ಮಹಾರಾಷ್ಟ್ರ: ಹಣೆಗೆ ಬಿಂದಿ ಇರಿಸದ ಕಾರಣಕ್ಕೆ ಪತ್ರಕರ್ತೆಯ ಜತೆ ಮಾತನಾಡಲು ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ನಿರಾಕರಿಸಿದ ಘಟನೆ ಬುಧವಾರ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ಮುಂಬಯಿಯ ರಾಜ್ಯ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ ಬಳಿಕ ಭಿಡೆ ಈ ನಡೆ ಅನುಸರಿಸಿದ್ದಾರೆ.
ತಮ್ಮ ಹೇಳಿಕೆ ಪಡೆದುಕೊಳ್ಳಲು ಮುನ್ನ ಹಣೆಗೆ ಬಿಂದಿ ಇರಿಸಬೇಕು ಎಂದು ಟೆಲಿವಿಷನ್ ವರದಿಗಾರ್ತಿಗೆ ಭಿಡೆ ಮರಾಠಿಯಲ್ಲಿ ಹೇಳುವುದು ಕೇಳಿಸಿದೆ. ಬಳಿಕ ಅವರು ಆಕೆ ಜತೆ ಮಾತನಾಡಲು ನಿರಾಕರಿಸಿದ್ದಾರೆ.
ಹೆಣ್ಣು ಭಾರತ ಮಾತೆ ಇದ್ದಂತೆ. ಆಕೆ ಹಣೆಗೆ ಕುಂಕುಮ ಇರಿಸದೆ ‘ವಿಧವೆ’ ರೀತಿ ಕಾಣಿಸಬಾರದು ಎಂದು ಸಂಭಾಜಿ ಭಿಡೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಭಿಡೆ ಅವರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಾಂಕರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ನವೆಂಬರ್ 7 ರಂದು ಕಾಪು -ಬೈಂದೂರಿಗೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಆಗಮನ..
ಶಿಂಧೆ ಅವರನ್ನು ಭೇಟಿ ಮಾಡಿದ ಬಳಿಕ ಭಿಡೆ ಅವರು ನಿರ್ಗಮಿಸುತ್ತಿದ್ದಾಗ ಸಾಮ್ ಟಿವಿ ವಾಹಿನಿಯ ಪತ್ರಕರ್ತೆ ಅವರನ್ನು ಎದುರಾಗಿದ್ದರು. ತಮಗೆ ಪ್ರಶ್ನೆ ಕೇಳಲು ಮೈಕ್ ಹಿಡಿದ ವರದಿಗಾರ್ತಿ ಜತೆ ಮಾತನಾಡಲು ಭಿಡೆ ನಿರಾಕರಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಪತ್ರಕರ್ತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಣೆಗೆ ಬಿಂದಿ ಇಡುವುದು ಅಥವಾ ಬಿಡುವುದು ತಮ್ಮ ವೈಯಕ್ತಿಕ ಆಯ್ಕೆ ಎಂದು ಅವರು ಹೇಳಿದ್ದಾರೆ. “ನಾವು ಜನರನ್ನು ಅವರ ವಯಸ್ಸು ಕಂಡು ಗೌರವಿಸುತ್ತೇವೆ. ಆದರೆ ಕೆಲವು ಜನರು ಗೌರವಕ್ಕೂ ಅರ್ಹರಾಗಿರುವುದಿಲ್ಲ. ಬಿಂದಿ ಇರಿಸುವುದು ಅಥವಾ ಬಿಡುವುದು ನನ್ನ ವೈಯಕ್ತಿಕ ಆಯ್ಕೆ. ಇದು ಪ್ರಜಾಪ್ರಭುತ್ವ” ಎಂದು ಹೇಳಿದ್ದಾರೆ.
ಕಾಪುವಿಗೆ ಲಾಲಾಜಿ ಮಾತ್ರವಲ್ಲ ನಾನು ಕೂಡ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ ಸುರೇಶ್ ನಾಯಕ್ : vishwanews24
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…