Featured

ಭಾರತದ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅದ್ಭುತವಾದದ್ದು , ರಾಷ್ಟ್ರಕ್ಕಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ: ಧೋನಿಗೆ ಪ್ರಧಾನಿ ಮೋದಿ -Vishwanews24

ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದು,  ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ್ದಾರೆ.

ನಾಯಕ ಎಂಎಸ್ ಧೋನಿಯವರು ಅಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಧೋನಿಯವರಿಗೆ ಪತ್ರ ಬರೆದಿರುವ ಮೋದಿಯವರು, ಧೋನಿಯವರು ಭಾರತದ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅದ್ಭುತವಾದದ್ದು. ಕ್ರಿಕೆಟ್‍ನಲ್ಲಿ ಧೋನಿಯವರನ್ನು ಇಷ್ಟಪಡದವರನ್ನು ಹುಡುಕುವುದು ಕಷ್ಟ ಎಂದು ಮೋದಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಧೋನಿ ಸೇನೆಗೆ ಸೇರಿದ ವಿಚಾರದ ಬಗ್ಗೆ ಪತ್ರದಲ್ಲಿ ಬರೆದಿರುವ ಮೋದಿಯವರು, ಧೋನಿಯವರಿಗೆ ಭಾರತೀಯ ಸೇನೆಯ ಮೇಲೆ ಇರುವ ಪ್ರೀತಿ ಅಪಾರವಾದದ್ದು ಎಂದಿದ್ದಾರೆ. ಜೊತೆಗೆ ಧೋನಿಯವರು ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಈಗಿನ ಯುವಜನತೆ ಸ್ಪೂರ್ತಿಯಾಗಿದ್ದಾರೆ. ಧೋನಿಯವರ ಸಾಧನೆಯನ್ನು 130 ಕೋಟಿ ಭಾರತೀಯರು ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

ಧೋನಿಯವರು ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾರೆ. ಜೊತೆಗೆ 2011ರ ವಿಶ್ವಕಪ್‍ನಲ್ಲಿ ಅವರು ಕೂಲ್ ಆಗಿ ಆಡಿ ಕಪ್ ಅನ್ನು ಗೆದ್ದುಕೊಟ್ಟಿದ್ದಾರೆ. 2007ರ ಟಿ-20 ವಿಶ್ವಕಪ್ ಅನ್ನು ಗೆದ್ದು ಅವರಲ್ಲಿರುವ ಛಲವನ್ನು ತೋರಿಸಿದ್ದಾರೆ. ಇಂಥಹ ಅದ್ಭುತ ಕ್ರೀಡಾಪಟುವಿನ ನಿವೃತ್ತಿ ನಂತರದ ಜೀವನ ಚೆನ್ನಾಗಿರಲಿ. ಮುಂದೆ ಅವರು ತಮ್ಮ ಕುಟುಂಬದ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿ ಎಂದು ಮೋದಿಯವರು ಪತ್ರದ ಮೂಲಕ ಶುಭಕೋರಿದ್ದಾರೆ.

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

7 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

7 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

7 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

7 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

7 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

7 hours ago