Featured

ಭಾರತಕ್ಕಿಂದು ಕರಾಳ ದಿನ : ಪುಲ್ವಾಮಾ ದಾಳಿಗೆ 3 ವರ್ಷ ; ಹುತ್ಮಾತ ವೀರ ಯೋಧರಿಗೆ ಗೌರವ ನಮನ – Vishwanews24

ಭಾರತಕ್ಕಿಂದು ಕರಾಳ ದಿನ : ಪುಲ್ವಾಮಾ ದಾಳಿಗೆ 3 ವರ್ಷ ; ಹುತ್ಮಾತ ವೀರ ಯೋಧರಿಗೆ ಗೌರವ ನಮನ – Vishwanews24

2019ರ ಫೆಬ್ರವರಿ 14ರಂದು ಉಗ್ರರ ಅಟ್ಟಹಾಸಕ್ಕೆ 40 ಯೋಧರು ಹುತಾತ್ಮರಾಗಿದ್ದರು..

ಫೆಬ್ರವರಿ 14 ಈ ದಿನವನ್ನು ಬಹುಶಹ ಭಾರತೀಯರು ಯಾರು ಮರೆಯಲು ಸಾಧ್ಯವೇ ಇಲ್ಲ.. ನೆಮ್ಮದಿಯಾಗಿ ಇದ್ದ ಭಾರತೀಯರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದ ದಿನ.ಭಾರತದ ಪ್ರತಿಯೊಬ್ಬ ಮನೆಮನೆಯ ಜನರು ಕಣ್ಣೀರಿಟ್ಟದಿನ..ಇಡೀ ವಿಶ್ವದಲ್ಲಿ ಪ್ರೇಮಿಗಳ ದಿನ ಮನೆ ಮಾಡಿದ್ರೆ, ಭಾರತದಲ್ಲಿ ಮಾತ್ರ ಉಗ್ರರ ಭೀಕರ ಅಟ್ಟಹಾಸಕ್ಕೆ ಯೋಧರ ಕೆಂಪು ನೆತ್ತರು ಹರಿಯುವಂತೆ ಮಾಡಿದ ಕರಾಳ ದಿನ.

ಇಂದಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ.. ಇಡೀ ದೇಶವೇ ಪ್ರೇಮಿಗಳ ದಿನಾಚರಣೆ ಸಂಭ್ರಮ, ಪರ-ವಿರೋಧ ಚರ್ಚೆಗಳಲ್ಲಿದ್ದರೆ ಅತ್ತ ಸಂಜೆ ವೇಳೆಗೆ ಸಿಡಿಲಬ್ಬರದ ಸುದ್ದಿಯೊಂದು ಕಿವಿಗಪ್ಪಳಿಸಿತ್ತು.  2019ರ ಫೆಬ್ರವರಿ 14 ಸಂಜೆ 3:15ರ ವೇಳೆಗೆ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು. ಬಹುಶಃ ಭಾರತ ದೇಶ ಎಂದೆಂದಿಗೂ ಮರೆಯದ ಭೀಕರ ಘಟನೆಯಿದು. ಮಧ್ಯಾಹ್ನತನಕ ಪ್ರೇಮಿಗಳ ದಿನಾಚರಣೆಯಲ್ಲಿ ಮಿಂದೆದ್ದಿದ್ದ ಜನರು ಸಂಜೆ ವೇಳೆಗೆ ಕಣ್ಣೀರಲ್ಲಿ ಕೈತೊಳೆದಿದ್ದರು.

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ  ರಾ.ಹೆ 44ರಲ್ಲಿ 78 ಸೇನಾ ವಾಹನಗಳು ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.

ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್​ ಪಖ್ತುನ್​ಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದ್ರೆ ಫೆಬ್ರವರಿ 26 ರಂದು ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

6 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

6 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

7 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

7 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

7 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

8 hours ago