ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೌಡಿ ಮೋದಿಯಲ್ಲಿ ಪಾಲ್ಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಕೂಡ ತಾವು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ಒಪ್ಪುವುದಾದರೆ ಮಾತ್ರ ನಾನು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇಮ್ರಾನ್ ಖಾನ್ ಜತೆಗಿನ ಮಾತುಕತೆಗೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಕಾಶ್ಮೀರದ ವಿಚಾರದಲ್ಲಿ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ನಾನು ಮಧ್ಯಸ್ಥಿಕೆ ವಹಿಸಬೇಕೋ ಬೇಡವೋ ಎಂಬುದು ನರೇಂದ್ರ ಮೋದಿ ಹಾಗೂ ಇಮ್ರಾನ್ ಖಾನ್ ಅವರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದರು.
ನನಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಬಾಂಧವ್ಯವಿದೆ. ಹಾಗೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜತೆಗೂ ಉತ್ತಮ ಸ್ನೇಹವಿದೆ. ನಾನು ಮಧ್ಯಸ್ಥಿಕೆ ವಹಿಸಿದ ಯಾವುದೇ ವಿಚಾರದಲ್ಲೂ ಇದುವರೆಗೆ ವಿಫಲನಾಗಿಲ್ಲ. ಈ ಬಗ್ಗೆ ಮೊದಲೇ ಒಂದು ಬಾರಿ ತಿಳಿಸಿದ್ದೇನೆ. ಆದರೆ ಇನ್ನೊಂದು ಕಡೆಯಿಂದಲೂ ಒಪ್ಪಿಗೆ ಬೇಕು ಎಂದು ಹೇಳಿದರು.
ಮೋದಿಯವರ ಈ ಮಾತುಗಳನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ ಟ್ರಂಪ್, ನಿನ್ನೆ ಭಾರತ ನನ್ನ ಸಮ್ಮುಖದಲ್ಲೇ ಆಕ್ರಮಣಕಾರಿ ಹೇಳಿಕೆಯನ್ನು ನೀಡಿದೆ. ಅಂಥ ಒಂದು ದೃಢ ನಿರ್ಧಾರದ ಮಾತುಗಳನ್ನು ಭಾರತದಿಂದ ನಿರೀಕ್ಷೆ ಮಾಡಿರಲಿಲ್ಲ. ಅದೂ ಪ್ರಧಾನಿಯೇ ಹೇಳುತ್ತಾರೆ ಎಂದುಕೊಂಡಿರಲಿಲ್ಲ. ಅದರಲ್ಲೂ ಅಲ್ಲಿ ನೆರೆದಿದ್ದ 50,000 ಜನರು ಆ ಮಾತುಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರು ಎಂದು ಟ್ರಂಪ್ ತಿಳಿಸಿದರು.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…