ಮಂಗಳೂರು: ನಾಲ್ಕೂ ದಶಕದ ಹಿಂದೆ ಅನಾಥವಾಗಿದ್ದ ಯುವತಿಗೆ ಇಲ್ಲೊಂದು ಪೊಲೀಸ್ ಠಾಣೆಯ ಸಿಬ್ಬಂದಿಗಳೇ ಕುಟುಂಬ ಸದಸ್ಯರಾಗಿದ್ದಾರೆ. ಯಸ್ ಅನಾಥ ಯುವತಿ ಇದೀಗ 60 ವಯಸ್ಸಿನ ಮಹಿಳೆಯಾಗಿದ್ದು ನಾಲ್ಕೂ ದಶಕದಿಂದ ಈಕೆಗೆ ಠಾಣೆಯೇ ಮನೆಯಾಗಿದೆ.
20 ವರ್ಷಗಳ ಯುವತಿಯಾಗಿದ್ದ ಇವರು ಸುಮಾರು 40 ವರ್ಷಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಅನಾಥೆಯಾಗಿ ಪತ್ತೆಯಾಗಿದ್ದರು. ಅಂದಿನ ಪೊಲೀಸ್ ಅಧಿಕಾರಿಯೊಬ್ಬರು ಯಾರೂ ಇಲ್ಲದೆ ಬೀದಿಪಾಲಾಗಿದ್ದ ಇವರಿಗೆ ಠಾಣೆಯಲ್ಲಿಯೇ ಆಶ್ರಯ ನೀಡಿದ್ದರು. ಪೊಲೀಸರೇ ಹೊನ್ನಮ್ಮ ಎಂದು ನಾಮಕರಣ ಮಾಡಿದ್ದರು. ಆರಂಭದಲ್ಲಿ ಕುಟುಂಬಸ್ಥರ ಪತ್ತೆಗೆ ಪೊಲೀಸರು ಪ್ರಯತ್ನಪಟ್ಟಿದ್ದರು. ಆದರೆ, ಯಾವುದೇ ಪ್ರಯೋಜನವಾಗದೇ ಇದ್ದ ಸಂದರ್ಭದಲ್ಲಿ ಠಾಣೆಯಲ್ಲಿಯೇ ಅವರಿಗೆ ಜಾಗ ನೀಡಿದ್ದರು. ಬಳಿಕ ಸಣ್ಣಪುಟ್ಟ ಕೆಲಸ ಮಾಡಿಕೊಂಡು 40 ವರ್ಷಗಳಿಂದ ನಗರದ ಬಂದರು ಪೊಲೀಸ್ ಠಾಣೆಯನ್ನೇ ಆಶ್ರಯ, ಆಸರೆ ಮಾಡಿಕೊಂಡಿದ್ದಾರೆ ಹೊನ್ನಮ್ಮ ಅವರು.
ಠಾಣೆಯನ್ನು ಗುಡಿಸಿ, ಒರೆಸಿ, ಒಪ್ಪ ಓರಣಗೊಳಿಸುವ ಕಾರ್ಯವಲ್ಲದೆ, ಪೊಲೀಸರಿಗೆ ಏನಾದರೂ ಸಣ್ಣಪುಟ್ಟ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. ಇದಕ್ಕೆ ಅವರಿಗೆ ಸಂಬಳವನ್ನೂ ನೀಡಲಾಗುತ್ತದೆ. ಮಾನವೀಯತೆ ನೆಲೆಯಲ್ಲಿ ಈಕೆಗೆ ಬಂದರು ಪೊಲೀಸ್ ಠಾಣೆಯ ಹೊರಗಡೆಯೇ ಆಶ್ರಯಕ್ಕಾಗಿ ಒಂದು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಈಕೆಯ ಊಟ, ವಸತಿ, ಆಶ್ರಯ ಎಲ್ಲವೂ ಅಲ್ಲಿಯೇ ಆಗುತ್ತದೆ.
ಮೂಗಿ,ಕಿವುಡಿಯಾದ್ರು ಹೊನ್ನಮ್ಮನದು ಚುರುಕಿನ ವ್ಯಕ್ತಿತ್ವ. ಠಾಣೆಯನ್ನು ಶುಚಿಗೊಳಿಸುವ, ಪೊಲೀಸರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾರೆ. ಮಾನವೀಯತೆ ನೆಲೆಯಲ್ಲಿ ಠಾಣೆಯ ಹಿಂಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಊಟ ತಿಂಡಿಯನ್ನು ಪೊಲೀಸರು ನೀಡುತ್ತಿದ್ದು, ಒಮ್ಮೊಮ್ಮೆ ಇವರೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ಇದರ ಜೊತೆ ಹೊನ್ನಮ್ಮ ಬ್ಯಾಂಕ್ ಖಾತೆ, ಮತದಾರರ ಚೀಟಿ, ಆಧಾರ್ ಕಾರ್ಡ್ ಹೊಂದಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಪೊಲೀಸ್ ಠಾಣೆಯದ್ದೆ ಖಾಯಂ ವಿಳಾಸವಿದೆ. ಪೊಲೀಸರು ವಿಶೇಷ ಸಂದರ್ಭದಲ್ಲಿ ಈಕೆಗೆ ಹಣ ಕೊಡುತ್ತಾರೆ, ಮಾಡಿದ ಕೆಲಸಕ್ಕೆ ವೇತನವನ್ನು ನೀಡುತ್ತಾರೆ. ಈ ಎಲ್ಲಾ ಹಣವನ್ನು ದುಂದುವೆಚ್ಚ ಮಾಡದೇ ಬ್ಯಾಂಕ್ ಖಾತೆ ಜಮಾ ಮಾಡುತ್ತಾರೆ.
ಪೊಲೀಸ್ ಇಲಾಖೆಯ, ಸಿಬ್ಬಂದಿಗಳ ಮನೆಯಲ್ಲಿ ಕಾರ್ಯಕ್ರಮವಿದ್ದರೆ ಇವರಿಗೆ ಗೊತ್ತಾಗುತ್ತೆ. ಹೊಸ ಸೀರೆ ಎಲ್ಲಾ ಉಟ್ಟು ಇವರು ರೆಡಿಯಾಗುತ್ತಾರೆ. ಒಟ್ಟಿನಲ್ಲಿ ಹೊನ್ನಮ್ಮನಿಗೆ ಬಂದರು ಠಾಣೆಯೆ ಮನೆಯಾಗಿದ್ದು, ಭಾವನಾತ್ಮಕ ನಂಟು ಹೊಂದಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…