ಪಣಜಿ : ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ಬಾಲಿವುಡ್ ಜಿಹಾದ್‍ನ ಷಡ್ಯಂತ್ರವಿದೆ ಎಂದು ಕನ್ನಡ ಚಲನಚಿತ್ರ ವಿತರಕ, ಉದ್ಯಮಿ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.
ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ಆಯೋಜಿಸಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ “ಬಾಲಿವುಡ್‍ನ ಡ್ರಗ್ಸ್ ಜಿಹಾದ್” ಕುರಿತು ಮಾತನಾಡಿ, 18 ರಿಂದ 24 ವರ್ಷ ವಯೋ ಗುಂಪಿನ ಯುವಕರನ್ನು ಅವರು ಹಿಂದೂಗಳಾಗಿದ್ದಾರೆ ಎಂದು ಮರೆತು ಅವರ ಮೇಲೆ ಪಾಶ್ಚಾತ್ಯ, ಮುಸಲ್ಮಾನ ವಿಚಾರಸರಣಿಯ ಪ್ರಭಾವ ಹೇಗೆ ಬೆಳೆಸಬಹುದು ಎಂಬ ಪ್ರಯತ್ನವನ್ನು ಬಾಲಿವುಡ್‍ನ ಚಲನಚಿತ್ರಗಳ ಮಾಧ್ಯಮದಿಂದ ಮಾಡಲಾಗುತ್ತಿದೆ ಎಂದರು.
2019 ರಲ್ಲಿ ಗುಜರಾತ್‍ನಲ್ಲಿ 250 ಚಲನಚಿತ್ರಗಳ ಒಂದು ಸಮೀಕ್ಷೆಯನ್ನು ಮಾಡಲಾಗಿತ್ತು. ಇದಕ್ಕನುಸಾರ ಮುಸಲ್ಮಾನರ ಶೃದ್ಧಾಸ್ಥಾನಗಳು ಶಕ್ತಿಶಾಲಿಯಾಗಿವೆ, ಮುಸಲ್ಮಾನರು ಮಾನವತಾವಾಧಿಗಳಾಗಿದ್ದಾರೆ, ಬದಲಾಗಿ ಬ್ರಾಹ್ಮಣರು ಭ್ರಷ್ಟಾಚಾರಿ ಮತ್ತು ಕೆಟ್ಟವರಿದ್ದಾರೆ ಎಂದು ತೋರಿಸಲಾಗಿದೆ ಎಂದರು.
ಬಾಲಿವುಡ್‍ನಲ್ಲಿ ಪ್ರತಿ ವರ್ಷ ಸುಮಾರು 3000 ಹಾಡುಗಳು ಪ್ರಸಾರವಾಗುತ್ತದೆ. ಇದರಲ್ಲಿ ಶೇ 30 ರಷ್ಟು ಹಾಡುಗಳಲ್ಲಿ ಅಲ್ಲಾನ ಗುಣಗಾನ ಮಾಡುವದು ಕಂಡುಬರುತ್ತದೆ. ತದ್ವಿರುದ್ಧ ಶೇ 4 ರಷ್ಟು ಹಾಡುಗಳಲ್ಲಿ ಹಿಂದೂ ದೇವತೆಗಳ ಸ್ತುತಿ ಇರುತ್ತದೆ. ಇದರ ಹಿಂದೆ ದುಬೈ ಫಂಡಿಂಗ್ ಮತ್ತು ಕರಾಚಿ ವಿತರಕರ ಕೈವಾಡವಿದೆ ಎಂದರು.
ಕುಖ್ಯಾತ ಅಪರಾಧಿಗಳ ಕಪ್ಪುಹಣ ಬಾಲಿವುಡ್ ಚಲನಚಿತ್ರಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಇದರಿಂದ ಲವ್ ಜಿಹಾದ್‍ಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಅಮಲು ಪದಾರ್ಥಗಳು ಪಂಜಾಬ್ ಮಾರ್ಗವಾಗಿ ಭಾರತದಾದ್ಯಂತ ವಿತರಿಸಲಾಗುತ್ತದೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…