Featured

ಭಟ್ಕಳ: ನಾಲ್ವರ ಹತ್ಯೆ ಪ್ರಕರಣ; ಚಿತ್ರದುರ್ಗದಲ್ಲಿ ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ – Vishwanews24

ಭಟ್ಕಳ: ನಾಲ್ವರ ಹತ್ಯೆ ಪ್ರಕರಣ; ಚಿತ್ರದುರ್ಗದಲ್ಲಿ ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ

ಭಟ್ಕಳ: ತಾಲೂಕಿನ ಹಾಡುವಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ನಾಲ್ವರ ಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಘಟ್ಟ ತಲುಪಿದ್ದು, ತನಿಖೆಗಾಗಿ ವಿವಿದೆಡೆಗಳಿಗೆ ತೆರಳಿದ್ದ ಪೊಲೀಸರ ತಂಡ ಚಿತ್ರದುರ್ಗದಲ್ಲಿ ಪ್ರಮುಖ ಆರೋಪಿಯೋರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗದಲ್ಲಿ ಪೊಲೀಸರು ವಶಪಡಿಸಿಕೊಂಡ ವ್ಯಕ್ತಿ ವಿನಯ್ ಭಟ್ಟ ಎನ್ನಲಾಗಿದೆ.

ಕಳೆದ ಶುಕ್ರವಾರ ಹಾಡುವಳ್ಳಿಯಲ್ಲಿ ನಾಲ್ವರನ್ನು ಕೊಲೆ ಮಾಡಿದ ನಂತರ ತನ್ನ ತಂದೆಯೊಂದಿಗೆ ಹಲ್ಯಾಣಿಯ ಮನೆಗೆ ಹೋಗಿದ್ದ ಈತ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆಯನ್ನು ಬದಲಿಸಿ ದ್ವಿಚಕ್ರ ವಾಹನದಲ್ಲಿ ಕಾರ್ಗಲ್ ತನಕ ತೆರಳಿ ಅಲ್ಲಿಯೇ ತನ್ನ ದ್ವಿಚಕ್ರ ವಾಹನವನ್ನು ಬಿಟ್ಟು ಬಸ್ಸಿನಲ್ಲಿ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಚಿತ್ರದುರ್ಗಕ್ಕೆ ಹೋಗಿದ್ದ ಎನ್ನಲಾಗುತ್ತಿದೆ.

ಪೊಲೀಸರು ಆತನ ಜಾಡು ಹಿಡಿದು ಚಿತ್ರದುರ್ಗದಲ್ಲಿ ವಶಕ್ಕೆ ಪಡೆದಿರುವ ಕುರಿತು ತಿಳಿದು ಬಂದಿದ್ದು, ಇನ್ನಷ್ಟೇ ದೃಢಪಡಬೇಕಿದೆ.

ಈಗಾಗಲೇ ಪೊಲೀಸರ ವಶದಲ್ಲಿರುವ ಇನ್ನೋರ್ವ ಆರೋಪಿ ವಿದ್ಯಾ ಭಟ್ಟ ಎಂಬವರನ್ನು ಕಾರವಾರದ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೋರ್ವ ಆರೋಪಿ ಶ್ರೀಧರ ಭಟ್ಟ ಎಂಬವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದ್ದು, ಈತನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Vishwa News 24

Recent Posts

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘನೆ – vishwanews24

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘನೆ ಉಡುಪಿ : ಈ ಬಾರಿಯ ಎಸ್‌ಎಸ್‌ಎಲ್‌ಸಿ…

4 hours ago

ಕರಾವಳಿ ಕರ್ನಾಟಕದಲ್ಲಿ ತಾಪಮಾನ ಏರಿಕೆ : 5 ದಿನ ಯಲ್ಲೋ ಅಲರ್ಟ್‌ – vishwanews24

ಕರಾವಳಿ ಕರ್ನಾಟಕದಲ್ಲಿ ತಾಪಮಾನ ಏರಿಕೆ : 5 ದಿನ ಯಲ್ಲೋ ಅಲರ್ಟ್‌ ಮಂಗಳೂರು : ಕರಾವಳಿ ಕರ್ನಾಟಕವು ಪ್ರಸ್ತುತ ತೀವ್ರ…

5 hours ago

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

1 day ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

1 day ago

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ…

1 day ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

1 day ago