Featured

ಮಂಗಳೂರು:ಸರ್ಕಾರಿ ಭೂಮಿಯಲ್ಲಿ ಅಕ್ರಮ ಗೋಶಾಲೆ ಕಟ್ಟಲಾಗಿದೆ ಎಂದು ಆರೋಪಿಸಿ ಕೆಂಜಾರು ಗೋ ಶಾಲೆ ನೆಲಸಮಗೊಳಿಸಿದ ಜಿಲ್ಲಾಡಳಿತ -Vishwanews24

ಮಂಗಳೂರು:ಸರ್ಕಾರಿ ಭೂಮಿಯಲ್ಲಿ ಅಕ್ರಮ ಗೋಶಾಲೆ ಕಟ್ಟಲಾಗಿದೆ ಎಂದು ಆರೋಪಿಸಿ ಕೆಂಜಾರು ಗೋ ಶಾಲೆ ನೆಲಸಮಗೊಳಿಸಿದ ಜಿಲ್ಲಾಡಳಿತ -Vishwanews24

ಮಂಗಳೂರು: ಜಿಲ್ಲಾಡಳಿತವು ನಗರದ ಹೊರವಲಯದ ಕೆಂಜಾರಿನಲ್ಲಿರುವ ಗೋಶಾಲೆಯನ್ನು ಪೊಲೀಸ್ ಸಹಾಯದಿಂದ ತೆರವುಗೊಳಿಸಿದ್ದು ಸರ್ಕಾರಿ ಭೂಮಿಯಲ್ಲಿ ಅಕ್ರಮ ಗೋಶಾಲೆ ಕಟ್ಟಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಗೋ ಶಾಲೆ ಇರುವ ಭೂಮಿಯನ್ನು ಕರಾವಳಿ ಗಾರ್ಡ್‌ನ ತರಬೇತಿ ಕೇಂದ್ರಕ್ಕೆ ಮೀಸಲಿಡಲಾಗಿದೆ.

ಫೆಬ್ರವರಿ 22 ರಂದು ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮಾನಿಟರಿಂಗ್ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ”ಮುಂಬರುವ ವಾರದಲ್ಲಿ ಕರಾವಳಿ ಕಾವಲು ತರಬೇತಿಗಾಗಿ ನಿಗದಿಪಡಿಸಿದ ಅತಿಕ್ರಮಣ ಭೂಮಿಯನ್ನು ಖಾಲಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದರು.

ಉಡುಪಿ : ಎಂಟು ತಿಂಗಳ ಬಳಿಕ ಮೃತ ವ್ಯಕ್ತಿಯ ಅಸ್ಥಿಪಂಜರ ಪತ್ತೆ -Vishwanews24

ಜಾನುವಾರು ಮಾಲೀಕ ಜಯಪ್ರಕಾಶ್ ಶೆಟ್ಟಿ, “ಯಾವುದೇ ಸೂಚನೆ ನೀಡದೆ ಜಿಲ್ಲಾಡಳಿತವು ದನಗಳ ಆಶ್ರಯವನ್ನು ನೆಲಸಮ ಮಾಡಿದೆ. ನನ್ನ ಗೋಶಾಲೆಯಲ್ಲಿ 300 ದನಗಳಿವೆ. ನಾನು ದನಕರುಗಳಿಗೆ ಎಲ್ಲಿ ಸಾಕುವುದು” ಎಂದು ಅಳಲು ತೋಡಿಕೊಂಡಿದ್ದಾರೆ.

”ಜಮೀನಿನ ಮಾರಾಟ ಪತ್ರವೂ ಸಹ ನನ್ನ ಹೆಸರಿನಲ್ಲಿದೆ. ಸರ್ಕಾರ ಕನಿಷ್ಠ ಗೋಶಾಲೆಗೆ ಪರ್ಯಾಯ ಭೂಮಿಯನ್ನು ಒದಗಿಸಬೇಕು. ಯಾವುದೇ ಸೂಚನೆ ನೀಡದೆಯೇ ಗೋಶಾಲೆ ನೆಲಸಮ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.

“ಆಡಳಿತ ಮತ್ತು ಪ್ರತಿನಿಧಿಯ ಈ ಕ್ರೂರ ಕೃತ್ಯವು ಹಿಂದುತ್ವ ಮತ್ತು ಮಾನವೀಯತೆಗೆ ಬಗೆದ ದ್ರೋಹವಾಗಿದೆ. ಮೊಘಲ್‌ ಆಡಳಿತಕ್ಕಿಂತ ಕೆಟ್ಟದಾದ ಆಡಳಿತವಿದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಮಂಡಲ ಅಧಿವೇಶನ : ಶರ್ಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದ ಕಾಂಗ್ರೆಸ್ ಶಾಸಕ ಸಂಗಮೇಶ್ ;ಸದನದಿಂದ 1 ವಾರ ಅಮಾನತುಗೊಳಿಸಿದ ಸ್ಪೀಕರ್ -Vishwanews24

”ನಗರದಲ್ಲಿ ಕೆಲವು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳು ಇವೆ ಎಂದು ಕೆಲವು ಸಾರ್ವಜನಿಕರು ದೂರಿದ್ದಾರೆ. ಆದರೆ ಅದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಗೋಶಾಲೆಯ ಮೇಲೆ ಕ್ರಮ ಕೈಗೊಂಡಿದೆ. ಈಗ ಈ ಗೋಶಾಲೆಯಲ್ಲಿನ ದನಗಳನ್ನು ಎಲ್ಲಿ, ಯಾರು ನೋಡಿಕೊಳ್ಳುವುದು” ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ಇನ್ನು ಫೆಬ್ರವರಿ 22 ರಂದು ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ ಅವರು, ”ಈ ಗೋಶಾಲೆ ಅಕ್ರಮವಾಗಿದ್ದರೆ ಇದರ ವಿರುದ್ದ ಕ್ರಮ ಕೈಗೊಳ್ಳಬಹುದು” ಎಂದು ಹೇಳಿದ್ದರು

Vishwa News 24

Recent Posts

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

32 minutes ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

43 minutes ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

46 minutes ago

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ ; ಅರ್ಜಿ ಆಹ್ವಾನ – vishwanews24

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…

50 minutes ago

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

56 minutes ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

16 hours ago