ಲಂಡನ್: “ಇದು ನಮ್ಮ ವಿಶ್ವಕಪ್. ಕಳೆದ 4 ವರ್ಷಗಳಿಂದ ನಮಗೆ ಎಲ್ಲ ಕಡೆಗಳಿಂದಲೂ ಅಮೋಘ ಬೆಂಬಲ. ಪ್ರೋತ್ಸಾಹ ಲಭಿಸುತ್ತಿದೆ. ಯಾವ ಕಾರಣಕ್ಕೂ ನಾವು ಹಿಂದಡಿ ಇಡಲಾರೆವು. ನಾವು ಹೇಗೆ ಎಣಿಸಿದ್ದೇವೋ ಅದೇ ರೀತಿ ಮುಂದೆ ಸಾಗಲಿದ್ದೇವೆ’ ಎಂದಿದ್ದಾರೆ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್.
ಮಂಗಳವಾರ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಶರಣಾದ ಬಳಿಕ ಸ್ಟೋಕ್ಸ್ ಈ ಪ್ರತಿಕ್ರಿಯೆ ನೀಡಿದ್ದಾರೆ. 64 ರನ್ ಜಯದೊಂದಿಗೆ ಆಸ್ಟ್ರೇಲಿಯ ಸೆಮಿಫೈನಲ್ ತಲುಪಿದರೆ, ಇಂಗ್ಲೆಂಡ್ ಮೇಲೀಗ ತೀವ್ರ ಒತ್ತಡ ಬಿದ್ದಿದೆ.
ಇದು ಇಂಗ್ಲೆಂಡಿಗೆ ಎದುರಾದ ಸತತ ಎರಡನೇ ಸೋಲು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಅದು ಸಾಮಾನ್ಯ ತಂಡವೆನಿಸಿದ ಶ್ರೀಲಂಕಾಕ್ಕೆ ಶರಣಾಗಿತ್ತು. ಈ ಎರಡೂ ಪಂದ್ಯಗಳಲ್ಲಿ ಸ್ಟೋಕ್ಸ್ 82 ಹಾಗೂ 89 ರನ್ ಮಾಡುವ ಮೂಲಕ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
“ನಿಜ, ಸೋಲಿನಿಂದ ನಿರಾಸೆಯಾಗಿದೆ. ಗೆಲುವಿಗಾಗಿ ಎಲ್ಲರೂ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ನನ್ನ ಬ್ಯಾಟಿನಿಂದ ರನ್ ಬರುತ್ತಿದೆ ನಿಜ, ಆದರೆ ಇದು ಗೆಲುವಾಗಿ ಪರಿವರ್ತನೆ ಆಗುವುದು ಮುಖ್ಯ’ ಎಂದು ಸ್ಟೋಕ್ಸ್ ಹೇಳಿದರು.
“ನಮ್ಮ ಮುಂದೆ ಇನ್ನೆರಡು ಪಂದ್ಯಗಳಿವೆ. ಸಂಪೂರ್ಣ ಭಿನ್ನ ವಾತಾವರಣದಲ್ಲಿ ನಾವಿದನ್ನು ಆಡಬೇಕಿದೆ. ನಮ್ಮ ಯೋಜನೆಯಂತೆಯೇ ಇದನ್ನು ಆಡಲಿದ್ದೇವೆ. ಭಾರತದೆದುರು ನಾವು ಉತ್ತಮ ತವರಿನ ದಾಖಲೆ ಹೊಂದಿದ್ದೇವೆ. ಆದರೆ ಭಾರತ ಅಮೋಘ ಫಾರ್ಮ್ನಲ್ಲಿದೆ. ಅವರೆದುರು ಅತ್ಯುತ್ತಮ ಪ್ರದರ್ಶನ ನೀಡಬಲ್ಲೆವೆಂಬ ವಿಶ್ವಾಸ ನಮ್ಮದು’ ಎಂದರು ಸ್ಟೋಕ್ಸ್.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…