ಉಡುಪಿ

ಭದ್ರತೆ ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಸಚಿವ ಪ್ರಮೋದ್ ಮಧ್ವರಾಜ್ ಗೆ ಬೆದರಿಕೆ ಇದ್ಯಾ ಎಂಬ ಪ್ರಶ್ನೆ ಎದ್ದಿದೆ.

ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಸಭೆಗಳು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೋರಿದ್ದೇನೆ. ಗೃಹ ಇಲಾಖೆಯಲ್ಲಿ ಏನು ಬೆಳವಣಿಗೆಯಾಗಿದೆಯೆಂದು ಗೊತ್ತಿಲ್ಲ ಅಂತ ಹೇಳಿದ್ರು.

 

ಸಂಭವನೀಯ ಅನಾಹುತ ತಪ್ಪಿಸಲು ಹೆಚ್ಚುವರಿ ಭದ್ರತೆ ಕೋರಿ ಪತ್ರ ಬರೆದಿದ್ದೇನೆ. ಅವಘಡ ಆಗದಿರಲಿ ಎಂದು ಮುನ್ನಚ್ಚರಿಕಾ ದೃಷ್ಟಿಯಿಂದ ಪತ್ರ ಬರೆಯಲಾಗಿದೆ ಅಂದ್ರು.

ಗೃಹ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭದ್ರತೆ ಕೊಡೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು. ಯಾವ ಕಾರಣಕ್ಕೆ ಭದ್ರತೆ ಬೇಕು ಅಂತ ಸಚಿವರು ಪತ್ರದಲ್ಲಿ ಯಾವುದೇ ಕಾರಣ ಕೊಟ್ಟಿಲ್ಲ. ಮುನ್ನಚ್ಚೆರಿಕೆಗೆ ಎಂದಷ್ಟೇ ಬರೆದಿದ್ದಾರೆ. ಸಚಿವರಿಗೇನಾದ್ರು ಬೆದರಿಕೆ ಇದ್ಯಾ, ಅಥವಾ ನೂರಾರು ಕೋಟಿ ರೂಪಾಯಿ ಒಡೆಯನಿಗೆ ಏನಾದ್ರು ಆಪತ್ತು ಎದುರಾಗಿದ್ಯಾ ಅನ್ನುವ ಪ್ರಶ್ನೆಗಳನ್ನು ಉಡುಪಿ ಜನತೆ ಕೇಳುತ್ತಿದ್ದಾರೆ. ಬಗ್ಗೆ ಸಚಿವರು ಉತ್ತರ ಕೊಡದೆ ನಕ್ಕು, ಸುಮ್ಮನಾಗಿದ್ದಾರೆ.

Vishwa News 24

Recent Posts

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

21 minutes ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

58 minutes ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

1 hour ago

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು – vishwanews24

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…

1 hour ago

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ – vishwanews24

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…

1 hour ago

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ – vishwanews24

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್‌ ಶೆಟ್ಟಿ ಆತ್ಮಹತ್ಯೆ…

1 hour ago