ಲಂಡನ್: 23 ವರ್ಷದ ಭಾರತೀಯ ಮೂಲದ ವೈದ್ಯೆಯೊಬ್ಬಳು ಈಗ ಮಿಸ್ ಇಂಗ್ಲೆಂಡ್ ಕಿರೀಟವನ್ನು ಧರಿಸಿದ್ದಾಳೆ .
ಇಂಗ್ಲೆಂಡ್‍ನ ಡರ್ಬಿ ನಗರದಲ್ಲಿ ವಾಸವಾಗಿರುವ ಭಾರತೀಯ ಮೂಲದ ಯುವತಿ ಭಾಷಾ ಮುಖರ್ಜಿ 12 ಜನ ಸ್ಪರ್ಧಾಳುಗಳು ಇದ್ದರೂ 2019ರ ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಯಾಗಿದ್ದಾರೆ.
ಮಿಸ್ ಇಂಗ್ಲೆಂಡ್ ಆಗಿ ಹೊರಹೊಮ್ಮಿದ ಭಾಷಾ ಮುಖರ್ಜಿ ನಂತರ ಕೆಲವೇ ಗಂಟೆಗಳಲ್ಲಿ ಲಿಂಕನ್ಶೈರ್‍ನ ಬೋಸ್ಟನ್‍ನಲ್ಲಿರುವ ಒಂದು ಆಸ್ಪತ್ರೆಗೆ ಕಿರಿಯ ವೈದ್ಯರಾಗಿ ಕೆಲಸಕ್ಕೆ ಸೇರಿದ್ದಾರೆ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮಾತನಾಡಿರುವ ಭಾಷಾ ಮುಖರ್ಜಿ ಅವರು, ಕೆಲವರು ಮಾಡೆಲಿಂಗ್ ಹುಡುಗಿಯರನ್ನು ಕೇವಲ ಎಂದು ಭಾವಿಸಿರುತ್ತಾರೆ. ಆದರೆ ನಾವು ಕೂಡ ಇಲ್ಲಿ ಒಳ್ಳೆಯ ಉದ್ದೇಶವನ್ನು ಇಟ್ಟಿಕೊಂಡು ಬಂದಿರುತ್ತೇವೆ ಎಂದು ಯಾರು ಅಂದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾಷಾ ಮುಖರ್ಜೀ ಅವರು ಭಾರತದಲ್ಲಿ ಜನಿಸಿದರು, ಆದರೆ ಅವರು ಒಂಬತ್ತು ವರ್ಷದವಳಿದ್ದಾಗ ಅವರ ಕುಟುಂಬ ಯುಕೆಗೆ ಸ್ಥಳಾಂತರಗೊಂಡಿತು. ಅವರು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ವಿಜ್ಞಾನ, ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮಿಸ್ ಇಂಗ್ಲೆಂಡ್ ವಿಜೇತರಾಗಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪ್ರವೇಶಿಸಲಿದ್ದಾರೆ ಮತ್ತು ಮಾರಿಷಸ್ ಗೆ ರಜಾ ದಿನಕ್ಕೆ ಹೋಗುವ ಅವಕಾಶವನ್ನು ಅವರು ಪಡೆದಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…