ಮಂಗಳೂರು : ಜನವರಿ 22ರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ರಾಜ್ಯದ ಎಲ್ಲಾ ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ ಅಭಿಯಾನ ಇಂದಿನಿಂದ ಜನವರಿ 15ರವರೆಗೆ ನಡೆಯಲಿದೆ ಎಂದು ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ಪೆಲ್ ಹೇಳಿದ್ದಾರೆ.
ಪ್ರತಿ ಮನೆ ಮನೆಗೆ ವಿತರಿಸಲ್ಪಡುವ ಮಂತ್ರಾಕ್ಷತೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಕುಟುಂಬದ ಸದಸ್ಯರೊಂದಿಗೆ ಸ್ವೀಕರಿಸಬೇಕು. ಮಂತ್ರಾಕ್ಷತೆಯೊಂದಿಗ ಶ್ರೀ ರಾಮ ದೇವರ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ಪತ್ರವನ್ನು ನೀಡಲಿದ್ದಾರೆ. ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರು ಕೂಡ ಹಣವನ್ನು ನೀಡಿವಂತಿಲ್ಲ. ಯಾವುದೇ ಹಣವನ್ನು ಅಥವಾ ಯಾವುದೇ ವಸ್ತು ರೂಪದಲ್ಲಿ ನೀಡಬಾರದು. ಇದೊಂದು ಅಭಿಯಾನವಾಗಿರುವ ಕಾರಣ ಯಾವುದೇ ರೀತಿಯ ವ್ರತಾಚಾರಣೆ ,ಕಟ್ಟು ಪಾಡು ,ನಿಯಮಗಳು ಇರುವುದಿಲ್ಲ. ಮತ್ತು ಜನವರಿ 22ರಂದು ದೇವಸ್ಥಾನ ಮಠ ಮಂದಿರಗಳಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಅಯೋದ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಾಣಪ್ರತಿಷ್ಠಗೊಳ್ಳುವ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ ಹವನ ಸತ್ಸಂಗ, ಭಜನೆ , ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ ಕೇಂದ್ರಗಳಲ್ಲಿ ನಡೆಯಲಿದೆ. ಆ ದಿನ ಸಂಜೆ ವೇಳೆ ಪ್ರತಿ ಮನೆಯಲ್ಲಿ ಕನಿಷ್ಠ 5 ದೀಪಗಳನ್ನು ಉರಿಸಿ ,ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಉತ್ತರದ ಕಡೆಗೆ ಮುಖ ಮಾಡಿ ಆರತಿ ಮಾಡಬೇಕು ಈ ಮೂಲಕ ಆ ದಿನವನ್ನು ಸಂಭ್ರಮಿಸಬೇಕೆಂದು ಟ್ರಸ್ಟ್ ಕರೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…