Featured

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ ‘ಚಳಿಗಾಲದ ವೇಳಾಪಟ್ಟಿ ಪ್ರಕಟ

ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನೂತನ ‘ಚಳಿಗಾಲದ ವೇಳಾಪಟ್ಟಿ’ಯನ್ನು ಪ್ರಕಟಿಸಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ‘FLY91’ ವಿಮಾನಯಾನ ಸಂಸ್ಥೆಯು ತನ್ನ ಮುಂಬರುವ ಚಳಿಗಾಲದ ವಿಮಾನ ವೇಳಾಪಟ್ಟಿಯ ಅಡಿಯಲ್ಲಿ ನೇರ ವಿಮಾನ ಸೇವೆಗಳನ್ನು ಪರಿಚಯಿಸಲು ಸಜ್ಜಾಗಿದೆ. ಪ್ರತಿದಿನದ ವಿಮಾನ ಸಂಚಾರವನ್ನು ಯೋಜಿಸಲಾಗಿದೆ. 2026ರ ಅಕ್ಟೋಬರ್ ಕೊನೆಯ ವಾರದಲ್ಲಿ ವಿಮಾನ ಸೇವೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಹೊಸ ವಿಮಾನ ಸಂಪರ್ಕದಿಂದಾಗಿ ಕರಾವಳಿ ಭಾಗದ ಪ್ರಯಾಣಿಕರಿಗೆ ಲಕ್ಷದ್ವೀಪದ ಸುಂದರ ದ್ವೀಪಗಳಿಗೆ ಪ್ರಯಾಣಿಸುವುದು ಅತ್ಯಂತ ಅನುಕೂಲಕರವಾಗಲಿದೆ. ಈ ಕುರಿತು ‘ದಿ ಹಿಂದೂ’ ಪತ್ರಿಕೆಯೂ ವರದಿ ಮಾಡಿದೆ. ಆದರೆ ವಿಮಾನಗಳ ಅಂತಿಮ ವೇಳಾಪಟ್ಟಿ ಹಾಗೂ ಆರಂಭದ ದಿನಾಂಕಗಳು ಆಯಾ ವಿಮಾನಯಾನ ಸಂಸ್ಥೆಯ ಅಧಿಕೃತ ದೃಢೀಕರಣಕ್ಕೆ ಒಳಪಟ್ಟಿರುತ್ತವೆ.

ಪ್ರಸ್ತುತ ಚಾಲ್ತಿಯಲ್ಲಿರುವ ಬೇಸಿಗೆ ವೇಳಾಪಟ್ಟಿಗೆ ಹೋಲಿಸಿದರೆ, ಚಳಿಗಾಲದಲ್ಲಿ ಸಾಪ್ತಾಹಿಕ ವಿಮಾನ ಸಂಚಾರಗಳ ಸಂಖ್ಯೆ 181ರಿಂದ 195ಕ್ಕೆ ಏರಿಕೆಯಾಗಲಿದ್ದು, ಒಟ್ಟು 14 ಹೊಸ ವಿಮಾನ ಸೇವೆಗಳು ಸೇರ್ಪಡೆಗೊಳ್ಳಲಿವೆ.

ದೇಶೀಯ ವಲಯದಲ್ಲಿ ಪುಣೆ, ಅಗತ್ತಿ, ಹೈದರಾಬಾದ್ ಸಂಪರ್ಕ:

ಫ್ಲೈ91 (Fly91) ಹೊಸ ಸೇವೆ: ಪ್ರಾದೇಶಿಕ ವಿಮಾನಯಾನ ಸಂಸ್ಥೆ ‘ಫ್ಲೈ91’ ಮಂಗಳೂರಿನಿಂದ ಲಕ್ಷದ್ವೀಪದ ಅಗತ್ತಿ (Agatti) ಹಾಗೂ ಮಹಾರಾಷ್ಟ್ರದ ಪುಣೆಗೆ ದಿನಂಪ್ರತಿ ಹೊಸ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ಎರಡು ಮಾರ್ಗಗಳಿಂದಲೇ ವಾರಕ್ಕೆ 14 ಹೊಸ ಹಾರಾಟಗಳು ಲಭ್ಯವಾಗಲಿವೆ.

