Featured

ಮಂಗಳೂರಿನ ಲೇಡಿ ಹಿಲ್ ವೃತ್ತಕ್ಕೆ ಪರಮ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇಡುವುದು ಶತಸಿದ್ದ -Vishwanews24

ಮಂಗಳೂರಿನ ಲೇಡಿ ಹಿಲ್ ವೃತ್ತಕ್ಕೆ ಪರಮ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇಡುವುದು ಶತಸಿದ್ದ -Vishwanews24

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ವೃತ್ತ ಬ್ರಿಟೀಷರ ಹೆಸರಿನ ಲೇಡಿ ಹಿಲ್ ಸರ್ಕಲ್ ಅನ್ನು ಬದಲಾಯಿಸಿ ಪರಮ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಂಸದೀಯ ಕಾರ‍್ಯದರ್ಶಿ ಶ್ರೀ ಧರ್ಮೆಂದ್ರ ಅವರು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಹುಸಂಖ್ಯಾತ ಹಿಂದುಗಳ ಬಹುದಿನದ ಕನಸಾಗಿರುವ, ಗುಲಾಮಗಿರಿಯ ಸಂಕೇತವೆಂದೇ ಕರೆಸಿಕೊಂಡಿರುವ, ಮಂಗಳೂರಿನ ಪ್ರತಿಷ್ಠಿತ ವೃತ್ತ ಬ್ರಿಟೀಷರ ಹೆಸರಿನ ಲೇಡಿ ಹಿಲ್ ಸರ್ಕಲ್ ಅನ್ನು ಬದಲಾಯಿಸಿ ಪರಮ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಸಾಕಷ್ಟು ಬಾರಿ ಒತ್ತಾಯಿಸಿದ್ದರೂ, ಮಂಗಳೂರು ಮಹಾನಗರಪಾಲಿಕೆಯ ಸಭೆಯಲ್ಲಿ ಕಾಂಗ್ರೆಸಿನ ಸದಸ್ಯರು ಈ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದರೂ, ಆಡಳಿತರೂಡ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಮೌನಕ್ಕೆ ಶರಣಾಗಿರುವುದು. ಭಾರತೀಯ ಜನತಾ ಪಾರ್ಟಿಯ ಹಿಂದುತ್ವಕ್ಕೆ ಹಿಡಿದ ಕೈಗನ್ನಡಿಯಂತಿದೆ ಯಾವುದೇ ಬೆಲೆ ಇತ್ತಾದರೂ, ಈ ವೃತ್ತಕ್ಕೆ ಪರಮ ಪೂಜ್ಯರ ಹೆಸರನ್ನು ಇಡುವುದು ಶತಸಿದ್ದ ಎಂದಿದ್ದಾರೆ.

ಈಗಾಗಲೇ ಸಂಬಂಧ ಪಟ್ಟ ಇಲಾಖೆಗಳಿಗೆ ವಿಚಾರವನ್ನು ತಿಳಿಸಿದ್ದು ತಕ್ಷಣ ಈ ಬಗ್ಗೆ ಗೊತ್ತುವಳಿಯನ್ನು ಮಂಡಣೆಮಾಡಿ, ವೃತ್ತದ ಹೆಸರನ್ನು ಮರುನಾಮಕರಣಗೊಳಿಸಿ ಪರಮ ಪೂಜ್ಯ ಗುರುಗಳ ಹೆಸರನ್ನು ಘೋಷಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತಿದೆ. ಈ ಬಗ್ಗೆ, ಚುನಾವಣೆ ಮುಗಿದ ತಕ್ಷಣ, ವೃತ್ತದ ಬಳಿ ಸಂಕೇತಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ, ರಾಷ್ಟ್ರ ವಿರೋಧಿ ಬರಹಗಳನ್ನು ಬರೆಯುವ ದೇಶ ದ್ರೋಹಿಗಳ ಬಗ್ಗೆ ಆತಂಕವಾದ ಅಳಿಸಿ ದೇಶ ಉಳಿಸಿ ಎಂಬ ಘೋಷ ವ್ಯಾಕ್ಯದೊಂದಿಗೆ ಹಿಂದೂ ಮಹಾಸಭಾ ಈ ಹಿಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕರಾವಳಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಮಾಧ್ಯಮ ಹಾಗೂ ಸರಕಾರದ ಗಮನಕ್ಕೆ ತಂದ ಕೆಲವೇ ತಿಂಗಳಲ್ಲಿ ಯಾಸಿ ಭಟ್ಕಳ ಬಂಧನವಾಗಿದ್ದನ್ನು, ತದನಂತರ ಸಾಕಷ್ಟು ಬಂಧನಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಮಂಗಳೂರಿನ ಕದ್ರಿ ಪೋಲಿಸ್ ಠಾಣೆಯ ಮುಂಭಾಗ ಹಾಗೂ ಕೋರ್ಟ್ ಆವರಣದಲ್ಲಿ ತಾಲಿಬಾನ್ ಜಿಂದಾಬಾದ್ ಲಷ್ಕರ್ ಜಿಂದಾಬಾದ್ ಎಂಬ ಬರವಣಿಗೆ ಮಾಧ್ಯಮಗಳು ಪ್ರಸಾರ ಮಾಡಿದ್ದು ಇದು ಆಡಳಿತದಲ್ಲಿರುವ ಭಾರತೀಯ ಜನತಾ ಪಾರ್ಟಿಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ.

ಹಿಂದು ನಾಯಕರ ಹೇಳಿಕೆಗಳ ವಿರುದ್ಧ ಸ್ವಮೋಟೊ ಕೇಸ್ ದಾಖಲಿಸುವ ಪೋಲಿಸ್ ಇಲಾಖೆ ಈ ವಿಚಾರದಲ್ಲಿ ಯಾವ ಕ್ರಮಕೈಗೊಂಡಿದೆ ಎಂದು ಸ್ಪಷ್ಟಪಡಿಸಬೇಕು, ಹಾಗೂ ಜಾಣ ಕುರುಡು ಪ್ರದರ್ಶಿಸುವ ಸರಕಾರ ಕೂಡಲೇ ಈ ಕೃತ್ಯಕ್ಕೆ ಕಾರಣವಾದ ಭಯೋತ್ಪದಕರನ್ನು/ ಉಗ್ರಗಾಮಿಗಳನ್ನು/ ದೇಶದ್ರೋಹಿಗಳನ್ನು ಬಂಧಿಸಿ ಜನರಲ್ಲಿ ಮೂಡಿರುವ ಭಯ, ಗೊಂದಲವನ್ನು ನಿವಾರಿಸಬೇಕಾಗಿ ಹಿಂದೂ ಮಹಾಸಭಾವು ಆಗ್ರಹಿಸಿತ್ತದೆ. ಇದಕ್ಕೆ ಸಂಬಂದಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಕೀಲರ ಸಂಘಕ್ಕೂ ಮನವಿಯನ್ನು ಮಾಡಿದೆ, ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಯಾವುದೇ ರೀತಿಯ ಕಾನೂನಿನ ಸಲಹೆ ಅಥವಾ ವಕಾಲತ್ತನ್ನು ವಹಿಸಬಾರದು ಎಂದು ಮತ್ತೊಮ್ಮೆ ಈ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago