Featured

ಭಾರತ-ವಿಂಡೀಸ್ 2ನೇ ಏಕದಿನ ಪಂದ್ಯ ಟೈನಲ್ಲಿ ಅಂತ್ಯ ; ದಾಖಲೆ ಬರೆದ ಕೊಹ್ಲಿ

ವಿಶಾಖಪಟ್ಟಣಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡದ ನಡುವೆ ನಡೆದ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 322 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ  ವಿಕೆಟ್ ನಷ್ಟಕ್ಕೆ 321 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಜೇಯ 1 ರನ್ ಪೇರಿಸಿದರೆ, ಮಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡು ಸಮಯೋಚಿತ 3 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಪಂದ್ಯದ ಅಂತಿಮ ಓವರ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 14 ರನ್ ಗಳ ಅವಶ್ಯಕತೆ ಇತ್ತು. ಆದರೆ ವಿಂಡೀಸ್ ತಂಡ 13 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅಂತಿಮ ಎಸೆತದಲ್ಲಿ  ರನ್ ಗಳ ಅವಶ್ಯಕತೆ ಇದ್ದಾಗ ಶಾಯ್ ಹೋಪ್ ಭರ್ಜರಿ ಸಿಕ್ಸರ್ ಎತ್ತಲು ಮುಂದಾದರು. ಆದರೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲಾಗದೇ ಪಾಯಿಂಟ್ ನತ್ತ ಭಾರಿಸಿದರು. ಈ ಚೆಂಡನ್ನು ಹಿಡಿಯಲು ಅಂಬಾಟಿ ರಾಯುಡು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ, ಪರಿಣಾಮ ಚೆಂಡು ಬೌಂಡರಿ ಗೆರೆ ದಾಟಿತ್ತು. ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಯಿತು.

ವಿಶ್ವ ಕ್ರಿಕೆಟಿನಲ್ಲಿ ಹೊಸ ದಾಖಲೆ ಬರೆದ ಕೊಹ್ಲಿ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ವಿಶ್ವ ಕ್ರಿಕೆಟಿನಲ್ಲಿ ಏಕದಿನಗಳಲ್ಲಿ ಅತಿ ವೇಗವಾಗಿ ಹತ್ತು ಸಾವಿರ ರನ್ ಪೂರೈಸಿದ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಹತ್ತು ಸಾವಿರ ರನ್ ಕ್ಲಬ್ ನಲ್ಲಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಿಕಿ ಪಾಂಟಿಂಗ್ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಎರಡನೇ ಏಕದಿನದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ 89 ರನ್ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

10 ಸಹಸ್ರ ರನ್ ದಾಖಲೆ ಅಲ್ಲದೆ, ಸಚಿನ್​ರ ಇನ್ನೊಂದು ದಾಖಲೆಯನ್ನೂ ವಿರಾಟ್ ಕೊಹ್ಲಿ ಮುರಿದರು. ವೆಸ್ಟ್ ಇಂಡೀಸ್ ವಿರುದ್ಧ ಏಕದಿನದಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಗೌರವವನ್ನು ವಿರಾಟ್ ಪಡೆದರು. ಸದ್ಯ ಕೊಹ್ಲಿ ವಿಂಡೀಸ್ ವಿರುದ್ಧ 29 ಏಕದಿನ ಇನಿಂಗ್ಸ್​ಗಳಲ್ಲಿ 1688 ರನ್ ಬಾರಿಸಿದ್ದಾರೆ. ಸಚಿನ್ 39 ಇನಿಂಗ್ಸ್​ಗಳಿಂದ 1573 ರನ್ ಬಾರಿಸಿದ ಸಾಧನೆ 2ನೇ ಸ್ಥಾನಕ್ಕೆ ಕುಸಿಯಿತು.

Vishwa News 24

Recent Posts

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

45 minutes ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

55 minutes ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 hour ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

1 hour ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

1 hour ago

ಹಿಜಾಬ್‌ಗೆ ಅನುಮತಿ : ಸಾಮಾಜಿಕ ಸಾಮರಸ್ಯವನ್ನು ಕದಡುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ : ಸುನಿಲ್ ಕುಮಾರ್ ಆಕ್ರೋಶ – vishwanews24

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ: ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ : ಸುನಿಲ್ ಕುಮಾರ್ ಕಾರ್ಕಳ:…

1 hour ago