ಹೈದರಾಬಾದ್ ಮತ್ತು ಬೆಂಗಳೂರಿಗೆ ಬಲ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737-8 ನ್ಯಾರೋ ಬಾಡಿ ವಿಮಾನಗಳ ಮೂಲಕ ಹೈದರಾಬಾದ್‌ಗೆ ವಾರಕ್ಕೆ ಮೂರು ದಿನ ಮರು ಹಾರಾಟ ನಡೆಸಲಿದೆ. ಇದರೊಂದಿಗೆ ಬೆಂಗಳೂರು ಸಂಪರ್ಕವನ್ನೂ ಹೆಚ್ಚಿಸಲಿದೆ.

ಮುಂಬೈಗೆ ಇಂಡಿಗೋ ಹೆಚ್ಚುವರಿ ಟ್ರಿಪ್: ಇಂಡಿಗೋ ಸಂಸ್ಥೆಯು ಪ್ರಮುಖ ಮೆಟ್ರೋ ನಗರವಾದ ಮುಂಬೈ ಮಾರ್ಗದಲ್ಲಿ ವಿಮಾನ ಹಾರಾಟದ ಆವರ್ತನವನ್ನು ಹೆಚ್ಚಿಸಲಿದೆ. ದೇಶೀಯ ವಿಮಾನಗಳ ಸಾಪ್ತಾಹಿಕ ಸಂಚಾರವು 133ರಿಂದ 136ಕ್ಕೆ ಏರಿಕೆಯಾಗಲಿದೆ.

ರಾವಳಿ ಕರ್ನಾಟಕ ಹಾಗೂ ಗಡಿನಾಡಿನ ಅನಿವಾಸಿ ಭಾರತೀಯರ ಅನುಕೂಲಕ್ಕಾಗಿ ಮಧ್ಯಪ್ರಾಚ್ಯ (ಗಲ್ಫ್) ವಲಯಕ್ಕೆ ವಿಮಾನ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಯುಎಇಯ ಪ್ರಮುಖ ಎಮಿರೇಟ್ಸ್ ಆಗಿರುವ ರಾಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರಿನಿಂದ ನೇರ ವಿಮಾನ ಹಾರಾಟ ಆರಂಭಿಸಲಿದೆ.

ಕುವೈತ್‌ಗೆ ಸ್ಥಗಿತಗೊಂಡಿದ್ದ ವಿಮಾನ ಸೇವೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪುನಾರಂಭಿಸಲಿದೆ.ದುಬೈ, ಅಬುಧಾಬಿ ಹಾಗೂ ಬಹ್ರೇನ್ ಮಾರ್ಗಗಳಲ್ಲಿ ವಿಮಾನ ಹಾರಾಟದ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಂತರರಾಷ್ಟ್ರೀಯ ಸಾಪ್ತಾಹಿಕ ಹಾರಾಟಗಳು 34ರಿಂದ 45ಕ್ಕೆ ಏರಿಕೆಯಾಗಲಿದ್ದು, ಮಂಗಳೂರಿನ ಒಟ್ಟಾರೆ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ ವಾರಕ್ಕೆ 48ರಿಂದ 59ಕ್ಕೆ ಹೆಚ್ಚಳವಾಗಲಿದೆ. ದಮ್ಮಾಮ್, ದೋಹಾ, ಜಿದ್ದಾ, ಮಸ್ಕತ್ ಮಾರ್ಗಗಳ ಹಿಂದಿನ ವಿಮಾನ ಸೇವೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

45 minutes ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

47 minutes ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

55 minutes ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

5 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

5 hours ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

6 hours ago