Featured

ಭಾರತ ಅಮೋಘ ಫಾರ್ಮ್ನಲ್ಲಿದೆ, ಅವರೆದುರು ಅತ್ಯುತ್ತಮ ಪ್ರದರ್ಶನ ನೀಡಬಲ್ಲೆವೆಂಬ ವಿಶ್ವಾಸ ನಮ್ಮದು’ : ಇಂಗ್ಲೆಂಡ್‌ ಕ್ರಿಕೆಟಿಗ ಬೆನ್‌ ಸ್ಟೋಕ್ಸ್‌. -Vishwanews24

ಲಂಡನ್‌: “ಇದು ನಮ್ಮ ವಿಶ್ವಕಪ್‌. ಕಳೆದ 4 ವರ್ಷಗಳಿಂದ ನಮಗೆ ಎಲ್ಲ ಕಡೆಗಳಿಂದಲೂ ಅಮೋಘ ಬೆಂಬಲ. ಪ್ರೋತ್ಸಾಹ ಲಭಿಸುತ್ತಿದೆ. ಯಾವ ಕಾರಣಕ್ಕೂ ನಾವು ಹಿಂದಡಿ ಇಡಲಾರೆವು. ನಾವು ಹೇಗೆ ಎಣಿಸಿದ್ದೇವೋ ಅದೇ ರೀತಿ ಮುಂದೆ ಸಾಗಲಿದ್ದೇವೆ’ ಎಂದಿದ್ದಾರೆ ಇಂಗ್ಲೆಂಡ್‌ ಕ್ರಿಕೆಟಿಗ ಬೆನ್‌ ಸ್ಟೋಕ್ಸ್‌.

ಮಂಗಳವಾರ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಶರಣಾದ ಬಳಿಕ ಸ್ಟೋಕ್ಸ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. 64 ರನ್‌ ಜಯದೊಂದಿಗೆ ಆಸ್ಟ್ರೇಲಿಯ ಸೆಮಿಫೈನಲ್‌ ತಲುಪಿದರೆ, ಇಂಗ್ಲೆಂಡ್‌ ಮೇಲೀಗ ತೀವ್ರ ಒತ್ತಡ ಬಿದ್ದಿದೆ.

ಇದು ಇಂಗ್ಲೆಂಡಿಗೆ ಎದುರಾದ ಸತತ ಎರಡನೇ ಸೋಲು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಅದು ಸಾಮಾನ್ಯ ತಂಡವೆನಿಸಿದ ಶ್ರೀಲಂಕಾಕ್ಕೆ ಶರಣಾಗಿತ್ತು. ಈ ಎರಡೂ ಪಂದ್ಯಗಳಲ್ಲಿ ಸ್ಟೋಕ್ಸ್‌ 82 ಹಾಗೂ 89 ರನ್‌ ಮಾಡುವ ಮೂಲಕ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು.

“ನಿಜ, ಸೋಲಿನಿಂದ ನಿರಾಸೆಯಾಗಿದೆ. ಗೆಲುವಿಗಾಗಿ ಎಲ್ಲರೂ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ನನ್ನ ಬ್ಯಾಟಿನಿಂದ ರನ್‌ ಬರುತ್ತಿದೆ ನಿಜ, ಆದರೆ ಇದು ಗೆಲುವಾಗಿ ಪರಿವರ್ತನೆ ಆಗುವುದು ಮುಖ್ಯ’ ಎಂದು ಸ್ಟೋಕ್ಸ್‌ ಹೇಳಿದರು.

“ನಮ್ಮ ಮುಂದೆ ಇನ್ನೆರಡು ಪಂದ್ಯಗಳಿವೆ. ಸಂಪೂರ್ಣ ಭಿನ್ನ ವಾತಾವರಣದಲ್ಲಿ ನಾವಿದನ್ನು ಆಡಬೇಕಿದೆ. ನಮ್ಮ ಯೋಜನೆಯಂತೆಯೇ ಇದನ್ನು ಆಡಲಿದ್ದೇವೆ. ಭಾರತದೆದುರು ನಾವು ಉತ್ತಮ ತವರಿನ ದಾಖಲೆ ಹೊಂದಿದ್ದೇವೆ. ಆದರೆ ಭಾರತ ಅಮೋಘ ಫಾರ್ಮ್ನಲ್ಲಿದೆ. ಅವರೆದುರು ಅತ್ಯುತ್ತಮ ಪ್ರದರ್ಶನ ನೀಡಬಲ್ಲೆವೆಂಬ ವಿಶ್ವಾಸ ನಮ್ಮದು’ ಎಂದರು ಸ್ಟೋಕ್ಸ್‌.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago