Featured

ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – vishwanews24

ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಗ್ರಾಮೀಣ್ ಡಾಕ್ ಸೇವಾ ಜಿಡಿಎಸ್ ಪೋಸ್ಟ್ ಗೆ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಸುಮಾರು 28000+ ಹುದ್ದೆಗಳಿಗೆ ಆಗುತ್ತಿದೆ. ಭಾರತ ಅಂಚೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು 2026 ಜನವರಿ 31ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 14ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 2026 ಜನವರಿ 01ರಂತೆ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಅಭ್ಯರ್ಥಿಗಳು ಭಾರತ ಅಂಚೆ ಜಿಡಿಎಸ್ ನೇಮಕಾತಿ 2026 ಗಾಗಿ ಸಂಪೂರ್ಣ ವಿವರಗಳನ್ನು ಕೆಳಗೆ ಪರಿಶೀಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು:

https://indiapost.gov.in/gdsonlineengagement

ಪ್ರಮುಖ ದಿನಾಂಕಗಳು

ಅಧಿಸೂಚನೆ ದಿನಾಂಕ: 30 ಜನವರಿ 2026

ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಫೆಬ್ರವರಿ 2026

ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಫೆಬ್ರವರಿ 2026

ತಿದ್ದುಪಡಿ ದಿನಾಂಕ: 18 – 19 ಫೆಬ್ರವರಿ 2026

ಮೆರಿಟ್ ಪಟ್ಟಿ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

ವಿವರಗಳಿಗೆ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಜಿಡಿಎಸ್ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.

ಯಾರು ಅರ್ಜಿ ಸಲ್ಲಿಸಬಹದು?

ಅಭ್ಯರ್ಥಿಗಳು 10ನೇ ತರಗತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

ಅರ್ಜಿ ಶುಲ್ಕ

ಜನರಲ್/ಒಬಿಸಿ:100 ರೂ. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 0 ರೂ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ವಯೋಮಿತಿ

ಕನಿಷ್ಠ ವಯಸ್ಸು- 18 ವರ್ಷಗಳು

ಗರಿಷ್ಠ ವಯಸ್ಸು 40 ವರ್ಷಗಳು

2026 ಜನವರಿ 1ಕ್ಕೆ ಅನ್ವಯಿಸುವಂತೆ ವಯೋಮಿತಿ ನಿರ್ಧರಿಸಲಾಗುವುದು. ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು.

ಒಟ್ಟು ಹುದ್ದೆಗಳು

ಸುಮಾರು 28000+ ಹುದ್ದೆಗಳು

ಹುದ್ದೆಯ ಹೆಸರು

ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026

ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ), ಡಾಕ್ ಸೇವಕ್

* ವಿದ್ಯಾರ್ಹತೆ

ಅಭ್ಯರ್ಥಿಗಳು 10ನೇ ತರತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

* ಆಯ್ಕೆ ಪ್ರಕ್ರಿಯೆ

ಮೆರಿಟ್ ಪಟ್ಟಿಯ ಆಧಾರದಲ್ಲಿ ಆಯ್ಕೆ

ದಾಖಲೆ ಪರಿಶೀಲನೆ

ಅಂತಿಮ ಆಯ್ಕೆ

Vishwa News 24

Recent Posts

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

14 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

15 hours ago

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ – vishwanews24

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…

15 hours ago

ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…

17 hours ago

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…

17 hours ago

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ – vishwanews24

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…

17 hours ago