ಬ್ಲೂ ವೇಲ್ ಚಾಲೆಂಜ್ ನಂತರ ವಿಶ್ವಾದ್ಯಂತ ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಮಾರಣಾಂತಿಕ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ದಿನದಿಂದ ದಿನಕ್ಕೆ ಈ ಕೀಕೀ ಡ್ಯಾನ್ಸ್ ಚಾಲೆಂಜ್ ವೈರಲ್ ಆಗತೊಡಗಿದೆ. ಕೀಕೀ ಚಾಲೆಂಜ್ ಅಥವಾ ಇನ್ ಮೈ ಫೀಲಿಂಗ್ಸ್ ಚಾಲೆಂಜ್ ಅಮೆರಿಕ ರ್ಯಾಪರ್ ಡ್ರೇಕ್ಸ್ ನ ಇತ್ತೀಚಿನ ಹಾಡಿನಿಂದ ಪ್ರೇರಿತಗೊಂಡಿದ್ದು, ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದು ಈ ಚಾಲೆಂಜ್ ನ ಟಾಸ್ಕ್ ಆಗಿದೆ. ಕೀಕೀ ಡು ಯು ಲವ್ ಮೀ… ಸಾಂಗ್ ಚಾಲೆಂಜ್ ಅತ್ಯಂತ ಅಪಾಯಕಾರಿಯಾಗಿದೆ. ಹಲವೆಡೆ ಇದನ್ನ ನಿಷೇಧಿಸಲಾಗಿದೆ.
ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದಷ್ಟೇ ಈ ಚಾಲೆಂಜ್ ನ ಟಾಸ್ಕ್ ಆಗಿದ್ದರೆ ಬಹುಶಃ ಹೆಚ್ಚಿನ ಅಪಾಯ ಇರುತ್ತಿರಲಿಲ್ಲವೇನೋ. ಆದರೆ ಟಾಸ್ಕ್ ನ ಮತ್ತೊಂದು ಭಾಗವಾಗಿರುವ ನೃತ್ಯ ಮಾಡುತ್ತಾ ಚಲಿಸುತ್ತಿರುವ ಕಾರಿನೊಳಗೆ ವಾಪಸ್ ಜಿಗಿದು ಕುಳಿತುಕೊಳ್ಳಿವ ಭಾಗ ಅತ್ಯಂತ ಅಪಾಯಕಾರಿಯಾಗಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆಯುತ್ತಿದೆ. ನಿಧಾನಗತಿಯಲ್ಲಿರುವ ಕಾರಿನಿಂದ ಕೆಳಗೆ ಜಿಗಿದು ಇನ್ ಮೈ ಫೀಲಿಂಗ್ಸ್ ಹಾಡಿನ ಕೆಲವು ಸಾಲುಗಳಿಗೆ ನೃತ್ಯ ಮಾಡಬೇಕು, ನಂತರ ವಾಪಸ್ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು, ಇದೇ ಕೀಕೀ ಚಾಲೆಂಜ್ ನ ಟಾಸ್ಕ್.
ಅಪಾಯಕಾರಿಯಂತಿರುವ ಕಿಕಿ ಜಾಲೆಂಜ್ನ್ನು ಈಗಾಗಲೇ ಹಲವೆಡೆ ಬ್ಯಾನ್ ಮಾಡಲಾಗಿದೆ. ಇದರ ವಿರುದ್ಧ ಮುಂಬೈನ್ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೂಡಾ ಕೈಗೊಳ್ಳುತ್ತಿದ್ದಾರೆ. ಅದಾಗ್ಯೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಿಕಿ ಚಾಲೆಂಜ್ ಟ್ರೆಂಡ್ ಸೃಷ್ಟಿಸುತ್ತಿದೆ. ಸೆಲಿಬ್ರಿಟಿಗಳು ಈ ಸವಾಲು ಸ್ವೀಕರಿಸುತ್ತಿದ್ದಾರೆ
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…