ಮಂಗಳೂರು: ಬಂದರಿಗೆ ಈ ಋತುಮಾನದ ಕೊನೆಯ ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದ್ದು, ನೂರಾರು ವಿದೇಶಿ ಪ್ರವಾಸಿಗರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಇಟಲಿಯ ಕೋಸ್ಟಾ ವಿಕ್ಟೋರಿಯಾ ಹೆಸರಿನ ಹಡಗಿನಲ್ಲಿ ಒಟ್ಟು 1726ಮಂದಿ ವಿದೇಶಿ ಪ್ರವಾಸಿಗರು ಹಾಗೂ 791 ಮಂದಿ ಸಿಬ್ಬಂದಿಗಳು ಆಗಮಿಸಿದ್ದರು. ಇವರಿಗಾಗಿ ಎನ್‌ಎಂಪಿಟಿ ವತಿಯಿಂದ ನಗರ ಸಂಚಾರಕ್ಕೆ ರಿಕ್ಷಾ, ಟ್ಯಾಕ್ಸಿ, ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಸುತ್ತಾಡಿ ಇಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಿದರು
ಸ್ಥಳೀಯ ಜಾನಪದ ನೃತ್ಯವನ್ನು ಪ್ರದರ್ಶಿಸುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಲಾಯಿತು.