ಬೆಂಗಳೂರು: ಶ್ರೀ ಹರಿಕೋಟಾದಿಂದ ಜು. 22 ರಂದು ನಭಕ್ಕೆ ಚಿಮ್ಮಿದ ಚಂದ್ರಯಾನ 2 ನೌಕೆ ಚಂದ್ರನ ಕಕ್ಷೆ ಪ್ರವೇಶಿಸಿದೆ.ಉಡಾವಣೆ ಮಾಡಿದ 28 ದಿನಗಳ ಬಳಿಕ ಮಂಗಳವಾರ ಬೆಳಗ್ಗೆ 9.02ಕ್ಕೆ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರ್ಪಡೆಗೊಳಿಸಲಾಯಿತು ಎಂದು ಇಸ್ರೋ ಹೇಳಿದೆ.
ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿತ್ತು ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಪ್ರಭಾವಳಿಯನ್ನು ಪ್ರವೇಶಿಸಿದ ಬಳಿಕ ಈ ಭಾಹ್ಯಾಕಾಶ ನೌಕೆ ತನ್ನ ಚಲನೆಯ ವೇಗವನ್ನು ಕುಂಠಿತಗೊಳಿಸುತ್ತಾ, ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಬಳಿಕ ಚಂದ್ರನ ಕಕ್ಷೆಯು 100 ಕಿ.ಮೀ ಸುತ್ತ ಈ ಬಾಹ್ಯಕಾಶ ನೌಕೆ ಚಲಿಸುವಂತೆ ಮಾಡಲು ಐದು ಹಂತದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.ಲ್ಯಾಂಡರ್ ಅನ್ನು ಚಂದ್ರನಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎರಡು ಬಾರಿ ಅದರ ಕಕ್ಷೆಯ ಎತ್ತರವನ್ನು ಎತ್ತರಿಸಲಾಗುವುದು. ಸೆ.7ರಂದು ಅದನ್ನು ಚಂದಾಮಾಮನ ಅಂಗಳದ ಮೇಲೆ ಇಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣಾ ನೆಲೆಯಿಂದ ಚಂದ್ರಯಾನ-2 ಉಪಗ್ರಹವನ್ನು ಜಿಎಸ್ಎಲ್ವಿ ಮಾರ್ಕ್ 3 ಉಡಾಹಕದ ಮೂಲಕ ಜು.22ರಂದು ಉಡಾವಣೆ ಮಾಡಲಾಗಿತ್ತು. ಮೊದಲಿಗೆ ಉಪಗ್ರಹವನ್ನು ಭೂ ಕಕ್ಷೆಯಲ್ಲಿರಿಸಿ, ಹಂತ ಹಂತರವಾಗಿ ಕಕ್ಷೆಯನ್ನು ಎತ್ತರಿಸಿ, ಇದೀಗ ಚಂದ್ರನ ಕಕ್ಷೆಗೆ ರವಾನಿಸಲಾಗಿದೆ.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…