Featured

ಭಾರತ ಎಂದಿಗೂ ಹಿಂದೂ ರಾಷ್ಟ್ರ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು ಮತ್ತು ಅವರ ಕೈಯಲ್ಲಿ ಅಧಿಕಾರ ಇರಬೇಕು’ : ಮೋಹನ್ ಭಾಗವತ್ -Vishwanews24

ನಾಗಪುರ/ಮುಂಬೈ: ‘ಹಿಂದೂ ಸಮುದಾಯ ಮತ್ತು ಭಾರತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ‘ಗುಂಪುಹಲ್ಲೆ ಮತ್ತು ಗುಂಪುಹತ್ಯೆ’ (ಲಿಂಚಿಂಗ್‌) ಎಂಬ ಪದಗಳನ್ನು ಬಳಸುತ್ತಿವೆ. ಹಿಂದೂ ಸಮಾಜಕ್ಕೆ ಕಳಂಕ ತರುವ ಉದ್ದೇಶದಿಂದ ಸಂಚು ರೂಪಿಸಲಾಗುತ್ತಿದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದ್ದಾರೆ.

ನಾಗಪುರದಲ್ಲಿನ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ನಮ್ಮ ಸ್ವಯಂಸೇವಕರು ಇಂತಹ ಹಲ್ಲೆ–ಹತ್ಯೆಗಳಲ್ಲಿ ಭಾಗಿಯಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಗುಂಪುಹಲ್ಲೆ–ಹತ್ಯೆಗಳನ್ನು ಯಾವುದೋ ಒಂದು ಧರ್ಮದ ಜನರ ವಿರುದ್ಧ ಮಾತ್ರ ನಡೆಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಒಂದು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಇದಕ್ಕೆ ಸಂಬಂಧಿಸಿ ಭಯ ಹುಟ್ಟಿಸಲಾಗುತ್ತಿದೆ. ಇದು ಒಂದು ಸಂಚು. ಈ ಮೂಲಕ ಹಿಂದೂಗಳನ್ನು ಗುಂಪುಹತ್ಯೆಯ ಬ್ರ್ಯಾಂಡ್ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಎರಡೂ ಧರ್ಮದವರು ಈ ರೀತಿಯ ಹಲ್ಲೆ ಮತ್ತು ಹತ್ಯೆಗಳನ್ನು ನಡೆಸಿದ್ದಾರೆ. ಆದರೆ, ಒಂದು ಧರ್ಮದ ಜನರನ್ನೇ ಇಂತಹ ದಾಳಿಗಳಿಗೆ ಗುರಿ ಮಾಡಲಾಗುತ್ತಿದೆ ಎಂಬಂತಹ ವರದಿಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿದೆ. ಇದು ಸಂಚು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು’ ಎಂದು ಅವರು ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಕರೆ ನೀಡಿದ್ದಾರೆ.

‘ಗುಂಪುಹತ್ಯೆ–ಹಲ್ಲೆ ಎಂಬುದು ಭಾರತದ ಸಂಸ್ಕೃತಿಯಲ್ಲಿ ಇಲ್ಲ, ನಮ್ಮ ಸಂವಿಧಾನದಲ್ಲೂ ಅದಕ್ಕೆ ಅವಕಾಶವಿಲ್ಲ. ಇದು ಪಶ್ಚಿಮದ ದೇಶಗಳಲ್ಲಿ ಇರುವಂತಹುದು. ಅಲ್ಲಿ ಒಂದು ಧರ್ಮದವರು ಇಂತಹ ಹಲ್ಲೆ–ಹತ್ಯೆ ನಡೆಸುತ್ತಾರೆ. ಭಾರತಕ್ಕೆ ಗುಂಪುಹತ್ಯೆಯ ಹಣೆಪಟ್ಟಿಯನ್ನು ಹಚ್ಚುವ ಕೆಲಸ ಆಗಬಾರದು’ ಎಂದು ಅವರು ಕರೆ ನೀಡಿದ್ದಾರೆ.

‘ಭಾರತ ಮತ್ತು ಭಾರತೀಯತೆಯ ಅಸ್ಮಿತೆಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಭಾರತವು ಹಿಂದುಸ್ಥಾನ ಮತ್ತು ಹಿಂದೂ ರಾಷ್ಟ್ರ ಎಂಬ ನಿಲುವಿಗೆ ಆರ್‌ಎಸ್‌ಎಸ್‌ ಬದ್ಧವಾಗಿದೆ’ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

‘ಹಿಂದುತ್ವವು ಬಹುತ್ವವನ್ನು ಒಪ್ಪುತ್ತದೆ ಎಂಬ ಮಾತು ಕೇಳಲು ಮಾತ್ರ ಚೆನ್ನಾಗಿರುತ್ತದೆ. ಆದರೆ ಜಗತ್ತು ಶಕ್ತಿವಂತರ ಮಾತನ್ನು ಮಾತ್ರ ಪಾಲಿಸುತ್ತದೆ. ಹಿಂದೂಗಳು ಒಗ್ಗಟ್ಟಾದಾಗ ಮತ್ತು ಹಿಂದೂಗಳ ಕೈಯಲ್ಲಿ ಅಧಿಕಾರವಿದ್ದಾಗ ಮಾತ್ರ ಜಗತ್ತು ಅವರ ಮಾತನ್ನು ಕೇಳುತ್ತದೆ. ಹೀಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು ಮತ್ತು ಅವರ ಕೈಯಲ್ಲಿ ಅಧಿಕಾರ ಇರಬೇಕು’ ಎಂದು ಅವರು ಹೇಳಿದ್ದಾರೆ.

 

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

12 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

17 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

17 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

17 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago