Featured

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಮಾಡಬಾರದು – ಶಾಸಕ ರಘುಪತಿ ಭಟ್ -Vishwanews24

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಮಾಡಬಾರದು – ಶಾಸಕ ರಘುಪತಿ ಭಟ್ -Vishwanews24

ಬ್ರಹ್ಮಾವರ, ,: “ರಾಷ್ಟ್ರೀಯ ಹೆದ್ದಾರಿ ಈಗಿನ ಸಮಸ್ಯೆಗೆ ಕಂಟ್ರಾಕ್ಟರ್ ಕಾರಣ, ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಮಾಡಬಾರದು ಎಂದು ನಾವು ಗಲಾಟೆ ಮಾಡಿದ್ದೆವು. ಆದರೆ, ಪೋಲಿಸ್ ಫೋರ್ಸ್ ಮತ್ತು ರಾಜಕೀಯ ನಾಯಕರ ಪ್ರಭಾವ ಬಳಸಿ ಟೋಲ್ ಹಾಕಿಸಿದ್ದಾರೆ” ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಬ್ರಹ್ಮಾವರದಲ್ಲಿ ರಸ್ತೆ ಅಪಘಾತ ತಡೆಯ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ರೋಡ್ ಕಂಪ್ಲಿಟ್ ಆಗದೇ ಎಲ್ಲರಿಂದಲೂ ಟೋಲ್ ಸಂಗ್ರಹ ಮಾಡುತಿದ್ದಾರೆ. ಸರಕಾರಿ ಅಧಿಕಾರಿಗಳನ್ನು ಕೂಡಾ ಇವರು ಬಿಡುವುದಿಲ್ಲ. ಸಂಸ್ಥೆಯವರ ವರ್ತನೆ ಅತಿರೇಕಕ್ಕೆ ಹೋಗಿದೆ. ಕರಾವಳಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ಆಗಿ ಎರಡು ವರ್ಷ ಅಗಿದೆ ಅದರೆ ಇದುವರೆಗೆ ಅಲ್ಲಿ ಲೈಟ್ ಅನ್ ಮಾಡಿಸಿಲ್ಲ. ಇದು ಇನ್ನು ಜನ ಪ್ರತಿರೋಧ ಒಡ್ಡಿ ಮುಂದೊಂದು ದಿನ ಟೋಲ್ ಬಂದ್ ಮಾಡಿಸುವ ದಿನ ಬಂದರೂ ಬರಬಹುದು. ತಕ್ಷಣ ಕೆಲಸ ಪೂರ್ಣ ಮಾಡದೇ ಇದ್ದಲ್ಲಿ ಟೊಲ್ ಅನ್ನು ಅನಿವಾರ್ಯವಾಗಿ ಬಂದ್ ಮಾಡಬೇಕಾದಿತು”‌ ಎಂದು ತಿಳಿಸಿದರು.

“ಈ ಮೊದಲು ನಡೆದ ಸಂಸದರ ಸಭೆ, ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಕೂಡಾ ಈ ಕುರಿತಾಗಿ ನಾವು ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆವೆ ಆದರೆ ಜನಪ್ರತಿನಿಧಿಗಳ ಮಾತಿಗೆ ಕೂಡಾ ಬೆಲೆ ಇಲ್ಲದಾಗಿದೆ. ಮಾತಾಡಿದರೆ ಅವರು ನಮಗೆ ಮಾಡಿದ ಒಪ್ಪಂದದ ಪ್ರಕಾರ ನಾವು ನಡೆದುಕೊಂಡಿದ್ದೇವೆ ಎಂದು ಅಗ್ರಿಮೆಂಟ್ ಅನ್ನು ತೋರಿಸುತ್ತಾರೆ. ಯಾವುದೇ ಸಭೆಗೂ ಉನ್ನತ ಮಟ್ಟದ ಅಧಿಕಾರಿಗಳು ಬಾರದೇ ಇತರರನ್ನು ಕಳುಹಿಸುತ್ತಾರೆ, ಸಭೆಗೆ ಬಂದವರಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ” ಎಂದು ಹೇಳಿದರು.

ಜನರು ಶಾಸಕ, ಸಂಸದರು ಎನೂ ಮಾತಾಡಲ್ಲ ಎಂದೆಣಿಸುತ್ತಾರೆ. ನಾವು ಮಾತನಾಡಿ, ಗಲಾಟೆ ಕೂಡಾ ಮಾಡಿದ್ದೆವೆ. ಆದರೆ, ಇದುವರೆಗೆ ಕಾಮಗಾರಿ ಸಂಪೂರ್ಣವಾಗಿಲ್ಲ. ಜಿಲ್ಲಾಡಳಿತ ಟೋಲ್ ಗೇಟ್‌ಗೆ ನೀಡಿದ ಭದ್ರತೆಯನ್ನು ಹಿಂಪಡೆದರೆ ಇಂದಿಗೂ ಜನರು ಟೋಲ್ ನೀಡದೆ ಸಂಚರಿಸಲು ತಯಾರಿದ್ದಾರೆ” ಎಂದರು.

Vishwa News 24

Recent Posts

ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ – vishwanews24

ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…

32 minutes ago

ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – vishwanews24

ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…

48 minutes ago

ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ – vishwanews24

ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್‌ ಆಟಗಾರ, ಟೀಂ…

56 minutes ago

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ – vishwanews24

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…

1 hour ago

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ – vishwanews24

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…

1 hour ago

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ – vishwanews24

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…

2 hours ago