Featured

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,987 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ – Vishwanews24

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,987 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ – Vishwanews24

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18, 987 ನೂತನ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,40,20,730ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ (ಅಕ್ಟೋಬರ್ 14) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಕಳೆದ 24ಗಂಟೆಗಳಲ್ಲಿ 246 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶಾದ್ಯಂತ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 4,51,435ಕ್ಕೆ ತಲುಪಿದೆ ಎಂದು ಅಂಕಿಅಂಶದಲ್ಲಿ ಹೇಳಿದೆ.

ಕಳೆದ 20 ದಿನಗಳಿಂದ 30,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,06,586ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಕೋವಿಡ್ ಚೇತರಿಕೆ ಪ್ರಮಾಣ ಶೇ.98.07ಕ್ಕೆ ಏರಿಕೆಯಾಗಿದೆ.

ಕಳೆದ 24ಗಂಟೆಗಳಲ್ಲಿ 1067 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಬುಧವಾರ 13,01,083 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ದೇಶಾದ್ಯಂತ 58,76,64,525 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

16 hours ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

16 hours ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

16 hours ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

17 hours ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

17 hours ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

18 hours ago