ಬ್ರೆಡ್ ಮಸಾಲೆ ದೋಸೆ -Vishwanews24

ಬೆಳಗಿನ ಉಪಹಾರಕ್ಕೆ ದೋಸೆಗಿಂತ ಬೆಸ್ಟ್ ತಿನಿಸು ಇನ್ಯಾವುದೂ ಇಲ್ಲ. ಹಾಗಿದ್ದರೆ ಬನ್ನಿ ಬ್ರೆಡ್ ದೋಸೆಯನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಸಾಮಾಗ್ರಿಗಳು

1. ಬ್ರೆಡ್ ಸ್ಲೈಸ್ – 10

2.ರವೆ- 1/2 ಕಪ್

3.ಮೊಸರು – 1/2 ಕಪ್

4.ಅಕ್ಕಿ ಹುಡಿ – 1 1/2 ಚಮಚ

5.ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ

1.ಎಣ್ಣೆ – 2 ಚಮಚ

2.ಜೀರಿಗೆ – 1/4 ನೇ ಚಮಚ

3.ಸಾಸಿವೆ – 1/2 ಕಪ್

4.ಉದ್ದಿನ ಬೇಳೆ – 1/2 ಚಮಚ

5.ಕರಿಬೇವಿನೆಸಳು – 2-3 (ಸಣ್ಣದಾಗಿ ಹೆಚ್ಚಿದ್ದು)

6.ಹಸಿಮೆಣಸು – 2 (ಸಣ್ಣದಾಗಿ ಹೆಚ್ಚಿದ್ದು)

7.ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)

8.ಶುಂಠಿ – 1/2 ಇಂಚು ತುಂಡುಮಾಡಿದ್ದು (ಸಣ್ಣದಾಗಿ ಕತ್ತರಿಸಿದ್ದು)

ಮಾಡುವ ವಿಧಾನ

1. ಬ್ರೆಡ್‌ನ ಕಂದು ಭಾಗವನ್ನು ಕತ್ತರಿಸಿ ತೆಗೆಯಿರಿ.

2.ನೀರಿನಲ್ಲಿ 2 ನಿಮಿಷಗಳಷ್ಟು ಕಾಲ ಎಲ್ಲಾ ಬ್ರೆಡ್ ತುಂಡುಗಳನ್ನು ನೆನೆಸಿಡಿ.

3.ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿಕೊಂಡು ದಪ್ಪನೆಯ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ.

4.ನೀರಿನಿಂದ ಬ್ರೆಡ್ ತುಂಡುಗಳನ್ನು ಹೊರತೆಗೆದು ಅವುಗಳನ್ನು ಚೆನ್ನಾಗಿ ಹುಡಿಮಾಡಿಕೊಳ್ಳಿ ಮತ್ತು ನಿಮ್ಮ ಕೈಗಳಿಂದ ಮೆತ್ತಗಾಗಿಸಿಕೊಳ್ಳಿ.

5.ಹುಡಿ ಮಾಡಿದ ಬ್ರೆಡ್ ಅನ್ನು ಹಿಟ್ಟಿಗೆ ಸೇರಿಸಿ ಮತ್ತು ಇದಕ್ಕೆ ಮೊಸರನ್ನು ಬೆರೆಸಿ, ಹಾಗೂ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

6.ಇಷ್ಟೆಲ್ಲಾ ಆದ ನಂತರ ಬ್ಲೆಂಡರ್‌ಗೆ ಎಲ್ಲವನ್ನೂ ಹಾಕಿ ಮತ್ತು ತಿರುಗಿಸಿಕೊಳ್ಳಿ. ಹಿಟ್ಟಿನಲ್ಲಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

7.ಈಗ ಸ್ವಚ್ಛವಾದ ಪಾತ್ರೆಗೆ ಹಿಟ್ಟನ್ನು ಸುರಿದುಕೊಳ್ಳಿ ಮತ್ತು ಹಿಟ್ಟಿನ ಸಾಂದ್ರತೆಯನ್ನು ಪರಿಶೀಲಿಸಿ.

8.ಇನ್ನು ಬಾಣಲೆಯನ್ನು ಅನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ.

9.ಜೀರಿಗೆ, ಸಾಸಿವೆ,ಉದ್ದಿನ ಬೇಳೆ, ಕರಿಬೇವಿನೆಸಳು, ಈರುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಬಾಣಲೆಯಲ್ಲಿ ಹುರಿದುಕೊಳ್ಳಿ…ಈರುಳ್ಳಿ ಕಂದು ಬಣ್ಣಕ್ಕೆ ತಿರುಗಲಿ.

10.ಇನ್ನು ಗ್ಯಾಸ್‌ನಿಂದ ಬಾಣಲೆಯನ್ನು ಇಳಿಸಿ

11.ತವಾ ತೆಗೆದುಕೊಂಡು ಅದನ್ನು ಬಿಸಿಮಾಡಿ.

12.ತವಾಕ್ಕೆ ಎಣ್ಣೆಯನ್ನು ಹಾಕಿ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಿ.

13.ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಮತ್ತು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ

14.ಈಗ ವೃತ್ತಾಕಾರದ ಸೌಟನ್ನು ಬಳಸಿಕೊಂಡು ತವಾದ ಮೇಲೆ ಹಿಟ್ಟನ್ನು ಸುರಿಯಿರಿ.

15.ಸೌಟಿನ ತಳವನ್ನು ಬಳಸಿಕೊಂಡು ದೋಸೆಯನ್ನು ಎಲ್ಲೆಡೆಯೂ ಹರಡಿಸಿ

16.ದೋಸೆಯ ಮಧ್ಯಭಾಗಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ 2-3 ನಿಮಿಷಗಳಷ್ಟು ಕಾಲ ಕಾಯಿರಿ.

17.ಬ್ರೆಡ್ ದೋಸೆಯನ್ನು ಬಿಸಿಬಿಸಿಯಾಗಿ ಸೇವಿಸಲು ನೀಡಿ.

ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ದೋಸೆ ಗರಿಗರಿಯಾದ ಮೇಲೆ ಪೋಲ್ಡ್ ಮಾಡಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ಬ್ರೆಡ್ ಮಸಾಲೆ ದೋಸೆ ಸವಿಯಲು ಸಿದ್ಧ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago