Featured

ಭಂಡಾರಿ ಮನೆ ಮುಂದೆ ಅಳಲು ತೋಡಿಕೊಂಡ ಬೂತು ಮಟ್ಟದ ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರು, ಸೀಟ್ ಬಿಟ್ಟು ಕೊಟ್ಟು ಕಾರ್ಕಳದಲ್ಲಿ ಕಾಂಗ್ರೆಸ್ ಉಳಿಸಿಯೆಂದು ವಿನಂತಿ.

ಕಾರ್ಕಳ : ರಾಜಕೀಯ ವಲಯವನ್ನು ತಲ್ಲಣಗೊಳಿಸಿದ್ದ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಗೆ ಸೀಟ್ ಬಿಟ್ಟು ಕೊಡುವಂತೆ ೧೫೦ ಕ್ಕೂ ಹೆಚ್ಚಿನ ಬೂತ್ ಪ್ರಮುಖರು ಇಂದು ಬೆಳಗ್ಗೆ ಗೋಪಾಲ ಭಂಡಾರಿ ಮನೆಗೆ ಭೇಟಿ ನೀಡಿ ” ಭಂಡಾರಿಯವರೇ ನಾವು ಇಷ್ಟು ವರ್ಷ ನಿಮ್ಮ ಜತೆ ಪಕ್ಷಕ್ಕಾಗಿ ಮತ್ತು ನಿಮಗಾಗಿ ಕಾರ್ಕಳದಲ್ಲಿ ದುಡಿದಿದ್ದೇವೆ. ನೀವು ಮಾತ್ರ ಹರ್ಷ ಮೊಯ್ಲಿ ಗೆ ಸೀಟ್ ಬಿಟ್ಟು ಕೊಡಲು ತಯಾರಿದ್ದೀರಿ ಆದರೆ ನಿಮ್ಮ ಅಪ್ಪಟ ಶಿಷ್ಯ ಮುನಿಯಾಲ್ ಉದಯ್ ಕುಮಾರ್ ಗೆ ಸೀಟ್ ಬಿಟ್ಟು ಕೊಡಲು ತಯಾರಿಲ್ಲ,ನೀವಂತೂ ಈ ಸಲ ಕಾರ್ಕಳದಲ್ಲಿ ಗೆಲುವು ಸಾಧಿಸಲು ಸಾದ್ಯವಿಲ್ಲ ಮತ್ತು ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ , ನೀವು ದಯಮಾಡಿ ಉದಯ್ ಶೆಟ್ಟಿಗೆ ಸೀಟ್ ಬಿಟ್ಟುಕೊಟ್ಟು, ಪಕ್ಷದ ವರಿಷ್ಠರಾದ ವಿರಪ್ಪ ಮೊಯ್ಲಿಗೆ ಮನವರಿಕೆ ಮಾಡಿ, ಬಿ ಫಾರಮ್ ಶೆಟ್ರಿಗೆ ನೀಡಿ , ಇಲ್ಲಿ ನೀವು ಕಾಪಾಡಿಕೊಂಡು ಬಂದ ನಿಮ್ಮ ಘಣತೆ ಮತ್ತು ಗೌರವವನ್ನು ಉಳಿಸಿಕೊಳ್ಳಿ ಹಾಗೂ ಕಾರ್ಕಳದಲ್ಲಿ ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿನಲ್ಲಿ ಸಹಕರಿಸಿ ಮತ್ತು ಪಕ್ಷ ಸಂಘಟನೆಗೆ ಕೈ ಜೋಡಿಸಿ ಎಂದರು. ಒಂದು ವೇಳೆ ನೀವು ಹಠಮಾಡಿ ನಾಮಪತ್ರ ಸಲ್ಲಿಸಿದ್ದೆ ಆದಲ್ಲಿ ೧೫೦ ಕ್ಕೂ ಹೆಚ್ಚಿನ ಕಡೆಯಲ್ಲಿ ಒಂದೇ ಒಂದು ಬೂತ್ ಹಾಕಲು ಬಿಡುವುದಿಲ್ಲವೆಂದು ಗೋಪಾಲ ಭಂಡಾರಿ ಮುಂದೆ ಆಗ್ರಹಿಸಿ ಪಕ್ಷದ ಹಲವಾರು ಮಂದಿ ಕಾರ್ಯಕರ್ತರು ಅಳಲು ತೋಡಿಕೊಂಡರು.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago