ರಾಜ್ಯ ನ್ಯೂಸ್

ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ನಾನು ಸಿಎಂ ಆಗಿರಲು ಸಾಧ್ಯವಿಲ್ಲ : ಎಚ್‍ಡಿಕೆ

ಬೆಂಗಳೂರು: -ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಪೂರ್ಣವಾಗಿ ಮುಕ್ತಗೊಳಿಸುವುದು ಸುಲಭವಲ್ಲ. ಅಧಿಕಾರಿ ಮತ್ತು ನೌಕರರ ವರ್ಗಾವಣೆಯಿಂದ ಭ್ರಷ್ಟಾಚಾರ ಆರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಮುಖ್ಯಮಂತ್ರಿಯಾದ ಬಳಿಕ ನಗರದಲ್ಲಿರುವ ಗಾಂಧಿ ಭವನಕ್ಕೆ ಭೇಟಿ ಕೊಟ್ಟು ಮಹಾತ್ಮಗಾಂಧೀಜಿಯವರ ಪುತ್ಥಳಿಗೆ ಪುಷ್ಪ ನಮನ ಅರ್ಪಿಸಿದ ನಂತರ ಅವರು ಮಾತನಾಡಿದರು.   ಒಂದು ವೇಳೆ ಭ್ರಷ್ಟಾಚಾರವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆ ಮಾಡಲು ತಾವು ಮುಂದಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ತಮ್ಮನ್ನು ಇರಲು ಬಿಡದಿರುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಶೃಂಗೇರಿಯ ಗುರುಗಳು ನಮ್ಮ ಮಠಕ್ಕೆ ತಾವು ಏನೂ ಮಾಡುವುದು ಬೇಡ, ಭ್ರಷ್ಟಾಚಾರ ನಿಲ್ಲಿಸಿ ಎಂದು ಹೇಳಿದರು. ಸಾಧ್ಯವಾದಷ್ಟು ಮಟ್ಟಿಗೆ ಭ್ರಷ್ಟಾಚಾರ ತಡೆಯುವ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಹೊರತು ಪೂರ್ಣ ಬಹುಮತವಿಲ್ಲದೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕಠಿಣ ನಿರ್ಧಾರ ಆಗುವುದಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಆಡಳಿತವನ್ನು ಚುರುಕುಗೊಳಿಸಲಾಗುವುದು ಎಂದರು.

ಎಷ್ಟು ದಿನ ಬದುಕಿರುತ್ತೇನೆಯೋ ಎಂಬುದು ಗೊತ್ತಿಲ್ಲ. ಹಣದ ಅಗತ್ಯವಿಲ್ಲ. ಹಣ ಮಾಡುವ ಹುಚ್ಚೂ ಇಲ್ಲ. ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಸರ್ಕಾರವನ್ನು ಮುನ್ನಡೆಸಿ ಬಡ ಕುಟುಂಬಗಳಿಗೆ ಸ್ಪಂದಿಸುವ ರೀತಿ ಆಡಳಿತ ನಡೆಸಲಾಗುವುದು ಎಂದರು. ಮಹಾತ್ಮಗಾಂಧೀಜಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರ್ಕಾರ ನಡೆಯಲಿದೆ ಎಂದು ಹೇಳಿದರು.

ಗಾಂಧಿ ತತ್ವಗಳನ್ನು ಮರೆಯುತ್ತಿರುವ ಕೆಟ್ಟ ದಿನಗಳು, ಅಶಾಂತಿ, ಹಿಂಸೆ ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವ ಪೀಳಿಗೆಗೆ ಮಾನವೀಯ ಮೌಲ್ಯ ಪುನರ್ ಪ್ರತಿಷ್ಠಾಪಿಸಲು ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು. ದೇವರ ಕೃಪೆಯಿಂದ ಎರಡನೇ ಬಾರಿಗೆ ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಜವಾಬ್ದಾರಿ ತಮ್ಮ ಮೇಲಿದೆ. ರಾಜಕೀಯ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಹಕರಿಸಿ. ಸರ್ಕಾರ ಐದು ವರ್ಷ ಸುಭದ್ರವಾಗಿ ಉತ್ತಮ ಆಡಳಿತ ನೀಡಲಿದೆ ಎಂದರು.

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

26 minutes ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

36 minutes ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

21 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

23 hours ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

23 hours ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

23 hours ago