Categories: ಉಡುಪಿ

ಭಾರತದಲ್ಲಿ ಆನ್‌ಲೈನ್ ಗೇಮಿಂಗ್: ತಂತ್ರಜ್ಞಾನ, ನೀತಿ ಮತ್ತು ಸವಾಲುಗಳು’ ಪುಸ್ತಕ ಬಿಡುಗಡೆ ಮಾಡಿದ ಎನ್‌ಯುಜೆಎಸ್‌ – vishwanews24

ಭಾರತದಲ್ಲಿ ಆನ್‌ಲೈನ್ ಗೇಮಿಂಗ್: ತಂತ್ರಜ್ಞಾನ, ನೀತಿ ಮತ್ತು ಸವಾಲುಗಳು’ ಪುಸ್ತಕ ಬಿಡುಗಡೆ ಮಾಡಿದ ಎನ್‌ಯುಜೆಎಸ್‌

ಅಭಿವೃದ್ಧಿ ಹೊಂದುತ್ತಿರುವ ಆನ್‌ಲೈನ್ ಗೇಮಿಂಗ್ ಕ್ಷೇತ್ರದ ಬಗೆಗಿನ ಸಮಗ್ರ ವಿವರಗಳುಳ್ಳ ಕೃತಿ 

ಬೆಂಗಳೂರು :  ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (ಎನ್‌ಯುಜೆಎಸ್‌) ಪ್ರೊ. ಡಾ. ಶಮೀಕ್ ಸೇನ್ ಮತ್ತು ಪ್ರೊ. ಲವ್ಲಿ ದಾಸಗುಪ್ತ ಸಂಪಾದಕತ್ವದ ‘ಭಾರತದಲ್ಲಿ ಆನ್‌ಲೈನ್ ಗೇಮಿಂಗ್: ತಂತ್ರಜ್ಞಾನ, ನೀತಿ ಮತ್ತು ಸವಾಲುಗಳು’ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪ್ರಕಟಣೆಯು ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ ನ ವಿಶಿಷ್ಟ ಮತ್ತು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಜಗತ್ತನ್ನು ಹಾಗೂ ಅದರ ತಾಂತ್ರಿಕ ಪ್ರಗತಿಗಳು, ನಿಯಂತ್ರಕ ಚೌಕಟ್ಟುಗಳು ಮತ್ತು ನೀತಿ ಸಂಕೀರ್ಣತೆಗಳ ಕುರಿತು ಮಾಹಿತಿ, ಒಳನೋಟಗಳನ್ನು ನೀಡುತ್ತದೆ. ಪ್ರಮುಖ ಕಾನೂನು ತಜ್ಞರು, ವಿದ್ವಾಂಸರು ಮತ್ತು ಸಂಶೋಧಕರು ಈ ಪುಸ್ತಕಕ್ಕೆ ತಮ್ಮ ಮಾಹಿತಿ ಕೊಡುಗೆಗಳನ್ನು ನೀಡಿದು, ಪುಸ್ತಕವು ಈ ಬೆಳೆಯುತ್ತಿರುವ ಉದ್ಯಮವನ್ನು ರೂಪಿಸುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಸೂಕ್ಷ್ಮ ದೃಷ್ಟಿಕೋನವನ್ನು ಓದುಗರಿಗೆ ನೀಡುತ್ತದೆ.

