ದಾವಣಗೆರೆ : ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಬದಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಭಯೋತ್ಪಾದನೆಯೇ ಮುಸ್ಲಿಮರ ಸಂಸ್ಕೃತಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಮಾತನಾಡುವ ಭರದಲ್ಲಿ ರೇಣುಕಾಚಾರ್ಯ ಸಾರ್ವಜನಿಕ ಸಭೆಯಲ್ಲಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಮುಸ್ಲಿಮರ ಕೇರಿಗೆ ಬಂದಿರುವ ಹಣವನ್ನು ಹಿಂದು ಕೇರಿಗೆ ನೀಡುತ್ತೇನೆ. ಮುಸ್ಲಿಮರ ಸ್ಥಾನವೇನೆಂಬುದನ್ನು ಅವರಿಗೆ ತೋರಿಸುತ್ತೇನೆ. ದೇಶದ್ರೋಹಿಗಳಿಗೆ ರಾಜಕೀಯ ಎಂದರೆ ಏನೆಂದು ಅರ್ಥ ಮಾಡಿಸುತ್ತೇನೆ ಎಂದು ಕೂಡ ಹೇಳಿರುವ ರೇಣುಕಾಚಾರ್ಯ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ.
ಮುಸ್ಲಿಂ ಸಮುದಾಯದ ಕೆಲವು ದೇಶದ್ರೋಹಿಗಳು ಮಸೀದಿಗಳಲ್ಲಿ ಕುಳಿತು ಫತ್ವಾ ಹೊರಡಿಸುತ್ತಾರೆ. ನಮ್ಮ ಪವಿತ್ರವಾದ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದವನ್ನು ನೀಡುತ್ತೇವೆ. ಇದು ಭಾರತದ ಸಂಸ್ಕೃತಿ. ಮಾರಕಾಸ್ತ್ರಗಳನ್ನು ಸಂಗ್ರಹ ಮಾಡುವುದು ಮುಸ್ಲಿಮರ ಸಂಸ್ಕೃತಿ. ಅಂಥವರಿಗೆ ನಾವು ಕನಿಕರ ತೋರಬೇಕಾ? ಅಂತಹ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಕೂಡ ಇದೇ ರೀತಿ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾವು ಶೇ. 80ರಷ್ಟು ಜನರಿದ್ದೇವೆ. ನೀವು ಕೇವಲ ಶೇ. 17ರಷ್ಟಿದ್ದೀರಿ. ಹಿಂದೂಗಳು ಖಡ್ಗ ಹಿಡ್ಕೊಂಡು ಬಂದರೆ ಕಷ್ಟವಾಗುತ್ತದೆ. ನಾವು ಉಫ್ ಎಂದು ಊದಿದರೆ ನೀವೆಲ್ಲ ಹಾರಿ ಹೋಗುತ್ತೀರ. ನೀವು ನಮ್ಮ ದೇಶದಲ್ಲಿ ಇರಬೇಕಾದರೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ನಮ್ಮ ಸಮಾಧಾನವನ್ನು ಪರೀಕ್ಷೆ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರುತ್ತಿತ್ತು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ಮುಸ್ಲಿಮರು 12 ಜನಕ್ಕೆ ಜನ್ಮ ನೀಡಿದರೆ ನಾವು 50 ಜನಕ್ಕೆ ಜನ್ಮ ಕೊಡುತ್ತೇವೆ. ಮೋದಿ ಮುಸ್ಲಿಮರನ್ನು ದೇಶದಿಂದ ಓಡಿಸುತ್ತಾರೆ ಎಂದು ಎಲ್ಲರೂ ಭಯಗೊಂಡಿದ್ದಾರೆ. ಅದೇ ಭಯದಿಂದ ಮುಸ್ಲಿಮರೆಲ್ಲರೂ ದೇಶ ಬಿಟ್ಟು ಓಡಿಹೋದರೆ ನಾವು ಶಾಂತಿಯಿಂದ ಬದುಕಬಹುದು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…