Featured

ಮಂಗಳೂರು : ಅಝಾನ್‌ ಕುರಿತು ಹೇಳಿಕೆ ವಿವಾದವಲ್ಲ, ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಅಲ್ಲಾಹುವಿನ ಬಗ್ಗೆ ಅವಹೇಳನ ಮಾಡಿಲ್ಲ : ಈಶ್ವರಪ್ಪ ಸ್ಪಷ್ಟನೆ – Vishwanews24

ಚುನಾವಣೆ ಸಂದರ್ಭದಲ್ಲಿ ಮಾತನಾಡಿ ವಿವಾದ ಮಾಡುವ ವಿಚಾರ ಇಲ್ಲಿ ಬರುವುದೇ ಇಲ್ಲ

ಅಜಾನ್ ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ ಎಂಬುದಾಗಿ ಹೇಳಿದ್ದೇನೆ..

ನಾನು ಧಾರ್ಮಿಕ ನಿಂದನೆ ಮಾಡಿಲ್ಲ , ಅಲ್ಲಾನಿಗೆ ಕಿವಿ ಇದೆ ಇಲ್ವ ಅಂತ ನಾನು ಹೇಳಿದ್ದು ನಿಜ..

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪಷ್ಟ ನೆ  ..

ಮಂಗಳೂರು: ನಾನು ಧಾರ್ಮಿಕ ನಿಂದನೆ ಮಾಡಿಲ್ಲ. ಆದ್ರೇ ಅಜಾನ್ ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ ಎಂಬುದಾಗಿ ಹೇಳಿದ್ದೇನೆ. ಅಲ್ಲಾನಿಗೆ ಕಿವಿ ಇದೆ ಇಲ್ವ ಅಂತ ನಾನು ಹೇಳಿದ್ದು ನಿಜ ಎಂಬುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅಲ್ಲಾನಿಗೆ ಕಿವಿ ಇದೆ ಅಲ್ವ ಅಂತ ನಾನು ಹೇಳಿದ್ದು ನಿಜ. ಅಜಾನ್ ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ ಅಂತ ಹೇಳಿದ್ದೇನೆ. ಇದು ಧಾರ್ಮಿಕ ನಿಂದನೆ ಮಾಡಿದಂತೆ ಆಗಲ್ಲ ಎಂದು ಹೇಳಿದ್ದಾರೆ.

ಮುಸ್ಲಿಮರ ಅಝಾನ್‌ ಕುರಿತು ಹೇಳಿಕೆ ವಿವಾದವಲ್ಲ, ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಅಲ್ಲಾಹುವಿನ ಬಗ್ಗೆ ಅವಹೇಳನ ಮಾಡಿಲ್ಲ. ಆದರೆ ಅಝಾನ್‌ ವಿಚಾರದಲ್ಲಿ ಯಾರಾದರೂ ಮಾತನಾಡಲೇಬೇಕಿತ್ತು, ಮಾತನಾಡಿದ್ದೇನೆ. ಅದು ಶ್ರೀಸಾಮಾನ್ಯನ ಅನಿಸಿಕೆ, ನಾನು ಅದನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಮಾತನಾಡಿ ವಿವಾದ ಮಾಡುವ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದು ಸ್ಪಷ್ಟನೆ ಕೊಟ್ಟ ಅವರು, ಗೋಹತ್ಯೆ ತಡೆ ಕಾಯ್ದೆ, ಮತಾಂತರ ತಡೆ ಕಾಯ್ದೆ, ತ್ರಿವಳಿ ತಲಾಖ್‌ ರದ್ದು ಇತ್ಯಾದಿಗಳೆಲ್ಲವೂ ನಮ್ಮ ಸರಕಾರದ ಸಾಧನೆಗಳು ಎಂದರು.

ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿಗೆ ಹೋಗಿದ್ದೆವು. ಕೇವಲ ರಾಜಕಾರಣ ಮಾಡಲ್ಲ. ಹಾಗಂತ ನಾನು ಸನ್ಯಾಸಿಯಲ್ಲ. ನಾನು ಶಾಸಕನಾಗಿ ಮುಸ್ಲೀಮರಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಮನೆಗೆ ಮುಸ್ಲೀಂ ಸಮುದಾಯದವರು ಬರುತ್ತಾರೆ. ಕಾಂಗ್ರೆಸ್ ಪಕ್ಷ ನಂಬಿದ್ರೇ ಮುಸ್ಲೀಮರಿಗೆ ಏನೂ ಪ್ರಯೋಜನವಿಲ್ಲ ಎಂಬುದಾಗಿ ತಿಳಿಸಿದೆ.

ಅಂದಹಾಗೇ ನಿನ್ನೆ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಜಾನ್ ಕೂಗಲಾಗಿತ್ತು. ಈ ವೇಳೆ ಮೈಕ್ ಹಾಕಿಕೊಂಡು ಕೂಗಿದ್ರೇ ಮಾತ್ರನ ಅಲ್ಲಾನಿಗೆ ಕಿವಿ ಕೇಳೋದು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

Vishwa News 24

Recent Posts

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

10 hours ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

10 hours ago

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ…

11 hours ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

11 hours ago

ನಾಳೆ SSLC ಫಲಿತಾಂಶ  ಪ್ರಕಟ – vishwanews24

ನಾಳೆ SSLC ಫಲಿತಾಂಶ  ಪ್ರಕಟ ಬೆಂಗಳೂರು: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…

1 day ago

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ ; ಬಾಲಕಿ ಸಾವು -vishwanews24

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ…

1 day ago