ಮಂಗಳೂರು, :ಒಬ್ಬ ಮೋದಿ ಬಂದೇ ವಿರೋಧಿಗಳ ಸ್ಥಿತಿ ಹೀಗಾಗಿದೆ. ಇನ್ನು ನಾನೂ ಬಂದರೆ ಏನಾಗಬೇಡ. ನಾನು ರಾಜಕೀಯಕ್ಕೆ ಬರುವುದಿಲ್ಲ, ನಮ್ಮ ಪರಿವಾರದಿಂದ ನರೇಂದ್ರ ಭಾಯ್ ಒಬ್ಬರೇ ಸಾಕು, ದೇಶವನ್ನು ಉನ್ನತಿಗೆ ಕೊಂಡೊಯ್ಯುವುದಕ್ಕೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಕರಾವಳಿಯ ದೇವಾಲಯ ಭೇಟಿಗಾಗಿ, ಬಜ್ಪೆ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದಿಳಿದ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ, ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ . ಮಹಾಘಟ ಬಂಧನ್ ಬಗ್ಗೆ ಕಿಡಿಕಾರಿದ್ದಾರೆ.
2014 ರಲ್ಲಿ ದೇಶದ ಜನತೆ ಮೋದಿ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಪರ ಫಲಿತಾಂಶ ನೀಡಿದ್ದಾರೆ. ಇದೇ ಫಲಿತಾಂಶ 2019 ರ ಲೋಕಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ. ಭಾರತೀಯ ಜನತಾ ಪಕ್ಷವೂ 300ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು, ಮತ್ತೆ ಆಡಳಿತ ಪಕ್ಷವಾಗಿ ಹೊರಹೊಮ್ಮಲಿದೆ. ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಮೋದಿ ಸರ್ಕಾರ ಏನು ಮಾಡಲಿಲ್ಲ ಹೇಳಿ? ಆದರೆ ಇದ್ಯಾವುದು ಕೂಡಾ ಕಾಂಗ್ರೆಸ್ ಮನೆಗೆ ತಲುಪಲಿಲ್ಲ ಎಂದು ಹೇಳಿದರು.
ಮಮತಾ ಬ್ಯಾನರ್ಜಿಗೆ ನಾನೆಂದೂ ಬೆಂಬಲ ಕೊಟ್ಟಿಲ್ಲ, ಕೊಡುವುದೂ ಇಲ್ಲ, ನಮ್ಮ ಪರಿವಾರದ ನರೇಂದ್ರರನ್ನು ಬಿಡುವ ಪ್ರಶ್ನೆಯೇ ಬರುವುದಿಲ್ಲ, ಯಾರೋ ಮಾಧ್ಯಮದವರು ಹಿಂದೆ ನನ್ನ ಹೇಳಿಕೆ ತಿರುಚಿ ಬರೆದಿದ್ದಾರೆ.
ಘಟಬಂಧನ ಬರಲಿ, ಪ್ರಿಯಾಂಕ ಗಾಂಧಿ ಬರಲಿ, ಪ್ರಿಯದರ್ಶಿನಿಯೇ ಬರಲಿ, 2019ರಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲಾಗದು, ಜನರ ಆಶೀರ್ವಾದ ಮೋದಿ ಮೇಲಿದೆ ಎಂದು ಪ್ರಹ್ಲಾದ್ ಮೋದಿ ವಿಶ್ವಾಸವ್ಯಕ್ತಪಡಿಸಿದರು.
ಎನ್ ಡಿಎ ಸರಕಾರ ಕಳೆದ 5 ವರುಷಗಳಲ್ಲಿ ಯಾವ ಅಭಿವೃದ್ಧಿ ಮಾಡಿಲ್ಲ ಹೇಳಿ? ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ, ಜನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನವರಿಗೆ ಮಾತ್ರ ಏನು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಯಾಕೆಂದರೆ ಅವರ ಮನೆಗೆ ಏನೂ ಹೋಗಿಲ್ಲ. ದೇಶದ ಜನತೆಯ ಹೃದಯದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿ ಅನ್ನೋದಿದೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…