ಬಹಳ ಎಚ್ಚರಿಕೆಯಿಂದ ಈ ಪುಸ್ತಕಗಳ ಅಧ್ಯಾಯಗಳನ್ನು ಲೇಖಕರು ರೂಪಿಸಿದ್ದಾರೆ. ಪುಸ್ತಕವು ಇಂಟರ್ ಸೆಕ್ಷನ್ ಆಫ್ ಲಾ ಮತ್ತು ಕೃತಕ ಬುದ್ಧಿಮತ್ತೆ, ವೆಬ್3, ಮೆಟಾವರ್ಸ್, ಫ್ಯಾಂಟಸಿ ಗೇಮಿಂಗ್ ಕುರಿತು ಚರ್ಚೆ ನಡೆಸುತ್ತದೆ. ಜೊತೆಗೆ ಜಾಗತಿಕ ಮತ್ತು ಭಾರತೀಯ ನಿಯಂತ್ರಕ ವಿಧಾನಗಳ ತುಲನಾತ್ಮಕ ವಿಶ್ಲೇಷಣೆ ನಡೆಸುತ್ತದೆ. ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಕಾನೂನು, ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಈ ಪುಸ್ತಕವು ವೇಗವಾಗಿ ಬೆಳೆಯುತ್ತಿರುವ ಈ ವಲಯದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಬ್ರಿಟನ್‌ನ ಚಾಪ್ಮನ್ ಮತ್ತು ಹಾಲ್ ಪ್ರಕಟಿಸಿರುವ ಈ ಪುಸ್ತಕದ ಪ್ರತಿಗಳು ರೌಟ್ಲೆಡ್ಜ್ ಪ್ಲಾಟ್‌ ಫಾರ್ಮ್‌ ನಲ್ಲಿ ಲಭ್ಯವಿದೆ.

