Featured

ಭೀಕರ ರಸ್ತೆ ಅಪಘಾತ :  ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ  5 ಮಂದಿ ಸಾವು – vishwanews24

ಭೀಕರ ರಸ್ತೆ ಅಪಘಾತ :  ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಒಂದೇ ಕುಟುಂಬದ 5 ಮಂದಿ ಸಾವು

ಬೀದರ್: ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗ್‌ರಾಜ್‌ನ ಮಾಹಾ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಒಂದೇ ಕುಟುಂಬದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುನೀತಾ (40), ನೀಲಮ್ಮ(62), ಲಕ್ಷ್ಮಿ (57), ಕಲಾವತಿ (60), ಸಂತೋಷ (45) ಮೃತ ದುರ್ದೈವಿಗಳು.

ಉತ್ತರಪ್ರದೇಶದ ಕಾಶಿ ಬಳಿ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ಎಂದು ವರದಿಯಾಗಿದೆ.

ಒಂದೇ ಕುಟುಂಭದ 12 ಮಂದಿ ಎರಡು ದಿನಗಳ ಹಿಂದೆ ಕ್ರೂಸರ್ ವಾಹನದಲ್ಲಿ ಪ್ರಯಾಗರಾಜ್‌ನ ಮಹಾ ಕುಂಭಮೇಳಕ್ಕೆ ತೆರಳಿದ್ದರು. ಉತ್ತರಪ್ರದೇಶದ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

4 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

4 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

5 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

5 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

5 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

6 hours ago