ನವದೆಹಲಿ, : ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಹೊಸದಾಗಿ ಕ್ಷಿಪ್ರ ಕಾರ್ಯಪಡೆ ನೆಲೆಗಳು ಸ್ಥಾಪನೆಯಾಗಲಿವೆ. ಕೇಂದ್ರ ಸರ್ಕಾರವು ಕಳೆದ ಜನವರಿಯಲ್ಲಿಯೇ ಆರ್ ಎ ಎಫ್ ನ ಐದು ಹೊಸ ಬೆಟಾಲಿಯನ್ ಗಳಿಗೆ ಅನುಮೋದನೆ ನೀಡಿತ್ತು.
ಕೋಮುಗಲಭೆ ಸೇರಿದಂತೆ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ, ಕೇಂದ್ರ ಸರಕಾರದ ಅಧೀನದಲ್ಲಿರುವ ಕ್ಷಿಪ್ರ ಕಾರ್ಯಪಡೆ(ಆರ್ ಎ ಎಫ್)ಯು ಕರ್ನಾಟಕದ ಮಂಗಳೂರು ಸಹಿತ ದೇಶದ ಐದು ನಗರಗಳಲ್ಲಿ ಹೊಸದಾಗಿ ಸ್ಥಾಪನೆಯಾಗಲಿದ್ದು, ರಾಜ್ಯದಲ್ಲಿಯೇ ಮೊದಲನೇ ಆರ್ ಎ ಎಫ್ ನೆಲೆ ಇದಾಗಲಿದೆ..
ಈಗ ಈ ಬೆಟಾಲಿಯಾನ್ ಯಾವ್ಯಾವ ಸ್ಥಳಗಳಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಹೊರಹಾಕಿದೆ. ಹೀಗಾಗಿ ಈ 5 ಕ್ಷಿಪ್ರ ಕಾರ್ಯಪಡೆ ನೆಲೆ ಸೇರಿಸಿದರೆ ದೇಶದಲ್ಲಿ ಒಟ್ಟಾರೆ 15 ನೆಲೆಗಳು ಸ್ಥಾಪನೆಯಾದಂತೆ ಆಗುತ್ತದೆ.
ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಮತ್ತು ಹರಿಯಾಣದ ನುಹ್ ಜಿಲ್ಲೆಗಳಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭವಾಗಲಿದೆ. ಇದರ ಕಚೇರಿ ಸ್ಥಾಪನೆಗಾಗಿ ಎರಡು ವರ್ಷಗಳ ಹಿಂದೆಯೇ ನಗರದ ಹೊರವಲಯದಲ್ಲಿರುವ ಬಜಪೆ ಮತ್ತು ಮರವೂರಿನಲ್ಲಿ ಜಾಗವನ್ನು ಗುರುತಿಸಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು.
ಆರ್ ಎ ಎಫ್ ಅಂದರೆ ರ್ಯಾಪಿಡ್ ಆಕ್ಷನ್ ಫೋರ್ಸ್ ಅಥವಾ ಕ್ಷಿಪ್ರ ಕಾರ್ಯಪಡೆ ಎಂದು ಕರೆಸಿಕೊಳ್ಳುವ ಇದು ಕೇಂದ್ರ ಮೀಸಲು ಪೊಲೀಸ್ ಪಡೆಯ ಭಾಗ. ಆರ್ ಎ ಎಫ್ ನ ಪ್ರತಿ ನೆಲೆಯಲ್ಲೂ ಒಂದು ಸಾವಿರ ಯೋಧರ ತಂಡವಿರುತ್ತದೆ. ಇವರ ಬಳಿ ಆಕ್ಷನ್ ಗನ್ ಹೊಗೆ ಚಿಮ್ಮಿಸುವ ಗ್ರೇನೆಡ್ ಸೇರಿ ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಉಪಕರಣವಿರುತ್ತದೆ. ಇಲ್ಲಿಯವರೆಗೂ ದೇಶದಲ್ಲಿ ಒಟ್ಟು 10 ಆರ್‌ಎಎಫ್ ತುಕಡಿಗಳಿವೆ. ಪ್ರತಿ ತುಕಡಿಯಲ್ಲಿ 1,000 ಸಿಬ್ಬಂದಿಗಳಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣಗಳು, ಮಾರಕವಲ್ಲದ ಶಸ್ತ್ರಾಸ್ತ್ರಗಳು, ಹೊಗೆಸೂಸುವ ಗ್ರೆನೇಡ್ ಗಳು ಹಾಗೂ ಇನ್ನೂ ಮುಂತಾದ ತುರ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.
ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್ ಎ ಎಫ್) ಇರುವುದೇ ಹಿಂಸಾಚಾರ ಮತ್ತು ಗುಂಪು ಘರ್ಷಣೆಗಳ ನಿಯಂತ್ರಣ ಮಾಡುವುದು. ನೀಲಿ ಬಣ್ಣದಿಂದ ಕೂಡಿದ ಸಮವಸ್ತ್ರ ಧರಿಸುವ ಈ ಪಡೆ ಹಿಂಸಾಚಾರ ನಿಯಂತ್ರಿಸುವ ವಿಚಾರದಲ್ಲಿ ಪರಿಣಿತರಾಗಿರುತ್ತಾರೆ. ಇದಲ್ಲದೆ ನೈಸರ್ಗಿಕ ವಿಕೋಪದಗಳಾದ ಭೂಕಂಪ, ಪ್ರವಾಹ, ಚಂಡಮಾರುತ ಸಂದರ್ಭದಲ್ಲೂ ಮಾನವೀಯ ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಪಡೆ ಜತೆಯಾಗಿ ಕೆಲಸ ನಿರ್ವಹಿಸುತ್ತದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…