ಎನ್‌ಯುಜೆಎಸ್ ನ ಟೆಕ್ನಾಲಜಿ, ಎಂಟರ್‌ಟೈನ್‌ಮೆಂಟ್ ಮತ್ತು ಸ್ಪೋರ್ಟ್ಸ್ ಲಾ ಸೆಂಟರ್ (ಸಿಟಿಇಎಸ್ಎಲ್) ಆಯೋಜಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮ ಮತ್ತು ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅದರ ಕೊಡುಗೆಯ ಕುರಿತು ಸಂವಾದ ನಡೆಯಿತು. ಸಮಾರಂಭದಲ್ಲಿಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಮಾಜಿ ಅಧ್ಯಕ್ಷ ವಿಕ್ರಮಜಿತ್ ಸೇನ್ ಮತ್ತು ಮದ್ರಾಸ್ ಮತ್ತು ಮೇಘಾಲಯ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ, ಅರುಣಾ ಶರ್ಮಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ,ನವದೆಹಲಿ ಏಮ್ಸ್‌ನ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ. ಯತನ್ ಪಾಲ್ ಸಿಂಗ್ ಬಲ್ಹರಾ, ಸ್ಕಿಲ್ ಆನ್‌ಲೈನ್ ಗೇಮ್ಸ್ ಇನ್‌ಸ್ಟಿಟ್ಯೂಟ್ ಸ್ಥಾಪಕ ಅಧ್ಯಕ್ಷ ಅಮೃತ್ ಕಿರಣ್ ಸಿಂಗ್ ಮತ್ತು ಖೈತಾನ್ & ಕಂ ಪಾಲುದಾರ ಸುದೀಪ್ತ ಭಟ್ಟಾಚಾರ್ಯ ಉಪಸ್ಥಿತರಿದ್ದರು.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರು, “ಭಾರತದ ಆನ್ ಲೈನ್ ಗೇಮಿಂಗ್ ಉದ್ಯಮವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದೆ ಮತ್ತು ಈ ಕ್ಷೇತ್ರದಲ್ಲಿ ಅದ್ಭುದ ಬೆಳವಣಿಗೆ ಸಾಧಿಸುವ ಪ್ರಚಂಡ ಸಾಮರ್ಥ್ಯ ಹೊಂದಿದೆ. ಈ ಪುಸ್ತಕದ ಪ್ರತಿಯೊಂದು ಅಧ್ಯಾಯವು ಕೂಡ ಭಾರತದ ಗೇಮಿಂಗ್‌ ನ ನಿರ್ದಿಷ್ಟ ಅಂಶಗಳನ್ನು ತಿಳಿಸುತ್ತದೆ ಮತ್ತು ಓದುಗರು ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಪುಸ್ತಕದ ಪರಿವಿಡಿ ನೋಡಿದರೆ ಸಂತೋಷವಾಗುತ್ತದೆ. ಈ ಪುಸ್ತಕಕ್ಕೆ ಕೃತಿಕಾರರು ಪಟ್ಟಿರುವ ಶ್ರಮ ಮತ್ತು ಸಂಶೋಧನೆ ಇದರಿಂದಲೇ ತಿಳಿಯುತ್ತದೆ. ಸುಂದರವಾಗಿ ಮುದ್ರಿತವಾಗಿರುವ ಮತ್ತು ಚಿಂತನಶೀಲವಾಗಿ ಎಡಿಟಿಂಗ್ ಮಾಡಿರುವ ಈ ಕೃತಿಯ ಲೇಖಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಈ ಉದ್ಯಮದ ಕುರಿತು ಆಸಕ್ತಿಯನ್ನು ಹೊಂದಿರುವ ಯಾರಾದರೂ ಈ ಕೃತಿಯನ್ನು ಅಪರೂಪದ ಸಂಪನ್ಮೂಲವಾಗಿ ನೋಡಬಹುದು. ಈ ಕೃತಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮೃತ್ ಕಿರಣ್ ಸಿಂಗ್ ಅವರು, “ಗೇಮಿಂಗ್ ಉದ್ಯಮವು ಭಾರತೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುವ ನವೀನ ಉದ್ಯಮವಾಗಿದೆ. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಡಾ. ಬಿಮಲ್ ರಾಯ್ ಅವರು ಅಭಿವೃದ್ಧಿಪಡಿಸಿದ ‘ಸ್ಕಿಲ್-ಚಾನ್ಸ್ ಫ್ರೇಮ್‌ ವರ್ಕ್’ ಮತ್ತು ಈ ಪುಸ್ತಕವು ನಿಯಂತ್ರಕರಿಗೆ ಉತ್ತಮ ನಿಯಂತ್ರಕ ನಿಯಮಗಳನ್ನು ರಚಿಸಲು ಸಹಾಯ ಮಾಡುವ ಮಾಹಿತಿಗಳನ್ನು ನೀಡುತ್ತದೆ. ಉದಾಹರಣೆಗೆ ಆನ್‌ಲೈನ್ ಗೇಮಿಂಗ್ ಇಂಡಸ್ಟ್ರಿಯನ್ನು ಇ-ಸ್ಪೋರ್ಟ್ಸ್, ವಿಡಿಯೋ ಗೇಮ್‌ ಗಳು, ರಿಯಲ್ ಮನಿ ಗೇಮ್‌ ಗಳು ಮತ್ತು ಫ್ರೀ ಟು ಪ್ಲೇ ಗೇಮ್‌ ಗಳಾಗಿ ವಿಭಜಿಸಲಾಗುತ್ತದೆ ಎಂಬ ಮಾತಿದೆ. ಇದು ಮೋದಿಯವರ ಸರ್ಕಾರ ಪ್ರಚಾರ ಮಾಡುತ್ತಿರುವ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಎಂಬ ತತ್ವಕ್ಕೆ ವಿರುದ್ಧವಾಗಿದೆ ಮತ್ತು ದುರಂತವಾಗಿದೆ. ಈ ನಿಟ್ಟಿನಲ್ಲಿ ಸ್ಕಿಲ್ ಮತ್ತು ಚಾನ್ಸ್ ಫ್ರೇಮ್‌ ವರ್ಕ್ ಈಗ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ನಿಯಂತ್ರಿಸಲು ಅಗತ್ಯವಿರುವ ಸಾಧನವನ್ನು ನೀಡುತ್ತದೆ. ನಾನು ಎನ್ ಯು ಜೆಎಸ್ ಮತ್ತು ಡಾ. ಬಿಮಲ್ ರಾಯ್ ಅವರಿಗೆ ಈ ಮೂಲಕ ಧನ್ಯವಾದ ಹೇಳುತ್ತಿದ್ದೇನೆ. ಈ ಎರಡು ವಿಚಾರಗಳಿಂದ ನಿಯಂತ್ರಕರಿಗೆ ದೊಡ್ಡ ಸಹಾಯವಾಗಲಿದೆ” ಎಂದು ಹೇಳಿದರು.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

14 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

16 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

17 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

17 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

17 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

17 hours ago