ಅಹಮದಾಬಾದ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಅವರು ಇಂದು ಬೆಳಗ್ಗೆ ಅಹಮದಾಬಾದ್‍ಗೆ ಆಗಮಿಸಿದ ಸಂದರ್ಭದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ .
ವಿಮಾನ ನಿಲ್ದಾಣದಿಂದ ಸುಮಾರು ನಾಲ್ಕು ಕಿಮೀ ಮಾರ್ಗದಲ್ಲಿ ಪುಷ್ಪ ಮಳೆಗೆರೆದು ಸಾಂಸ್ಕøತಿಕ ಕಲಾ ತಂಡ ಮೇಳ್ಯಸಿದೆ , ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಜಾನ್ಸನ್ ಅವರನ್ನು ಬರಮಾಡಿಕೊಂಡರು.
ರಸ್ತೆ ಯುದ್ದಕ್ಕೂ ಸಾಂಪ್ರದಾಯಿಕ ಗುಜರಾತಿನ ನೃತ್ಯಗಳು ಮತ್ತು ಸಂಗೀತವನ್ನು ಪ್ರದರ್ಶಿಸುವ ತಂಡಗಳಿಂದ ಬ್ರಿಟಿಷ್ ಪ್ರಧಾನಿ ಅವರನ್ನು ಸ್ವಾಗತಿಸಲಾಯಿತು. ಆಶ್ರಮ ರಸ್ತೆಯ ಪಂಚತಾರಾ ಹೋಟೆಲ್‍ಗೆ ನಾಲ್ಕು ಕಿಮೀ ವ್ಯಾಪ್ತಿಯಲ್ಲಿ ನಿಯಮಿತ ಮಧ್ಯಂತರದಲ್ಲಿ 40 ವೇದಿಕೆಗಳನ್ನು ನಿರ್ಮಿಸಲಾಯಿತು, ಅಲ್ಲಿ ತಂಡಗಳು ಮತ್ತೆ ಸಾಂಪ್ರದಾಯಿಕ ಭಾರತೀಯ ನೃತ್ಯಗಳನ್ನು ಪ್ರದರ್ಶಿಸಿ ಜಾನ್ಸನ್‌ಅವರನ್ನು ಸ್ವಾಗತಿಸಿದರು.
ನಂತರ ಬ್ರಿಟನ್ ಪ್ರಧಾನಿಯವರು ರಾಜ್ಯದ ಪ್ರಮುಖ ಉದ್ಯಮಿಗಳ ಜೊತೆ ಸಭೆ ನಡೆಸಿದರು, ನಂತರ, ಅವರು ಪಂಚಮಹಲ್ ಜಿಲ್ಲಾಯ ಹಲೋಲ್ ಬಳಿಯ ಬ್ರಿಟಿಷ್ ನಿರ್ಮಾಣ ಸಲಕರಣೆಗಳ ಸಂಸ್ಥೆಯಾದ ಜೆಸಿಬಿಯ ಉತ್ಪಾದನಾ ಘಟಕಕ್ಕೆ ಬೇಟಿ ನೀಡಿದರು . ಬ್ರಿಟಿಷ್ ಪ್ರಧಾನಿ ಗಾಂಧಿನಗರದಲ್ಲಿನ ನಿರ್ಮಾಣ ಹಂತದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ವಿಶ್ವವಿದ್ಯಾಲಯದ ಕ್ಯಾಂಪಸ್‍ಗೂ ಭೇಟಿ ನೀಡಲಿದ್ದಾರೆ.
ನವದೆಹಲಿಗೆ ತೆರಳುವ ಮೊದಲು ಗಾಂಧಿನಗರದಲ್ಲಿರುವ ಸ್ವಾಮಿನಾರಾಯಣ ಪಂಥದ ಪ್ರಸಿದ್ಧ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ದೆಹಲಿಯಲ್ಲಿ ಜಾನ್ಸನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಸಬರಮತಿ ಆಶ್ರಮದಲ್ಲಿ ಜಾನ್ಸನ್
ಸಬರಮತಿ ಆಶ್ರಮಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ ಬೋರಿಸ್ ಜಾನ್ಸನ್ ಅವರು, ಚರಕವನ್ನು ತಿರುಗಿಸಿ ನೂಲು ತೆಗೆಯಲು ಪ್ರಯತ್ನಿಸಿದರು. ಬಳಿಕ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಅವರು ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ಅಭಿಪ್ರಾಯ ಬರೆದರು. “ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬಂದಿರುವುದು ಹಾಗೂ ಅವರು ಜಗತ್ತಿನ ಒಳಿತಿಗಾಗಿ ಪರಿವರ್ತನೆ ತರಲು ಸತ್ಯ ಮತ್ತು ಅಹಿಂಸೆಯ ಸರಳ ತತ್ವಗಳನ್ನು ಹೇಗೆ ಜತೆಗೂಡಿಸಿದರು ಎಂದು ಅರ್ಥ ಮಾಡಿಕೊಳ್ಳಲು ಬಂದಿರುವುದು ಬಹಳ ಖುಷಿಯ ಸಂಗತಿ” ಎಂದು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…