಂಬಂಧಿಸಿದಂತೆ , ಅವರ ಪುತ್ರ ನಿತಿನ್ ನಾಯ್ಕ್ (15) ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಳೆದ ಕೆಲವು ದಿನಗಳಿಂದ ನೆರೆಮನೆಯ ಮಹಿಳೆ ಮನೆಗೆ ಬರುತ್ತಿದ್ದ ಗೌತಮ್ ಈ ಕೃತ್ಯ ಎಸಗಿರಬಹುದು ಎಂದು ಆರೋಪಿಸಿದ್ದಾರೆ.
ಮಹಿಳೆ ನವೀನ್‌ನ ನೆರೆಮನೆಯವಳಾಗಿದ್ದು, ಆಕೆ ತನ್ನ ಮಗ ಶರತ್ ಜೊತೆ ವಾಸವಿದ್ದಳು. ಮಲ್ಪೆ ನಿವಾಸಿ ಗೌತಮ್ ಎಂಬಾತ ಆಗಾಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ. ಸುಮಾರು 15 ದಿನಗಳ ಹಿಂದೆ ಮಹಿಳೆ ಹಾಗೂ ಗೌತಮ್ ಗುಡ್ಡೆಯಂಗಡಿ ಕ್ರಾಸ್ ಬಳಿ ನಿಂತಿದ್ದರು. ಆಕೆಯ ಮನೆಗೆ ಭೇಟಿ ಮಾಡುತ್ತಿರುವ ಬಗ್ಗೆ ನವೀನ್ ಗೌತಮ್ ಬಳಿ ಕೇಳಿದ್ದಾನೆ. ಇದು ಇಬ್ಬರ ನಡುವಿನ ವಾದಕ್ಕೆ ಕಾರಣವಾಗಿತ್ತು.
ಶ್ರೀರಾಮ ಮಂದಿರದ ನಿರ್ಮಾಣ ಈ ದೇಶದ ಜನರ ಸುದೀರ್ಘ ಕನಸಾಗಿದೆ : ಡಿ.ವಿ.ಸದಾನಂದ ಗೌಡ -Vishwanews24
ಗೌತಮ್‌ನನ್ನು ನವೀನ್ ಪ್ರಶ್ನಿಸುವುದು ನಿಲ್ಲಿಸದಿದ್ದರೆ ಹತ್ಯೆ ಮಾಡಲು ಸಹ ಹಿಂಜರಿಯುವುದಿಲ್ಲ ಎಂದು ಮಹಿಳೆ ದೂರುದಾರರ ತಾಯಿಗೆ ತಿಳಿಸಿದ್ದಾಳೆ.
ಫೆ.14ರ ರವಿವಾರದಂದು ಕುಟುಂಬದ ಸದಸ್ಯರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಗೌತಮ್ ಹಾಗೂ ಇತರರು ನಮ್ಮ ನಿವಾಸಕ್ಕೆ ಬಂದಿದ್ದು, ಹತ್ಯೆ ಮಾಡುವ ಉದ್ದೇಶದಿಂದ ತಂದೆಯ ತಲೆಗೆ ಯಾವುದೋ ಆಯುಧದಿಂದ ಹೊಡೆದಿದ್ದಾರೆ ಎಂದು ನಿತಿನ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…