ನವದೆಹಲಿ: ದೇಶದಾದ್ಯಂತ ಕೋವಿಡ್ -19 ಪ್ರಕರಣ ಹೆಚ್ಚುತ್ತಿದ್ದು ನಾಲ್ಕನೇ ಅಲೆಗೆ ಸಾಕ್ಷಿಯಾಗಿರುವಂತೆಯೇ, ಭಾರತದಲ್ಲಿ ಪ್ರಾಣಿಗಳಿಗೆ ಮೊದಲ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಪ್ರಾಣಿಗಳಿಗೆ ಮೊಟ್ಟಮೊದಲ ಸ್ವದೇಶಿ ಕೋವಿಡ್ -19 ಲಸಿಕೆ ಅನೋಕೊವಾಕ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ.
ಪ್ರಾಣಿಗಳಿಗೆ ಹೊಸ ಲಸಿಕೆ ಅನೋಕೊವಾಕ್ಸ್ ಅನ್ನು ಹರಿಯಾಣ ಮೂಲದ ಕೃಷಿ-ಸಂಶೋಧನಾ ಸಂಸ್ಥೆ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವಿನ್ಸ್ (ಎನ್‌ಆರ್‌ಸಿ) ಅಭಿವೃದ್ಧಿಪಡಿಸಿದೆ.
ಈ ಹೊಸ ಕೊವಿಡ್ ಲಸಿಕೆ ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳಿಗೆ ಬಹಳ ಸುರಕ್ಷಿತವಾಗಿದೆ. ವಿಜ್ಞಾನಿಗಳ ಅವಿರತ ಕೊಡುಗೆಗಳಿಂದಾಗಿ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿದೆ. ಇದು ನಿಜವಾಗಿಯೂ ದೊಡ್ಡ ಸಾಧನೆಯಾಗಿದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಹೇಳಿಕೆಯಲ್ಲಿ ಅನೋಕೊವಾಕ್ಸ್‌ನಿಂದ ಉಂಟಾಗುವ ರೋಗನಿರೋಧಕ ಶಕ್ತಿಯು SARS-CoV-2 ನ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಎಂದು ಹೇಳಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…