Featured

ಮಂಗಳೂರು: ಅತ್ಯಾಚಾರವೆಸಗಿ ಕೊಲೆ ಮಾಡುವವರಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ಸರಕಾರ ಜಾರಿಗೊಳಿಸಲಿ : ಶಕುಂತಲಾ ಶೆಟ್ಟಿ – Vishwanews24

ಮಂಗಳೂರು: ಅತ್ಯಾಚಾರವೆಸಗಿ ಕೊಲೆ ಮಾಡುವವರಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ಸರಕಾರ ಜಾರಿಗೊಳಿಸಲಿ : ಶಕುಂತಲಾ ಶೆಟ್ಟಿ – Vishwanews24

ಮಂಗಳೂರು: ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯ್ಯುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ಸರಕಾರ ಜಾರಿಗೊಳಿಸಲಿ. ನಾಲ್ಕು ಜನರಿಗೆ ಈ ರೀತಿಯ ಶಿಕ್ಷೆಯಾದಲ್ಲಿ ತನ್ನಷ್ಟಕ್ಕೆ ಇಂತಹ ಪ್ರಕರಣಗಳು ನಿಲ್ಲುತ್ತದೆ ಎಂದು ಮಾಜಿ‌ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.

ನಗರಸ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಸುರತ್ಕಲ್ ನ ಬಂಟ ಸಮುದಾಯದ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೊಂದಿಗೆ ಸಂಬಂಧ ಇದೆ. ಆಕೆ 30 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ ಎಂದಿದ್ದಾರೆ. ಹಾಗಾದರೆ ಚೈತ್ರಾ ಅವರದ್ದೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರ್ಷವಾದರೂ ಯಾಕೆ ಮದುವೆಯಾಗಿಲ್ಲವೆಂದು ತಾವು ಪ್ರಶ್ನಿಸಿಲ್ಲ. ಸಾಧ್ಯವಾದರೆ ಚೈತ್ರ ಕುಂದಾಪುರ ಅವರು ಬಂಟ ಸಮುದಾಯದ ಯುವತಿಯನ್ನು ಪ್ರೀತಿಸುವ ಮುಸ್ಲಿಂ ಯುವಕನನ್ನು ತೋರಿಸಿಕೊಡಲಿ. ಅದು ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕವಾಗಿ ಅವರು ದ.ಕ.ಜಿಲ್ಲೆಯ ಹೆಣ್ಣು ಮಕ್ಕಳ ಕ್ಷಮೆ ಯಾಚಿಸಲಿ. ಜೊತೆಗೆ ಚೈತ್ರಾ ಅವರು ಯಾರನ್ನು, ಯಾವಾಗ, ಎಷ್ಟು ವರ್ಷದೊಳಗೆ ಮದುವೆಯಾಗುತ್ತಾರೆಂದು ತಿಳಿಸಲಿ ಎಂದು ಸವಾಲೆಸೆದರು.

ಸೀತಾ, ಸಾವಿತ್ರಿ, ಗೀತಾ ಗಾಯತ್ರಿರಿದ್ದ ನಮ್ಮ ದೇಶದಲ್ಲಿ ಲಂಕಿಣಿ, ಶೂರ್ಪನಖಿಯರೂ ಇದ್ದರು‌. ನೀವು ಯಾವ ಪಂಗಡಕ್ಕೆ ಸೇರಿದವರೆಂದು ಮೊದಲು ತಿಳಿಸಿ. ಜೊತೆಗೆ ತಮಗೆ ಈ ರೀತಿಯ ಹಿಂದೂ ಪಾಠ ಯಾರು ಮಾಡಿದ್ದು ಎಂದೂ ತಿಳಿಸಿ. ಚೈತ್ರಾ ತುಳುನಾಡಿನ ಕ್ರಾಂತಿ ಪುರುಷರಾದ ಕೋಟಿ ಚೆನ್ನಯರ ಸುರಿಯವನ್ನು ತಲವಾರಿಗೆ ಹೋಲಿಸಿ ಮಾತನಾಡಿದ್ದಾರೆ. ಅವರಿಗೆ ಸುರಿಯಕ್ಕೂ ತಲವಾರಿಗೂ ಇರುವ ವ್ಯತ್ಯಾಸವೇ ತಿಳಿದಿಲ್ಲ. ಹಾಗಾಗಿ ಅವರಿಗೆ ಕರಾವಳಿಯ ಮಣ್ಣಿನ ಮಹತ್ವವೇ ತಿಳಿದಿಲ್ಲ. ಅವರ ಬುದ್ಧಿವಂತಿಕೆ ಕೇವಲ ಕರತಾಡನಕ್ಕೆ ಸೀಮಿತವಾಗಿದೆ. ಆದ್ದರಿಂದ ಅವರು ತಮ್ಮ ನಾಲಿಗೆ ಹರಿಯಬಿಡುವುದನ್ನು‌ ಇನ್ನಾದರೂ ಜಾಗ್ರತೆ ಮಾಡಿಕೊಳ್ಳಲಿ ಎಂದು ಶಕುಂತಲಾ ಶೆಟ್ಟಿಯವರು ಹೇಳಿದರು.

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

2 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

2 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

3 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

3 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

3 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

3 days ago